Sunday 17 July 2016

ಮ.ಪ್ರದೇಶದಲ್ಲಿ ದೇಶದಲ್ಲೇ ಮೊದಲ ಸಂತಸ ಇಲಾಖೆ



ಭೋಪಾಲ್: ದೇಶದಲ್ಲೇ ಮೊದಲನೆಯದು ಎಂಬ ಹೆಗ್ಗಳಿಕೆಯ ಸಂತಸ ಇಲಾಖೆಗೆ ಮಧ್ಯಪ್ರದೇಶ ಸರ್ಕಾರ ಶುಕ್ರವಾರ ಚಾಲನೆ ನೀಡಿದೆ. ಭೂತಾನ್, ಅಮೆರಿಕ ಮಾದರಿ ಯಲ್ಲಿ ಸಂತಸ ಖಾತೆಯನ್ನು ಆರಂಭಿಸಲಾಗಿದೆ. ಇದಕ್ಕೆ ಸಚಿವಾಲಯ ಇರುವುದಿಲ್ಲ. ಈ ಖಾತೆಯ ಮೂಲಕ ಆಧ್ಯಾತ್ಮಿಕ ಮತ್ತು ಜ್ಞಾನದ ಸಂತಸವನ್ನು ಅಳೆಯಲಿದ್ದೇವೆ ಎಂದು ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ. ಖಾತೆ ಆರಂಭ ಮಾಡಲು ಸಂಪುಟ ಅನುಮೋದನೆ ದೊರಕಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಅರುಣಾಚಲ ಸಿಎಂ ಆಗಿ ಪೆಮಾ ಖಂಡು ಪ್ರಮಾಣ ವಚನ




ಇಟಾನಗರ: ಶನಿವಾರ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದ ಪೆಮಾ ಖಂಡು ಭಾನುವಾರ ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.ಪೆಮಾ ಖಂಡು ಅವರೊಂದಿಗೆ ಉಪಮುಖ್ಯಮಂತ್ರಿಯಾಗಿ ಚೌನಾ ಮೇನ್ ಪ್ರಮಾಣ ವಚನ ಸ್ವೀಕರಿಸಿದರು.37 ವರ್ಷದ ಪೆಮಾ ಖಂಡು ದೇಶದ ಅತಿ ಕಿರಿಯ

ಇಂಡಸ್ ನೀರಿನ ಒಪ್ಪಂದ, ಹೇಗ್ ಕೋರ್ಟ್​ಗೆ ಪಾಕ್ ಮೇಲ್ಮನವಿ


  ನವದೆಹಲಿ: ಕೃಷ್ಣಗಂಗಾ ಮತ್ತು ರಟ್ಲೆ ಜಲವಿದ್ಯುತ್ ಯೋಜನೆಗಳ ಅನುಷ್ಠಾನ ಸಂಬಂಧ ಪಾಕಿಸ್ತಾನದೊಂದಿಗೆ ನಡೆದ 2 ದಿನಗಳ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಹೇಗ್​ನ ಶಾಶ್ವತ ಮಧ್ಯಸ್ಥಿಕೆಯ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.ಕೃಷ್ಣ ಗಂಗಾ ಮತ್ತು ರಟ್ಲೆ ಜಲವಿದ್ಯುತ್ ಯೋಜನೆಗಳ ಸಂಬಂಧ ಉಂಟಾಗಿರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಭಾರತದೊಂದಿಗೆ ಕಳೆದ ಎರಡೂವರೆ ವರ್ಷಗಳಿಂದ ನಡೆಸಿದ ಪ್ರಯತ್ನ ವಿಫಲವಾಗಿದೆ.

ಪುದುಚೇರಿಯಲ್ಲಿ ಸ್ವಚ್ಛತೆ ಕಾಪಾಡಲು ‘ಸ್ವಚ್ಛ ಬಾಲ ಸೇನೆ’ ಸ್ಥಾಪನೆ


 ಪುದುಚೇರಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನವನ್ನು ಯಶಸ್ವಿಯಾಗಿಸಲು ಪುದುಚೇರಿ ಸರ್ಕಾರ ವಿನೂತನ ಪ್ರಯತ್ನಕ್ಕೆ ಕೈಹಾಕಿದೆ. ಪುದುಚೇರಿಯಲ್ಲಿ ಗಲೀಜು ಮಾಡುವವರ ಮೇಲೆ ನಿಗಾ ವಹಿಸಲು ‘ಸ್ವಚ್ಛ ಬಾಲ ಸೇನೆ’ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.ರಾಜ್ಯದಲ್ಲಿ ‘ಸ್ವಚ್ಛ ಬಾಲ ಸೇನೆ’ ಸ್ಥಾಪಿಸಲಾಗುವುದು, ಇದರಲ್ಲಿರುವ ಮಕ್ಕಳಿಗೆ ಹಳದಿ ಬಣ್ಣದ ವಿಷಲ್ ನೀಡಲಾಗುವುದು. ಈ ಮಕ್ಕಳು ರಸ್ತೆ ಬದಿಯಲ್ಲಿ ಮತ್ತು ಚರಂಡಿಗಳಿಗೆ ಕಸ

ಗುಜರಾತ್​ನಲ್ಲಿ 4.7 ತೀವ್ರತೆಯ ಲಘು ಭೂಕಂಪ

 ನವದೆಹಲಿ: ದಕ್ಷಿಣ ಗುಜರಾತ್ ಸೇರಿದಂತೆ ಹಲವು ಭಾಗಗಳಲ್ಲಿ ಲಘು ಭೂಕಂಪ ಸಂಭವಿಸಿದ್ದು, ಅದೃಷ್ಟವಶಾತ್ ಇಲ್ಲಿಯವರೆಗೆ ಯಾವುದೇ ಸಾವುನೋವಿನ ವರದಿಯಾಗಿಲ್ಲ.ಭಾನುವಾರ ಮುಂಜಾನೆ 9.24ರ ಸಮಯದಲ್ಲಿ ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆಯ ಭೂಕಂಪ ದಾಖಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಸೂರತ್​ನಿಂದ 14 ಕಿ.ಮೀ

ಜಪಾನ್​ನಲ್ಲಿ 5 ಪಾಯಿಂಟ್ ತೀವ್ರತೆಯ ಭೂಕಂಪ


ಟೋಕಿಯೊ: ಜಪಾನ್​ನ ಇಬಾರಕಿ ಪ್ರದೇಶದಲ್ಲಿ ಭಾನುವಾರ ರಿಕ್ಟರ್ ಮಾಪಕದಲ್ಲಿ 5 ಪಾಯಿಂಟ್ ತೀವ್ರತೆಯ ಭೂಕಂಪ ಸಂಭವಿಸಿದೆ.ಜಪಾನ್ ಹವಾಮಾನ ಸಂಸ್ಥೆಯ ವರದಿ ಪ್ರಕಾರ ಇಬಾರಕಿಯಲ್ಲಿ ಕೇಂದ್ರ ಬಿಂದುವನ್ನು ಹೊಂದಿದ್ದ ಭೂಕಂಪವು ಟೋಕಿಯೋದ ಈಶಾನ್ಯ ಭಾಗ ಮತ್ತು ಫೆಸಿಫಿಕ್ ಸಾಗರದ ಅಂಚಿನವರೆಗೂ ಭೂಮಿಯನ್ನು ನಡುಗಿಸಿದೆ ಎಂದು

ನಳಂದಾ ವಿಶ್ವವಿದ್ಯಾಲಯದ ಮುಡಿಗೆ ಯುನೆಸ್ಕೋ ಗರಿ


 ಇಸ್ತಾಂಬುಲ್: ನಳಂದಾ ವಿಶ್ವವಿದ್ಯಾಲಯ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿದೆ.
ಇಸ್ತಾಂಬುಲ್​ನಲ್ಲಿ ನಡೆದ ಯುನೆಸ್ಕೋದ 40ನೇ ಅಧಿವೇಶನದಲ್ಲಿ ಬಿಹಾರದ ನಳಂದಾ ಮಹಾವಿಹಾರ ಸೇರಿದಂತೆ ವಿಶ್ವದ ಒಟ್ಟು 9 ಹೊಸ ತಾಣಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಒಪ್ಪಿಗೆ ನೀಡಲಾಗಿದೆ. ಈ ವರ್ಷ ಒಟ್ಟು 27ನಾಮ ನಿರ್ದೇಶನಗಳು ಬಂದಿದ್ದು ಅವುಗಳಿಂದ ಭಾರತದ, ಚೀನಾ,ಇರಾನ್, ಮೈಕ್ರೋನೇಶ್ಯಾ, ಸ್ಪೈನ್, ಗ್ರೀಸ್, ಟರ್ಕಿ,

ಸ್ತ್ರೀಯರಿಗೆ ಒತ್ತಡ ಪರಿಣಾಮ ಕಡಿಮೆ


ಲಾಸ್​ಏಂಜಲೀಸ್: ಜೀವನವೆಂದ ಮೇಲೆ ಒತ್ತಡವಿದ್ದದ್ದೇ. ಆದರೆ ಒತ್ತಡವು ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಭಿನ್ನವಾಗಿರುತ್ತದೆ, ಅದಕ್ಕೆ ಮಿದುಳು ಭಿನ್ನ ಪ್ರತಿಕ್ರಿಯೆ ನೀಡುತ್ತದೆ ಎಂದು ನೂತನ ಸಂಶೋಧನೆ ತಿಳಿಸಿದೆ. ಒತ್ತಡಕ್ಕೆ ಮಿದುಳು ನೀಡುವ ಪ್ರತಿಕ್ರಿಯೆಯಲ್ಲಿ ಪುರುಷರ ಮತ್ತು ಮಹಿಳೆಯರ ಹೃದಯ ಬಡಿತ, ರಕ್ತದೊತ್ತಡ ಕೂಡಾ ಭಿನ್ನವಾಗಿರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಎಂಆರ್​ಐ ಎಂಬ ಉಪಕರಣ ಬಳಸಿ ಮಿದುಳಿನ ಕಾರ್ಯಚಟುವಟಿಕೆಯನ್ನು ಅಧ್ಯಯನ ಮಾಡಿದ್ದು,

ದೇಹಬಲದಿಂದಲೇ ಪ್ರವಾಹ ತಡೆದ ಚೀನಾ ಸೈನಿಕರು!


 ಬೀಜಿಂಗ್: ಪುರಾಣದಲ್ಲಿ ಶಿವನು ಸಹಸ್ರಬಾಹುವಾಗಿ ಹರಿಯುವ ನದಿಗೆ ತನ್ನ ಕೈಗಳನ್ನು ಬಳಸಿ ತಡೆಯೊಡ್ಡಿದ್ದ ಎಂಬ ವಿಚಾರವನ್ನು ನಾವು ಕೇಳಿದ್ದೇವೆ. ಇದೀಗ ಚೀನಾದ ಸೈನಿಕರು ಕೂಡಾ ಪ್ರವಾಹಕ್ಕೆ ತಮ್ಮ ದೇಹವನ್ನೇ ಒಡ್ಡಿ ಸಾವಿರಾರು ಜನರು ಮತ್ತು ಬೆಳೆಯನ್ನು ರಕ್ಷಿಸಿದ್ದಾರೆ. ಆಗ್ನೇಯ ಚೀನಾದ ಜಿಯುಜಿಯಾಂಗ್ ಪ್ರಾಂತ್ಯದಲ್ಲಿ ಬೊಯಾಂಗ್ ಲೇಕ್​ನ ಅಣೆಕಟ್ಟಿನ ಪ್ರವಾಹದಿಂದ ಏಕಾಏಕಿ ಉಕ್ಕಿ ಹರಿದ ನೀರಿಗೆ 16 ಸೈನಿಕರು ತಮ್ಮ ದೇಹವನ್ನೇ ಒಡ್ಡಿ, ಕಾಲುವೆಯಲ್ಲಿ ನೀರು

ಚೀನಾದಿಂದ ಜಗತ್ತಿನ ವೇಗದ ಬುಲೆಟ್ ರೈಲುಗಳು


 ಬೀಜಿಂಗ್: ಗಂಟೆಗೆ 420 ಕಿ ಮೀ ವೇಗ ಕ್ರಮಿಸಬಲ್ಲ ಸಾಮರ್ಥ್ಯದ ಜಗತ್ತಿನ ಅತಿವೇಗದ ಬುಲೆಟ್ ರೈಲುಗಳನ್ನು ಅಭಿವೃದ್ಧಿಪಡಿಸಿರುವ ಚೀನಾ ಅವುಗಳ ಪರೀಕ್ಷಾರ್ಥ ಪ್ರಯೋಗವನ್ನು ಎರಡು ಬದಿಯಿಂದ ಯಶಸ್ವಿಯಾಗಿ ನಡೆಸಿತು.ಗೋಲ್ಡನ್ ಫೀನಿಕ್ಸ್ ಮತ್ತು ಡಾಲ್ಪಿನ್ ಬ್ಲೂ ಎಂಬ ಹೆಸರಿನ ಎರಡು ರೈಲುಗಳು ಜಿಂಗಜುವಾ ಮಧ್ಯ ಹೆನಾನ್ ಪ್ರಾಂತ್ಯದಿಂದ ಹಾಗೂ

ಕೃತಕ ಸಕ್ಕರೆಯಿಂದ ಹಸಿವು ಹೆಚ್ಚಳ


 ಮೆಲ್ಬೋರ್ನ್: ಕೃತಕ ಸಕ್ಕರೆ ಬಳಸಿ ತಯಾರಿಸುವ ತಿನಿಸಿನಿಂದ ಹಸಿವು ಹೆಚ್ಚಳವಾಗುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಪ್ರಾಣಿಗಳ ಮೇಲೆ ಈ ಕುರಿತು ಸಂಶೋಧನೆ ನಡೆದಿದ್ದು, ಇದರಿಂದ ಹೆಚ್ಚಿನ ಪ್ರಮಾಣದ ಕ್ಯಾಲೊರಿ ದೇಹದಲ್ಲಿ ಸೇರುವುದರಿಂದ ಬೊಜ್ಜಿನ ಸಮಸ್ಯೆ ಜನರನ್ನು ಬಾಧಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ಕೆಲವರು ಕೃತಕ ಸಕ್ಕರೆಯ ಸಿಹಿತಿನಿಸನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಆ ತಿನಿಸಿನಲ್ಲಿ ಹಸಿವು ಹೆಚ್ಚಳಕ್ಕೆ ಕಾರಣವಾಗುವ ಅಂಶಗಳಿರುತ್ತವೆ.

ಉಗ್ರರ ಅಡಗುತಾಣ ನಿರ್ಮೂಲನೆಗೆ ಪಾಕ್​ಗೆ ಅಮೆರಿಕ ಸೂಚನೆ



ವಾಷಿಂಗ್ಟನ್: ಪಾಕಿಸ್ತಾನದಲ್ಲಿರುವ ಎಲ್ಲಾ ಉಗ್ರ ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ಉಗ್ರರ ಅಡಗುತಾಣಗಳನ್ನು ಶೋಧಿಸಿ ಅವುಗಳನ್ನು ನಿರ್ಮೂಲನೆ ಮಾಡಬೇಕು ಎಂದು ಅಮೆರಿಕ ಪಾಕಿಸ್ತಾನಕ್ಕೆ ಸೂಚನೆ ನೀಡಿದೆ.ನೆರೆಹೊರೆಯ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ಉಗ್ರ ಸಂಘಟನೆಗಳು ಸೇರಿದಂತೆ ಎಲ್ಲಾ ಉಗ್ರ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಕ್ರಮ ತೆಗೆದುಕೊಳ್ಳಬೇಕು. ಉಗ್ರ ನಿಗ್ರಹಕ್ಕೆ ಸಂಬಂಧಿಸಿದಂತೆ ಅಮೆರಿಕ

ವಿಜೇಂದರ್​ಗೆ ಏಷ್ಯನ್ ಬೆಲ್ಟ್, ವೃತ್ತಿ ಪರ ಬಾಕ್ಸಿಂಗ್​ನಲ್ಲಿ ಮೊದಲ ಪ್ರಶಸ್ತಿ


ನವದೆಹಲಿ: ವೃತ್ತಿಪರ ಬಾಕ್ಸಿಂಗ್​ನಲ್ಲಿ ಹೊಸ ಶಿಖರವೇರಿದ ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ವರ್ಲ್ಡ್ ಬಾಕ್ಸಿಂಗ್ ಅಸೋಸಿಯೇಷನ್​ನ (ಡಬ್ಲ್ಯುಬಿಒ)ಏಷ್ಯಾ ಪೆಸಿಪಿಕ್ ಸೂಪರ್ ಮಿಡಲ್​ವೇಟ್ ಪ್ರಶಸ್ತಿ ಜಯಿಸಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ಮಾಜಿ ಡಬ್ಲ್ಯುಬಿಸಿ ಯುರೋಪಿಯನ್ ಚಾಂಪಿಯನ್ ಆಸ್ಟ್ರೇಲಿಯಾದ ಕೆರ್ರಿ ಹೋಪ್​ರನ್ನು ಸೋಲಿಸಿ ವೃತ್ತಿ ಪರ ಬಾಕ್ಸಿಂಗ್​ನಲ್ಲಿ ತಮ್ಮ ಮೊದಲ ಪ್ರಶಸ್ತಿ ಗೆದ್ದರು.ತ್ಯಾಗರಾಜ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವಿಜೇಂದರ್ ಕೆರ್ರಿ

ಸಾನಿಯಾ ಆತ್ಮಚರಿತ್ರೆ ಬಿಡುಗಡೆ



ಹೈದರಾಬಾದ್: ಟೆನಿಸ್ ತಾರೆ ಸಾನಿಯಾ ಮಿರ್ಜಾ ಆತ್ಮಚರಿತ್ರೆ ಏಸ್ ಅಗೇನ್​ಸ್ ಆಡ್ಸ್ ಪುಸ್ತಕವನ್ನು ಬಾಲಿವುಡ್ ನಟ ಶಾರುಖ್ ಖಾನ್ ಬುಧವಾರ ಬಿಡುಗಡೆಗೊಳಿಸಿದರು. ಖಾಸಗಿ ಹೋಟೆಲ್​ನಲ್ಲಿ ನಡೆದ ಸಮಾರಂಭದಲ್ಲಿ ಸಾನಿಯಾ ಕುಟುಂಬದ ಎಲ್ಲರೂ ಭಾಗವಹಿಸಿದ್ದರೂ, ಪತಿ ಶೋಯೆಬ್ ಮಲಿಕ್ ಮಾತ್ರ ಹಾಜರಿರಲಿಲ್ಲ.

ರಿಯೋಗೆ ಭಾರತ ಹಾಕಿ ತಂಡ ಪ್ರಕಟ; ಶ್ರೀಜೇಶ್, ಸುಶೀಲಾ ಕ್ಯಾಪ್ಟನ್


ನವದೆಹಲಿ: ಖ್ಯಾತ ಮಿಡ್​ಫೀಲ್ಡರ್ ಮತ್ತು ದೀರ್ಘಕಾಲ ನಾಯಕಿಯಾಗಿ ಗುರುತಿಸಿಕೊಂಡಿದ್ದ್ದ ರಿತು ರಾಣಿ ಅವರನ್ನು ಮುಂಬರುವ ರಿಯೋ ಒಲಿಂಪಿಕ್ಸ್​ಗಾಗಿ ಆಯ್ಕೆಯಾಗಿರುವ ಭಾರತೀಯ ಮಹಿಳಾ ಹಾಕಿ ತಂಡದಿಂದ ಮಂಗಳವಾರ ಕೈಬಿಡಲಾಗಿದ್ದು, ಸುಶೀಲಾ ಚಾನು ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ. ಅಂತೆಯೇ ಪುರುಷರ ತಂಡದ ನಾಯಕನನ್ನಾಗಿ ಸರ್ದಾರ್ ಸಿಂಗ್ ಬದಲು ಪಿ.ಆರ್.ಶ್ರೀಜೇಶ್ ಅವರನ್ನು ಆಯ್ಕೆ ಮಾಡಲಾಗಿದೆ.ರಿತು ಅವರು ಕಳೆದ

Wednesday 13 July 2016

Exam-Oriented-Current-Affairs-Dated-13-07-2016-www.KICAonline.com-kannada

ಬೆಂಗಳೂರು: ಕೃಷಿ ತಂತ್ರಜ್ಞಾನದ ಬಗ್ಗೆ ಪ್ರಸಕ್ತ ವರ್ಷ 10,300 ರೈತರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ. ವಿಧಾನ ಪರಿಷತ್ತಿನಲ್ಲಿ ಸದಸ್ಯ ಬಸನಗೌಡ ಆರ್‌. ಪಾಟೀಲ್‌ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಕೃಷಿ ಸಚಿವ ಕೃಷ್ಣ ಬೈರೇಗೌಡ ಉತ್ತರಿಸಿದ್ದಾರೆ.ನೂತನ ಕೃಷಿ ತಂತ್ರಜ್ಞಾನಗಳ ಬಗ್ಗೆ ಕೃಷಿ ಇಲಾಖೆಯಿಂದ ತರಬೇತಿ, ಪ್ರವಾಸ, ಕೃಷಿ ಅಭಿಯಾನ, ಪ್ರಾತ್ಯಕ್ಷಿಕೆಗಳು, ಕೃಷಿ ಮೇಳ ಮುಖಾಂತರ ರೈತರಿಗೆ ಮಾಹಿತಿ ತಲುಪಿಸಲಾಗುತ್ತದೆ. ಭೂ ಸಮೃದ್ಧಿ ಯೋಜನೆಯಡಿ ಕಳೆದ

ಕೃಷಿ ತಂತ್ರಜ್ಞಾನಗಳ ಬಗ್ಗೆ 10 ಸಾವಿರ ರೈತರಿಗೆ ತರಬೇತಿ


ಬೆಂಗಳೂರು: ಕೃಷಿ ತಂತ್ರಜ್ಞಾನದ ಬಗ್ಗೆ ಪ್ರಸಕ್ತ ವರ್ಷ 10,300 ರೈತರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ. ವಿಧಾನ ಪರಿಷತ್ತಿನಲ್ಲಿ ಸದಸ್ಯ ಬಸನಗೌಡ ಆರ್‌. ಪಾಟೀಲ್‌ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಕೃಷಿ ಸಚಿವ ಕೃಷ್ಣ ಬೈರೇಗೌಡ ಉತ್ತರಿಸಿದ್ದಾರೆ.ನೂತನ ಕೃಷಿ ತಂತ್ರಜ್ಞಾನಗಳ ಬಗ್ಗೆ ಕೃಷಿ ಇಲಾಖೆಯಿಂದ ತರಬೇತಿ, ಪ್ರವಾಸ, ಕೃಷಿ ಅಭಿಯಾನ, ಪ್ರಾತ್ಯಕ್ಷಿಕೆಗಳು, ಕೃಷಿ ಮೇಳ ಮುಖಾಂತರ ರೈತರಿಗೆ ಮಾಹಿತಿ ತಲುಪಿಸಲಾಗುತ್ತದೆ. ಭೂ ಸಮೃದ್ಧಿ ಯೋಜನೆಯಡಿ ಕಳೆದ

400 ಮೆ.ವಾ. ಚಾವಣಿ ಸೌರವಿದ್ಯುತ್


ಬೆಂಗಳೂರು: ಚಾವಣಿ ಸೌರವಿದ್ಯುತ್‌ ಯೋಜನೆಯಡಿ 2018ರೊಳಗೆ 400 ಮೆಗಾವಾಟ್‌ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ವಿಧಾನ ಪರಿಷತ್ತಿನಲ್ಲಿ ಸದಸ್ಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಲಿಖಿತ ಉತ್ತರ ನೀಡಿದ್ದಾರೆ.ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಚಿವಾಲಯದಿಂದ ಎಲ್ಲ ಸರ್ಕಾರಿ ಮತ್ತು ಅರೆ ಸರ್ಕಾರಿ ಕಟ್ಟಡಗಳ ಮೇಲೆ ಸೌರಶಕ್ತಿ ಚಾವಣಿ ಘಟಕಗಳನ್ನು

ತೀರ್ಪಿನ ವಿರುದ್ಧ ಶ್ವೇತಪತ್ರ ಹೊರಡಿಸಿದ ಚೀನಾ



ಬೀಜಿಂಗ್ (ಪಿಟಿಐ): ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿ ನೀಡಿರುವ ತೀರ್ಪು ಅಲ್ಲಗಳೆದಿರುವ ಚೀನಾ, ತೀರ್ಪಿನ ವಿರುದ್ಧ ಶ್ವೇತಪತ್ರ ಹೊರಡಿಸಿದೆ.ದಕ್ಷಿಣ ಚೀನಾ ಸಮುದ್ರದ ಮೇಲಿನ ಚೀನಾದ ಹಕ್ಕು ಪ್ರತಿಪಾದನೆಗೆ ಕಾನೂನಿನ ಮಾನ್ಯತೆ ಇಲ್ಲ ಎಂದು ನ್ಯಾಯಮಂಡಳಿಯು ಮಂಗಳವಾರ ತೀರ್ಪು ನೀಡಿದೆ.ಚೀನಾ ಫಿಲಿಪ್ಪೀನ್ಸ್‌ನ ಸಾರ್ವಭೌಮ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿದ್ದು, ಸಮುದ್ರದಲ್ಲಿ ಕೃತಕ ದ್ವೀಪಗಳನ್ನು ನಿರ್ಮಿಸುವ

ಟೆಸ್ಟ್‌ ಕ್ರಿಕೆಟ್‌ಗೆ ಟೇಲರ್‌ ವಿದಾಯ


ಕಿಂಗ್ಸ್‌ಟನ್‌ (ಪಿಟಿಐ):  ವೆಸ್ಟ್‌ ಇಂಡೀಸ್‌ ತಂಡದ ವೇಗಿ ಜೆರೋಮ್‌ ಟೇಲರ್‌ ಅವರು ಮಂಗಳವಾರ ಟೆಸ್ಟ್‌ ಕ್ರಿಕೆಟ್‌ ಬದುಕಿಗೆ ವಿದಾಯ ಹೇಳಿದ್ದಾರೆ. ಆದರೆ ಸೀಮಿತ ಓವರ್‌ಗಳ ಮಾದರಿ ಯಲ್ಲಿ ಅವರು ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.32 ವರ್ಷದ ಟೇಲರ್‌ ಅವರು 46 ಟೆಸ್ಟ್‌ ಪಂದ್ಯಗಳನ್ನಾಡಿದ್ದು 130 ವಿಕೆಟ್‌ ಉರುಳಿಸಿದ್ದಾರೆ. 2003ರಲ್ಲಿ ಶ್ರೀಲಂಕಾ ವಿರುದ್ಧ ಆಡುವ

ಬ್ಯಾಂಕ್‌ ವಹಿವಾಟು ನಡೆಸುವ ಕಿರಾಣಿ ಅಂಗಡಿ


 -ನನಗೆ ತುರ್ತಾಗಿ ಹಣ ಬೇಕಾಗಿದೆ. ಹೆಂಡತಿಯನ್ನು ಹೆರಿಗೆ ಆಸ್ಪತ್ರೆಗೆ ಸೇರಿಸಿದ್ದೇನೆ. ಆಸ್ಪತ್ರೆಯವರು ಹಣ ಕೇಳುತ್ತಿದ್ದಾರೆ. ಹೇಗಾದರೂ ಹಣ ಹೊಂದಿಸಿ’ ಎನ್ನುವ ಮೊಬೈಲ್‌ ಕರೆಯೊಂದು  ಮಧ್ಯರಾತ್ರಿ 12 ಗಂಟೆ ಸುಮಾರಿಗೆ   ಬರುತ್ತಿದ್ದಂತೆ, ‘ಆಯ್ತು, ಚಿಂತಿತರಾಗಬೇಡಿ. ಮೊಬೈಲ್‌, ಆಧಾರ್‌ ಸ್ಕ್ಯಾನರ್‌ (ಬಯೊಮೆಟ್ರಿಕ್ಸ್‌ ಸಾಧನ) ಮತ್ತು  ನಗದು ತೆಗೆದುಕೊಂಡು ಆಸ್ಪತ್ರೆಗೇ

ಅರುಣಾಚಲ: ಕಾಂಗ್ರೆಸ್‌ ಆಳ್ವಿಕೆ ಪುನರ್‌ಸ್ಥಾಪಿಸಿದ ಸುಪ್ರೀಂ ಕೋರ್ಟ್‌


ಹೊಸದಿಲ್ಲಿ : ಕೇಂದ್ರ ಸರಕಾರಕ್ಕೆ ಭಾರೀ ದೊಡ್ಡ ಹಿನ್ನಡೆ ಎನಿಸುವ ರೀತಿಯಲ್ಲಿ ಸುಪ್ರೀಂ ಕೋರ್ಟ್‌ ಇಂದು ಬುಧವಾರ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಅರುಣಾಚಲ ಪ್ರದೇಶದಲ್ಲಿನ ಕಾಂಗ್ರೆಸ್‌ ಸರಕಾರದ ಪತನಕ್ಕೆ ಕಾರಣವಾಗುವಂತೆ ರಾಜ್ಯಪಾಲ ಜ್ಯೋತಿ ರಾಜಖೋವಾ ಅವರು ಹೊರಡಿಸಿದ್ದ ಎಲ್ಲ ಆದೇಶಗಳನ್ನು ರದ್ದುಪಡಿಸಿ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಸರಕಾರವನ್ನು ಪುನರ್‌

31ಕ್ಕೆ ಧಾರವಾಡ ಐಐಟಿ ಉದ್ಘಾಟನೆ, ಆ.1ರಿಂದ ತರಗತಿಗಳು ಆರಂಭ

  
ಧಾರವಾಡ: ರಾಜ್ಯದ ಮೊದಲ ಐಐಟಿಯು ಜು.31ಕ್ಕೆ ಉದ್ಘಾಟನೆಗೊಳ್ಳಲಿದ್ದು, ಆಗಸ್ಟ್‌ 1ರಿಂದ ತರಗತಿಗಳು ಆರಂಭವಾಗಲಿವೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್‌ ಐಐಟಿಗೆ ಚಾಲನೆ ನೀಡಲಿದ್ದಾರೆ.ಧಾರವಾಡ ಹೈಕೋರ್ಟ್‌ ಸಮೀಪದಲ್ಲಿರುವ ವಾಲಿ¾ ಕಟ್ಟಡದಲ್ಲಿ ತಾತ್ಕಾಲಿಕ ಕ್ಯಾಂಪಸ್‌ ಕಾರ್ಯನಿರ್ವಹಿಸಲಿದೆ. ಆರಂಭದಲ್ಲಿ

ಕೇಂದ್ರ ಸಚಿವರಾದ ಸಿದ್ದೇಶ್ವರ, ನಜ್ಮಾ ರಾಜೀನಾಮೆ


ನವದೆಹಲಿ: ಸಂಪುಟ ಪುನಾರಚನೆಯಾದ ಒಂದೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಂತ್ರಿಮಂಡಲದಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಿದ್ದಾರೆ. ಅಲ್ಪಸಂಖ್ಯಾತ ವ್ಯವಹಾರಗಳ ಹೊಣೆ ಹೊತ್ತಿದ್ದ ಹಿರಿಯ ಸಚಿವೆ ನಜ್ಮಾ ಹೆಪು¤ಲ್ಲಾ ಮತ್ತು ಕರ್ನಾಟಕದ ದಾವಣಗೆರೆ ಸಂಸದರಾದ ಭಾರಿ ಕೈಗಾರಿಕಾ ಖಾತೆ ರಾಜ್ಯ ಮಂತ್ರಿ ಜಿ.ಎಂ. ಸಿದ್ದೇಶ್ವರ

ಇನ್ನು ಮಾಲ್‌,ಥಿಯೇಟರ್, ಮಳಿಗೆಗಳು 24 x 7 ಓಪನ್‌; ಕೇಂದ್ರ ಕಾಯಿದೆ


 ಹೊಸದಿಲ್ಲಿ : ಕೇಂದ್ರ ಸಚಿವ ಸಂಪುಟ ಇಂದು ಬುಧವಾರ ಮಾದರಿ ಮಳಿಗೆ ಮತ್ತು ಸಂಸ್ಥೆ ಕಾಯಿದೆಗೆ ಅನುಮೋದನೆ ನೀಡಿದೆ. ಇದರ ಪರಿಣಾವಾಗಿ ಇನ್ನು  ಮಳಿಗೆಗಳು, ಚಿಲ್ಲರೆ ವ್ಯವಹಾರದ ಅಂಗಡಿಗಳು, ಮಾಲ್‌ಗ‌ಳು ವಾರದ ಏಳು ದಿನವೂ, ದಿನದ 24 ತಾಸುಗಳ ಕಾಲವೂ ತೆರೆದುಕೊಂಡಿರಬಹುದಾಗಿದೆ.ಈ ಮಾದರಿ ಕಾಯಿದೆಯಿಂದಾಗಿ ದೇಶಾದ್ಯಂತ ಎಲ್ಲ ರಾಜ್ಯಗಳಲ್ಲಿನ್ನು ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಏಕರೂಪದ ನೀತಿ - ನಿಮಯಗಳನ್ನು ಜಾರಿಗೆ ತರಬಹುದಾಗಿದೆ. ಈಗ ವಾಣಿಜ್ಯ

ರಾಷ್ಟ್ರೀಯ ಮೇಲ್ಮನವಿ ನ್ಯಾಯಾಲಯ, ಸಂವಿಧಾನ ಪೀಠಕ್ಕೆ


ನವದೆಹಲಿ: ರಾಷ್ಟ್ರೀಯ ಮೇಲ್ಮನವಿ ನ್ಯಾಯಾಲಯ (ನ್ಯಾಷನಲ್ ಕೋರ್ಟ್ ಆಫ್ ಅಪೀಲ್) ಸ್ಥಾಪನೆ ಸಂಬಂಧ ಸಲ್ಲಿಸಲಾದ ಮನವಿಯನ್ನು ಸುಪ್ರೀಂಕೋರ್ಟ್ ಬುಧವಾರ ಸಂವಿಧಾನ ಪೀಠಕ್ಕೆ ಒಪ್ಪಿಸಿತು.ಪ್ರಮುಖ ನಗರಗಳ ಪ್ರಾದೇಶಿಕ ಪೀಠಗಳ ಜೊತೆಗೆ ರಾಷ್ಟ್ರೀಯ ಮೇಲ್ಮನವಿ ನ್ಯಾಯಾಲಯ ಸ್ಥಾಪಿಸಲು ಕೋರಿದ ಮನವಿಯನ್ನು ಕೇಂದ್ರ ಸರ್ಕಾರವು ಪ್ರಬಲವಾಗಿ ವಿರೋಧಿಸಿತ್ತು. ‘ಇದು ಫಲರಹಿತ ಪ್ರಯತ್ನ’, ವಿಚಾರಣಾ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ 2 ಕೋಟಿ ಪ್ರಕರಣಗಳ

ಪಾಕ್​ಗೆ ಧನಸಹಾಯ ಕಡಿತ, ಅಮೆರಿಕದಲ್ಲಿ ಹೆಚ್ಚಿದ ಒತ್ತಡ



ವಾಷಿಂಗ್ಟನ್: ಭಯೊತ್ಪಾದನೆ ವಿರುದ್ಧ ಹೋರಾಟ ನಡೆಸುವುದಾಗಿ ಅಮೆರಿಕದಿಂದ ಆರ್ಥಿಕ ಸಹಾಯ ಪಡೆದು ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಆರೋಪ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಧನ ಸಹಾಯ ಕಡಿತ ಮಾಡಬೇಕೆಂದು ಅಮೆರಿಕದಲ್ಲಿ ಒತ್ತಡ ಹೆಚ್ಚುತ್ತಿದೆ.ಭಯೋತ್ಪಾದನೆ ವಿರುದ್ಧ ಪಾಕಿಸ್ತಾನದ ಧೋರಣೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಸಹನೆ ಕಡಿಮೆಯಾಗುತ್ತಿದೆ. ಪಾಕಿಸ್ತಾನಕ್ಕೆ ಧನಸಹಾಯ ಕಡಿತಗೊಳಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಪಾಕ್

ಮಹದಾಯಿ ಜಲವಿವಾದ ಜು.14ಕ್ಕೆ ವಿಚಾರಣೆ



ನವದೆಹಲಿ: ಮಹದಾಯಿ ಜಲವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಒಂದು ವಾರ ಮುಂದೂಡಬೇಕು ಎಂಬ ಗೋವಾ ಬೇಡಿಕೆಗೆ ನ್ಯಾಯಾಧಿಕರಣದ ನ್ಯಾ. ಜೆ.ಎಸ್. ಪಾಂಚಾಲ್ ನೇತೃತ್ವದ ತ್ರಿಸದಸ್ಯ ಪೀಠ ಅಸಮಾಧಾನ ವ್ಯಕ್ತಪಡಿಸಿದ್ದು, ನಾವು ವಿಚಾರಣೆ ಮುಂದೂಡಲೇ ಇಲ್ಲಿ ಕುಳಿತಿದ್ದೇವೆ ಎಂದು ನೀವು ಭಾವಿಸಿದಂತಿದೆ ಎಂದು ಕಟುವಾಗಿ

ಭಾರತದ ಮೂಲಸವಲತ್ತು ಕ್ಷೇತ್ರ, ಬಂಡವಾಳ ಹೂಡಿಕೆಗೆ ಗಡ್ಕರಿ ಆಹ್ವಾನ


ವಾಷಿಂಗ್ಟನ್: ಭಾರತದ ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಕ್ಕೆ ಸಹಸ್ರ ಕೋಟಿ ರೂ. ಬಂಡವಾಳದ ಅಗತ್ಯವಿದ್ದು, ಉದ್ಯಮಿಗಳು ಹೂಡಿಕೆ ಮಾಡಲು ಇದು ಸುವರ್ಣ ಅವಕಾಶ ಎಂದು ಸಾರಿಗೆ, ಹೆದ್ದಾರಿ ಮತ್ತು ಜಲಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ
ಅಮೆರಿಕ-ಭಾರತ ವಹಿವಾಟು ಮಂಡಳಿ (ಯುಎಸ್​ಐಬಿಎಸ್) ಸಭೆಯಲ್ಲಿ ಮಾತನಾಡಿದ ಅವರು, ಅಮೆರಿಕದ ಉದ್ಯಮಿಗಳಿಗೆ

ಭಾರತ ಸರ್ಕಾರದಿಂದ 5.6 ಬಿಲಿಯನ್ ಡಾಲರ್ ಪರಿಹಾರ ಕೋರಿಕೆ


ನವದೆಹಲಿ: ಪೂರ್ವಾನ್ವಯವಾಗಿ ತೆರಿಗೆ ವಸೂಲಿಗಾಗಿ ಭಾರತ ಸರ್ಕಾರದಿಂದ 5.6 ಬಿಲಿಯನ್ (560 ಕೋಟಿ) (ಅಂದರೆ 37,615 ಕೋಟಿ ರೂಪಾಯಿಗಳು) ಅಮೆರಿಕನ್ ಡಾಲರ್​ಪರಿಹಾರವನ್ನು ಇಂಗ್ಲೆಂಡಿನ ಕೈರ್ನ್ ಎನರ್ಜಿ ಕೋರಿದೆ.ಪೂರ್ವಾನ್ವಯ ತೆರಿಗೆ ಕಾನೂನನ್ನು ಬಳಸಿ ತನ್ನ ಮೇಲೆ 10,247 ಕೋಟಿ ರೂಪಾಯಿ ತೆರಿಗೆಯನ್ನು

ತೆಲಂಗಾಣದ ವಿದೇಶಾಂಗ ಸಚಿವರಾಗಿ ಸಿಎಂ ಪುತ್ರ



ಹೈದರಾಬಾದ್: ತೆಲಂಗಾಣ ರಾಜ್ಯದ ವಿದೇಶಾಂಗ ಸಚಿವರನ್ನಾಗಿ ಮಗ ತಾರಕರಾಮ ರಾವ್​ರನ್ನು ನೇಮಕ ಮಾಡಲು ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ನಿರ್ಧರಿಸಿದ್ದಾರೆ.ವಿದೇಶಗಳ ಜತೆ ರಾಜ್ಯದ ಸಂಬಂಧ ವೃದ್ಧಿಸುವುದು ಹಾಗೂ ಎನ್​ಆರ್​ಐ ವ್ಯವಹಾರಗಳ ಬಗ್ಗೆ ಮೇಲ್ವಿಚಾರಣೆಗೆ ದೇಶದಲ್ಲಿ ಇದೇ ಮೊದಲ ಬಾರಿಗೆ ರಾಜ್ಯವೊಂದು ವಿದೇಶಾಂಗ ಸಚಿವಾಲಯ ಹೊಂದಲಿದೆ. ರಾಮ್ ರಾವ್ ಈಗಾಗಲೇ ಐಟಿ, ಕೈಗಾರಿಕೆ ಮತ್ತು ವಾಣಿಜ್ಯ, ಮುನ್ಸಿಪಲ್ ಆಡಳಿತ ಮತ್ತು ಗ್ರಾಮೀಣ ಅಭಿವೃದ್ಧಿ

20 ಲಕ್ಷ ಭಾರತೀಯರಿಗೆ ಗೂಗಲ್ ಮೊಬೈಲ್ ತರಬೇತಿ ಶಿಬಿರ


ನವದೆಹಲಿ: ತಂತ್ರಜ್ಞಾನ ದಿಗ್ಗಜ ಗೂಗಲ್​ನಿಂದ 20 ಲಕ್ಷ ಭಾರತೀಯ ಪ್ರತಿಭೆಗಳಿಗೆ ಮೊಬೈಲ್ ಅಭಿವೃದ್ಧಿ ಕಾರ್ಯಕ್ರಮವಾದ ‘ಆಂಡ್ರಾಯ್್ಡ ನೈಪುಣ್ಯತೆ ಮತ್ತು ಪ್ರಮಾಣ ಪತ್ರ’ ಎಂಬ ತರಬೇತಿ ಶಿಬಿರವನ್ನು ಸರ್ಕಾರಿ ಸಹಯೋಗದೊಂದಿಗೆ ನಡೆಸಲು ಗೂಗಲ್ ಮುಂದಾಗಿದೆ.ಈ ಕಾರ್ಯಕ್ರಮದಲ್ಲಿ 2 ಕೋಟಿ ಮೊಬೈಲ್ ಅಭಿವೃದ್ಧಿದಾರರಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ

ವಿಶ್ವದಾಖಲೆ, ಒಂದೇ ದಿನ 5 ಕೋಟಿ ಸಸಿ ನೆಟ್ಟ ಉತ್ತರ ಪ್ರದೇಶ



ಲಖನೌ: ಒಂದೇ ದಿನ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 5 ಕೋಟಿ ಸಸಿಗಳನ್ನು ನೆಡುವ ಮೂಲಕ ಉತ್ತರ ಪ್ರದೇಶ ಸರ್ಕಾರವು ಸೋಮವಾರ ವಿಶ್ವದಾಖಲೆ ನಿರ್ಮಾಣಕ್ಕೆ ಸಜ್ಜಾಗಿದೆ.ವಿಶ್ವದಲ್ಲೇ ಇದು ದಾಖಲೆ. ಭೂಮಿಯ ಮೇಲೆ ಎಲ್ಲೂ ಒಂದೇ ದಿನ ಇಷ್ಟೊಂದು ಸಸಿಗಳನ್ನು ನೆಟ್ಟ ದಾಖಲೆ ಇಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಪ್ರತಿಪಾದಿಸಿದೆ.

ಬ್ರಿಟನ್​ನಲ್ಲಿ ಇಂದಿನಿಂದ ಐರನ್ ಲೇಡಿ ತೆರೇಸಾ ಮೇ ಶಕೆ ಆರಂಭ


ಮೇಡನ್​ಹೆಡ್​ನ ಸಂಸದೆ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ | 26 ವರ್ಷಗಳ ಬಳಿಕ ಮಹಿಳೆಗೆ ಪ್ರಧಾನಮಂತ್ರಿ ಪಟ್ಟ
ಲಂಡನ್: ಬ್ರಿಟನ್​ನ ನೂತನ ಪ್ರಧಾನಿಯಾಗಿ ಕನ್ಸರ್ವೆಟಿವ್ ಪಕ್ಷದ ತೆರೇಸಾ ಮೇ ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮೂಲಕ 26 ವರ್ಷಗಳ ಬಳಿಕ ಮಹಿಳೆಯ ಕೈಗೆ ದೇಶದ ಆಡಳಿತಸೂತ್ರ ಸಿಕ್ಕಂತಾಗಲಿದೆ. ಮಾರ್ಗರೇಟ್ ಥ್ಯಾಚರ್ ಬಳಿಕ ಪ್ರಧಾನಿ ಹುದ್ದೆಗೇರಲಿರುವ ಎರಡನೇ ಮಹಿಳೆ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ. ಕಳೆದ ಆರು ವರ್ಷಗಳಿಂದ

ಸ್ವಾಗತಕ್ಕೆ ರಿಯೊ ಸಜ್ಜು, ಒಲಿಂಪಿಕ್ ಸಮಿತಿ ಘೋಷಣೆ


 ಬ್ರೆಸಿಲ್: ಅಗಸ್ಟ್ 5ರಿಂದ ಆರಂಭವಾಗಲಿರುವ ರಿಯೊ ಒಲಿಂಪಿಕ್ ಕ್ರೀಡಾಕೂಟಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಬ್ರೆಜಿಲಿಯಾ ನಗರಕ್ಕೆ ಆದರದ ಸ್ವಾಗತ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧಿಕೃತವಾಗಿ ಘೋಷಿಸಿದೆ.ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷೆ ನಾವಲ್ ಇಲ್ ಮೌತವಾಕೆಲ್ ಪ್ರತಿಕ್ರಿಯಿಸಿ, ಪ್ರವಾಸಿಗರು ಹಾಗೂ ಕ್ರೀಡಾಳುಗಳ ಸ್ವಾಗತಕ್ಕೆ ನಗರಗಳು ಸಿದ್ಧವಾಗಿವೆ. ಈಗಾಗಲೇ ಸ್ಥಳೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ನಿರ್ಧರಿತ ಸಮಯದಲ್ಲಿ ಪಂದ್ಯಗಳ

Monday 11 July 2016

ಮರ್ರೆ ವಿಂಬಲ್ಡನ್ ಚಾಂಪಿಯನ್

 ಲಂಡನ್: ಬ್ರಿಟನ್ ಜನರ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ವಿಶ್ವ ನಂ.2 ಆಂಡಿ ಮರ್ರೆ ವಿಂಬಲ್ಡನ್ ಚಾಂಪಿಯನ್ ಆಗಿದ್ದಾರೆ. ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಆಂಡಿ ಮರ್ರೆ, ಮೊದಲ ಬಾರಿಗೆ ಗ್ರಾಂಡ್ ಸ್ಲಾಂ ಫೈನಲ್​ಗೇರಿದ್ದ ಕೆನಡದ ಮಿಲೋಸ್ ರಾವೊನಿಕ್​ರನ್ನು ನೇರ ಸೆಟ್​ಗಳಲ್ಲಿ ಮಣಿಸಿದರು. ಈ ಮೂಲಕ ವೃತ್ತಿಜೀವನದ ಮೂರನೇ ಹಾಗೂ 2013ರ ಬಳಿಕ ಮೊದಲ ಬಾರಿಗೆ ಗ್ರಾಂಡ್ ಸ್ಲಾಂ ಟ್ರೋಫಿಗೆ ಮುತ್ತಿಟ್ಟರು.ಆಲ್ ಇಂಗ್ಲೆಂಡ್

ಫ್ರಾನ್ಸ್ ಮಣಿಸಿದ ಪೋರ್ಚುಗಲ್ ಯುರೊ ಕಪ್ ಚಾಂಪಿಯನ್



ಪ್ಯಾರಿಸ್: ಕ್ರಿಸ್ಟಿಯಾನೋ ರೊನಾಲ್ಡೋ ಗಾಯಗೊಂಡು ನಿರ್ಗಮಿಸಿದ ಬಳಿಕವೂ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಪೋರ್ಚುಗಲ್ ತಂಡ ಹೆಚ್ಚುವರಿ ಸಮಯದಲ್ಲಿ ಎಡರ್ ಗಳಿಸಿದ ಆಕರ್ಷಕ ಏಕೈಕ ಗೋಲಿನ ನೆರವಿನಿಂದ ಪ್ರಸಕ್ತ ಸಾಲಿನ ಯುರೊ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಭಾನುವಾರ ರಾತ್ರಿ ನಡೆದ ರೋಚಕ ಪಂದ್ಯದಲ್ಲಿ ಆತಿಥೇಯ ಫ್ರಾನ್ಸ್ ತಂಡವನ್ನು ಪೋರ್ಚುಗಲ್ ತಂಡ 1-0 ಗೋಲುಗಳ ಅಂತರದಿಂದ ಮಣಿಸಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.

ಭಾರತ- ತಾಂಜಾನಿಯಾ ಐದು ಮಹತ್ವದ ಒಪ್ಪಂದಗಳಿಗೆ ಸಹಿ

  ದಾರ್-ಎಸ್-ಸಲಾಮ್ (ತಾಂಜಾನಿಯ): ಭಾರತದಿಂದ ತಾಂಜಾನಿಯಾದ ಝುಂಝಿಬಾರ್​ನಲ್ಲಿ ನೀರು ಸರಬರಾಜು ವ್ಯವಸ್ಥೆಗೆ 920 ಲಕ್ಷ ಡಾಲರ್ ನೆರವು ನೀಡಿಕೆ ಸೇರಿದಂತೆ ವಿವಿಧ ರಂಗಗಳಲ್ಲಿ ಪರಸ್ಪರ ಸಹಕರಿಸುವ ಐದು ಒಪ್ಪಂದಗಳಿಗೆ ಭಾರತ ಮತ್ತು ತಾಂಜಾನಿಯಾ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಸಹಿ ಹಾಕಿದವು.ತಾಂಜಾನಿಯ ಅಧ್ಯಕ್ಷ ಜಾನ್ ಮಗುಫುಲಿ ಅವರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸಿದ ಬಳಿಕ ಉಭು ನಾಯಕರ

ಮಂಗಳನ ಮೇಲಿದೆ ಘನೀಕೃತ ಕಾರ್ಬನ್

  ವಾಷಿಂಗ್ಟನ್: ಮಂಗಳನ ಮೇಲೆ ಕಾರ್ಬನ್ ಡೈಆಕ್ಸೈಡ್ ಘನೀಕೃತ ರೂಪದಲ್ಲಿರುವುದನ್ನು ನಾಸಾದ ನೌಕೆ ಕಂಡುಹಿಡಿದಿದೆ. ಕೆಂಪು ಗ್ರಹದ ಧೂಳಿನ ಭಾಗಗಳಲ್ಲಿ ಚಳಿಗಾಲದ ರಾತ್ರಿಗಳಲ್ಲಿ ಈ ಕಾರ್ಬನ್ ಡೈ ಆಕ್ಸೈಡ್ ತೆಳುವಾದ ಹಿಮದ ಪದರವಾಗಿ ರೂಪುಗೊಳ್ಳುತ್ತದೆ. ಬೆಳಗಾಗುವ ಹೊತ್ತಿಗೆ ಇವು ಆವಿಯಾಗುತ್ತದೆ. ಈ ಪ್ರದೇಶದಲ್ಲಿ ನಿತ್ಯದ ತಾಪಮಾನ ಭಾರಿ ಪ್ರಮಾಣದಲ್ಲಿ ಏರಿಳಿತವಾಗುತ್ತದೆ. ಅಲ್ಲದೆ ಉಷ್ಣತೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಈ ಭಾಗದಲ್ಲಿ ಕಡಿಮೆಯಿರುತ್ತದೆ. ಮಂಗಳನ ಥಾರ್ಸಿಸ್,

ಏಳು ಮಹತ್ವದ ಒಪ್ಪಂದಗಳಿಗೆ ಭಾರತ- ಕೀನ್ಯಾ ಸಹಿ


ನೈರೋಬಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೀನ್ಯಾ ಅಧ್ಯಕ್ಷ ಉಹುರು ಕೀನ್ಯಟ್ಟ ಅವರ ಸಮ್ಮುಖದಲ್ಲಿ ಭಾರತ ಮತ್ತು ಕೀನ್ಯಾ ಸೋಮವಾರ 7 ಮಹತ್ವದ ಒಪ್ಪಂದ/ ತಿಳುವಳಿಕೆ ಪತ್ರಗಳಿಗೆ ಸಹಿ ಮಾಡಿದವು.ಕೀನ್ಯಾ ಅಧ್ಯಕ್ಷ ಉಹುರು ಅವರ ಜೊತೆಗಿನ ಮಾತುಕತೆಗಳ ಬಳಿಕ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣೆ, ಸೈಬರ್ ಭದ್ರತೆ, ಮಾದಕ ದ್ರವ್ಯಗಳು ಹಾಗೂ ಮಾನವ ಕಳ್ಳಸಾಗಣೆ ಹಾವಳಿ ನಿವಾರಣೆ ನಿಟ್ಟಿನಲ್ಲಿ ರಕ್ಷಣಾ

ಮತ್ತೆ ಪ್ರಕಟವಾಗಲಿದೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ

 ನವದೆಹಲಿ: ಆರ್ಥಿಕ ಸಂಕಷ್ಟದಿಂದ ಎಂಟು ವರ್ಷದ ಹಿಂದೆ ಸ್ಥಗಿತಗೊಂಡಿದ್ದ ನ್ಯಾಷನಲ್ ಹೆರಾಲ್ಡ್ ಹಾಗೂ ಮತ್ತೆರಡು ಪತ್ರಿಕೆಗಳನ್ನು ಮರು ಪ್ರಕಾಶನಗೊಳಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಪತ್ರಿಕೆಗಳನ್ನು ರೀಲಾಂಚ್ ಮಾಡುವ ಪ್ರಕಟಣೆಯನ್ನು ಈ ವಾರ ಘೊಷಿಸಲಿದೆ. ಪಬ್ಲಿಕೇಷನ್ಸ್​ನಬೋರ್ಡ್ ಆಫ್ ಡೈರೆಕ್ಟರ್​ಗಳು ಈ ವಾರ ಸಭೆ ಸೇರಿ ಪತ್ರಿಕೆಯ ಹೊಸ ಸಂಪಾದಕರ ಹೆಸರನ್ನು ಸೂಚಿಸಲಿದ್ದಾರೆ ಎಂದು ಕಾಂಗ್ರೆಸ್​ನ ಖಜಾಂಚಿ ಮೋತಿಲಾಲ್ ವೋರಾ ತಿಳಿಸಿದ್ದಾರೆ. 1938ರಲ್ಲಿ ಲಖನೌದಲ್ಲಿ

ಹವಾಮಾನ ವೈಪರೀತ್ಯ, 2030ರ ವೇಳೆಗೆ ಪ್ರತಿವರ್ಷ 2.5 ಲಕ್ಷ ಸಾವು


ನವದೆಹಲಿ: ಹವಾಮಾನದಲ್ಲಿನ ವೈಪರೀತ್ಯದಿಂದಾಗಿ 2030ರ ವೇಳೆಗೆ ಎರಡು ಲಕ್ಷಕ್ಕೂ ಅಧಿಕ ಜನ ಪ್ರತಿವರ್ಷ ಸಾವನ್ನಪ್ಪಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜು ಮಾಡಿದೆ.ಈ ಅವಧಿಯಲ್ಲಿ ಇಷ್ಟೊಂದು ಮಂದಿ ಸಾವನ್ನಪ್ಪಲು ಮೂಲ ಕಾರಣ ಅಪೌಷ್ಟಿಕತೆ, ಮಲೇರಿಯಾ, ಅತಿಸಾರ ಹಾಗೂ ಅತಿಯಾದ ಸೂರ್ಯನ ಶಾಖವೇ ಕಾರಣ. ಮುಂಬರುವ ವರ್ಷಗಳಲ್ಲಿ ವಿಶ್ವದದಲ್ಲಿನ ವಾತಾವರಣ ಸಂಪೂರ್ಣ ಬದಲಾವಣೆ ಕಾಣಲಿದೆ. ಇದರಿಂದಾಗಿ ಸರಿಸುಮಾರು 2.50 ಲಕ್ಷ ಜನರು

ಹಸು ಕಲ್ಯಾಣಕ್ಕೆ ಸೆಸ್‌

  ಚಂಡಿಗಡ (ಪಿಟಿಐ): ಹಸುಗಳ ಕ್ಷೇಮಾಭಿವೃದ್ಧಿಗಾಗಿ ಹರಿಯಾಣದ ಬಿಜೆಪಿ  ಸರ್ಕಾರ ‘ಹಸು ಸೆಸ್‌’ ವಿಧಿಸಲು ಮುಂದಾಗಿದೆ.
ಪಂಜಾಬ್‌ನಲ್ಲಿ ಈಗಾಗಲೇ ಈ ವ್ಯವಸ್ಥೆ ಜಾರಿಯಲ್ಲಿದೆ. ಹರಿಯಾಣ ಗೋವು ಸೇವಾ ಆಯೋಗ ‘ಹಸು ಸೆಸ್‌’ ಕುರಿತಾದ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದೆ.ಬ್ಯಾಕ್ವೆಂಟ್‌ ಹಾಲ್‌ ಬುಕ್ಕಿಂಗ್‌ ಮೇಲೆ ₹2100, ಮನರಂಜನೆ ತೆರಿಗೆ ಸಂಗ್ರಹದ ಮೇಲೆ ಶೇಕಡ 5ರಷ್ಟು ಮತ್ತು  ಆಹಾರ ಧಾನ್ಯಗಳ ಪ್ರತಿ ಚೀಲದ ಮೇಲೆ ₹1  ಹಾಗೂ ಸರ್ಕಾರದ ನಿರ್ವಹಣೆಯಲ್ಲಿ ನಡೆಯುತ್ತಿರುವ ದೇವಸ್ಥಾನಗಳಿಂದ ಶೇಕಡ 50ರಷ್ಟು ಹಣ ಪಡೆದು ರಾಜ್ಯದಲ್ಲಿರುವ ಹಸುಗಳ ಅಭಿವೃದ್ಧಿಗೆ ಬಳಸಬಹುದು ಎಂದು ಅಯೋಗ

ಭೂಒಡೆತನ: ಹೊಸ ಮಸೂದೆ

  ನವದೆಹಲಿ: ಭೂಮಿ ಒಡೆತನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಮಸೂದೆಯನ್ನು ಸಿದ್ಧಪಡಿಸಿದೆ.ಹೊಸ ಕಾಯ್ದೆಯು, 2011ರಲ್ಲಿ ಯುಪಿಎ ಸರ್ಕಾರ ಭೂಮಿ ಒಡೆತನಕ್ಕೆ ಸಂಬಂಧಿಸಿದಂತೆ ತಂದಿರುವ ಕಾಯ್ದೆಯ ಸುಧಾರಿತ ಆವೃತ್ತಿ ಆಗಿರಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮೂಲಗಳು ತಿಳಿಸಿದೆ.ಮಸೂದೆಯನ್ನು ಕಾನೂನು ಇಲಾಖೆಯ ಪರಿಶೀಲನೆಗೆ ಕಳುಹಿಸಿ, ಅಲ್ಲಿಂದ ಬಂದ ನಂತರ 18ರಂದು ಆರಂಭವಾಗಲಿರುವ ಸಂಸತ್‌ನ ಮುಂಗಾರು  ಅಧಿವೇಶನದಲ್ಲಿ

ವಿಶ್ವಸಂಸ್ಥೆ ಗುರಿ



ಬಾಲ್ಯ ವಿವಾಹ ತಡೆ, ಹದಿಹರೆಯದಲ್ಲಿ ಗರ್ಭಧಾರಣೆ ತಡೆ ಮತ್ತು ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುವಂತೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ವಿಶ್ವಸಂಸ್ಥೆಯ ಗುರಿಹದಿಹರೆಯದ ಹೆಣ್ಣು ಮಕ್ಕಳ ಸಾಮಾಜಿಕ ಸಮಸ್ಯೆಗಳುಬಾಲ್ಯ ವಿವಾಹ ವ್ಯಾಪಕ: 9ರಲ್ಲಿ 1 ಹೆಣ್ಣು ಮಗುವಿಗೆ 15ರೊಳಗೆ ಮತ್ತು ಮೂರರಲ್ಲಿ ಒಂದು ಹೆಣ್ಣು ಮಗುವಿಗೆ 18ರೊಳಗೆ ಮದುವೆಯಾಗುತ್ತದೆ
ಹದಿಹರೆಯದಲ್ಲಿ ಗರ್ಭಧಾರಣೆ:  18ರೊಳಗಿನ ಹೆಣ್ಣು ಮಕ್ಕಳು ಪ್ರತಿ ವರ್ಷ 73 ಲಕ್ಷ ಮಕ್ಕಳಿಗೆ ಜನ್ಮ ನೀಡುತ್ತಾರೆಆರೋಗ್ಯ,

ಜುಲೈ 11: ಇಂದು ವಿಶ್ವ ಜನಸಂಖ್ಯಾ ದಿನ


ಜನರು ಎದುರಿಸುವ ಸಮಸ್ಯೆಗಳು ಮತ್ತು ಜನರಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚಿಂತನೆ ನಡೆಸುವುದಕ್ಕಾಗಿ ವಿಶ್ವ ಜನಸಂಖ್ಯಾ ದಿನ ಆಚರಿಸಲಾಗುತ್ತಿದೆ. 1989ರ ಜುಲೈ 11ರಂದು ಮೊದಲ ಬಾರಿ ವಿಶ್ವ ಸಂಸ್ಥೆಯು ಜನಸಂಖ್ಯಾ ದಿನವನ್ನು ಆಚರಿಸಿತು.ಸದ್ಯ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ದೇಶ ಚೀನಾ. ಆದರೆ ಒಂದು ದಶಕದೊಳಗೆ ಚೀನಾವನ್ನು ಹಿಂದಿಕ್ಕಿ ಭಾರತ ಮೊದಲ ಸ್ಥಾನ ಪಡೆಯಲಿದೆ ಎಂದು ಅಂದಾಜಿಸಲಾಗಿದೆ. ಹದಿಹರೆಯದ ಹೆಣ್ಣು ಮಕ್ಕಳು ತಮ್ಮ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸಾಧ್ಯವಾಗುವಂತೆ ಭಾರತ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ವಿಶ್ವಸಂಸ್ಥೆಯ

ಎನ್‌ಐಎ ತಂಡದಿಂದ ತನಿಖೆ

  
ಕಾಸರಗೋಡು: ಕಾಸರಗೋಡು ಜಿಲ್ಲೆಯ 15 ಮಂದಿ ಐಎಸ್‌ ಉಗ್ರರ ಶಿಬಿರ ಸೇರಿಕೊಂಡಿದ್ದಾರೆ ಎಂಬ ಶಂಕೆಯಿಂದಾಗಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ‘ರಾ’ ಮತ್ತು ರಾಜ್ಯ ಪೊಲೀಸ್‌ ತಂಡ ಜಿಲ್ಲೆಯಲ್ಲಿ ತನಿಖೆ ಆರಂಭಿಸಿದೆ.‘ರಾ’ದ ಕೊಚ್ಚಿ ವಿಭಾಗದ ಡಿವೈಎಸ್‌ಪಿ ವಿಕ್ರಂ, ಎನ್‌ಐಎ ಡಿವೈಎಸ್ಪಿ ಸತೀಶ್ ಬಾಬು ಸ್ಥಳ ಸಂದರ್ಶಿಸಿ, ಪ್ರಾಥಮಿಕ ತನಿಖೆ ನಡೆಸಿ ಮರಳಿದ್ದಾರೆ. ನಾಪತ್ತೆಯಾದವರ ಮನೆಗಳಿಗೂ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಆದೇಶದ ಮೇರೆಗೆ ಉತ್ತರ ವಲಯದ ಎಡಿಜಿಪಿ ಸುದೇಶ್ ಕುಮಾರ್ ತನಿಖೆ ಆರಂಭಿಸಿದ್ದಾರೆ. ‘ನಾವು ಐಎಸ್ ಶಿಬಿರದಲ್ಲಿದ್ದೇವೆ,

ಪೋಷಕರೇ ನೀವೆಷ್ಟು ಪ್ರಬುದ್ಧರು?

  
ನಾನು ಓದುವುದಿಲ್ಲ, ನೀನು ಏನು ಮಾಡುತ್ತೀಯೋ ಅದನ್ನು ಮಾಡು’ - ಇದು ಯಾವುದೋ ಸಿನಿಮಾದ ಡೈಲಾಗ್ ಅಲ್ಲ. ಸುಶಿಕ್ಷಿತ ಕುಟುಂಬದ ಎಂಟು ವರ್ಷದ ಮುದ್ದಾದ ಹೆಣ್ಣುಮಗು ತನ್ನ ತಾಯಿಗೆ ತಿರುಗಿ ಹೇಳುವ ಮಾತು. ಹದಿಹರೆಯದ ಮಕ್ಕಳು ಕೆಲವೊಮ್ಮೆ ಈ ರೀತಿ ಹೇಳಿದರೆ ಅದು ಅಷ್ಟೊಂದು ಗಾಬರಿ ಪಡಬೇಕಾದ ವಿಷಯ ಆಗಲಾರದು.ಆ ರೀತಿ ಹೇಳಲು ಅನೇಕ ಕಾರಣಗಳನ್ನು ಕೊಡಬಹುದು.  ಆದರೆ ಕೋಮಲತೆ ಇನ್ನೂ ಜಾಗೃತವಾಗಿರುವ, ಮುಗ್ಧತೆಯೇ ಆಭರಣವಾಗಿ

ನೇಪಾಳದ ಪ್ರಪ್ರಥಮ ಸರ್ವೋಚ್ಚ ಮಹಿಳಾ ನ್ಯಾಯಾಧೀಶರಾಗಿ ಸುಶೀಲಾ ಕಾರ್ಕಿ ನೇಮಕ



ಕಾಠ್ಮಂಡು,ಜು.10: ನೇಪಾಳದ ಸರ್ವೋಚ್ಚ ನ್ಯಾಯಾಲಯದ ಪ್ರಪ್ರಥಮ ಮಹಿಳಾ ನ್ಯಾಯಾಧೀಶರಾಗಿ ಸುಶೀಲಾ ಕಾರ್ಕಿ ನೇಮಕಗೊಂಡಿದ್ದಾರೆ. ಕಾರ್ಕಿ ಅವರ ನೇಮಕವನ್ನು ರವಿವಾರ ನೇಪಾಳ ಸಂಸತ್ ಅವಿರೋಧವಾಗಿ ಅಂಗೀಕರಿಸಿದೆ.ಹಿಮಾಲಯದ ರಾಷ್ಟ್ರವಾದ ನೇಪಾಳದಲ್ಲಿ ಅಧ್ಯಕ್ಷ ಹಾಗೂ ಸ್ಪೀಕರ್ ಹುದ್ದೆಗಳನ್ನು ಮಹಿಳೆಯರನ್ನು ಅಲಂಕರಿಸಿದ್ದಾರೆ. ಇದೀಗ ಸರ್ವೋಚ್ಚ ನ್ಯಾಯಾಧೀಶೆಯಾಗಿ ಕಾರ್ಕಿ ಅವರ ನೇಮಕದೊಂದಿಗೆ ಈ ಮೂರು ಪ್ರಮುಖ

ಖಾದಿ ಸಮವಸ್ತ್ರ ಎನ್ ಟಿಪಿಸಿ ಬೇಡಿಕೆ



ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮ (ಎನ್ಟಿಪಿಸಿ) ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕೆಗೆ ₹5.34 ಕೋಟಿ ಮೊತ್ತದ ಸಮವಸ್ತ್ರಗಳಿಗೆ ಬೇಡಿಕೆ ಸಲ್ಲಿಸಿದೆ.ತನ್ನ ಉದ್ಯೋಗಿಗಳಿಗೆ 23 ಸಾವಿರ ಖಾದಿಯ ಜಾಕೆಟ್ ಸಿದ್ಧಪಡಿಸುವಂತೆ ಎನ್ಟಿಪಿಸಿ ಬೇಡಿಕೆ ಸಲ್ಲಿಸಿದೆ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕೆ ಆಯೋಗ ಅಧ್ಯಕ್ಷ ಕೆ.ವಿ. ಸಕ್ಸೆನಾ ತಿಳಿಸಿದ್ದಾರೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಯಿಂದ ಇತ್ತೀಚಿಗೆ ಇಷ್ಟು ಮೊತ್ತದ ಬೇಡಿಕೆ ಬಂದಿರುವುದು ಇದೇ ಮೊದಲು.

ಇಂಗಾಲದ ಡೈ ಆಕ್ಸೈಡ್ ಪತ್ತೆಗೆ ಸೂಕ್ಷ್ಮ ಸಂವೇದಕ

  
ಒಮ್ಮೆ ದೀರ್ಘವಾಗಿ ಉಸಿರಾಡಿ. ಈ ರೀತಿ ಉಸಿರಾಡುವಾಗ ಇಂಗಾಲದ ಡೈ ಆಕ್ಸೈಡ್ನಂತಹ ಮಾರಣಾಂತಿಕ ಅನಿಲಗಳಿಂದ ಕಲುಷಿತಗೊಂಡಿರುವ ಅಶುದ್ಧ ಗಾಳಿ ಶ್ವಾಸಕೋಶವನ್ನು ಸೇರುವ ಸಾಧ್ಯತೆ ಇಲ್ಲದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿವರ್ಷ ಎರಡು ದಶಲಕ್ಷ ಜನರು ವಾಯುಮಾಲಿನ್ಯದಿಂದ ಬರುವ ರೋಗಗಳಿಂದಾಗಿ ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ.
ನಾವು ಉಸಿರಾಡುವ ಗಾಳಿಯಲ್ಲಿ ಹೆಚ್ಚಾಗಿ ಸಾರಜನಕ ಮತ್ತು ಆಮ್ಲಜನಕವಿದ್ದು, ಅಲ್ಪ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್

ಚಿತ್ರದುರ್ಗದಲ್ಲಿ ರುಸ್ತುಮ್-2 ಪರೀಕ್ಷೆ


 ನವದೆಹಲಿ: ಭಾರತದ ಪ್ರಥಮ ಮಾನವರಹಿತ ದಾಳಿ ಸಾಮರ್ಥ್ಯದ ರುಸ್ತುಮ್-2 ವಿಮಾನವನ್ನು ಈ ತಿಂಗಳ ಅಂತ್ಯದಲ್ಲಿ ಚಿತ್ರದುರ್ಗ ವೈಮಾನಿಕ ಪರೀಕ್ಷಾ ವಲಯದಲ್ಲಿ ಪರೀಕ್ಷಾರ್ಥ ಹಾರಾಟ ನಡೆಸಲಾಗುತ್ತದೆ.ಈ ಮಾನವರಹಿತ ವಿಮಾನವನ್ನು ವೈಮಾನಿಕ ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿಗಳು ಚಿತ್ರದುರ್ಗ ಜಿಲ್ಲೆಯ ಕುದಾಪುರ ಬಳಿಯ ಪರೀಕ್ಷಾ ವಲಯಕ್ಕೆ ಸದ್ಯದಲ್ಲಿ

ಈಕ್ವೆಡಾರ್ನಲ್ಲಿ ಪ್ರಬಲ ಭೂಕಂಪ


ಕ್ವಿಟೊ (ಎಪಿ): ದಕ್ಷಿಣ ಅಮೆರಿಕದ ಈಕ್ವೆಡಾರ್ನ ವಾಯವ್ಯ ಕರಾವಳಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಹಾನಿ ಮತ್ತು ಸಾವು ಸಂಭವಿಸಿರುವ ಬಗ್ಗೆ ಇನ್ನು ತಿಳಿದು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.5.9ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ದಕ್ಷಿಣ ಅಮೆರಿಕದಿಂದ 41 ಕಿ.ಮೀ ದೂರದಲ್ಲಿ ಹಾಗೂ ಭೂಮೇಲ್ಮೈನಿಂದ 35 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರವಿತ್ತು ಎಂದು ಅಮೆರಿಕದ ಭೂವೈಜ್ಞಾನಿಕ ಸರ್ವೇಕ್ಷಣಾ ಕೇಂದ್ರವು ಹೇಳಿದೆ.ಆಗ್ನೇಯ ಭಾಗದಿಂದ

Saturday 9 July 2016

ಮಹಾತ್ಮ ಗಾಂಧೀಜಿ ಹತ್ತಿದ ಟ್ರೇನ್‌ನಲ್ಲಿ ಮೋದಿ ಸುತ್ತಾಟ


 ಡರ್ಬನ್, ಜುಲೈ, 09: ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾರೆ. ಶನಿವಾರ ಮೋದಿ ದಕ್ಷಿಣ ಆಫ್ರಿಕಾದ ಲೋಕಲ್ ಟ್ರೇನ್ ನಲ್ಲಿ ಸುತ್ತಾಟ ಮಾಡಿದ್ದಾರೆ. ಪೆನ್‌ಟ್ರಿಚ್ ನಿಂದ ಪೀಟರ್ ಮಾರಿಟ್ಜಬರ್ಗ್ ವರೆಗೆ ಮೋದಿ ರೈಲ್ವೆಯಲ್ಲಿ ಪ್ರಯಾಣ ಮಾಡಿದ್ದಾರೆ.1893 ರಲ್ಲಿ ಮಹಾತ್ಮ ಗಾಂಧಿ ಅವರನ್ನು ಇದೇ ಟ್ರೇನ್ ನಿಂದ ಹೊರಕ್ಕೆ ನೂಕಲಾಗಿತ್ತು. ವರ್ಣಬೇಧ ನೀತಿಯ ವಿರುದ್ಧದ ಹೋರಾಟ ಆರಂಭವಾಗಿದ್ದೆ ಅಲ್ಲಿಂದ.[ಮೋದಿ ತವರಿಗೆ ಕೇಜ್ರಿವಾಲ್, ಮಾಧ್ಯಮಗಳಿಗೆ ಪ್ರವೇಶ

ವಿಂಬಲ್ಡನ್ ಪಂದ್ಯವೊಂದನ್ನು ನೇರ ಪ್ರಸಾರ ಮಾಡಿದ ಟ್ವೀಟರ್


ನ್ಯೂಯಾರ್ಕ್: ಮೈಕ್ರೋ-ಬ್ಲಾಗಿಂಗ್ ವೆಬ್ಸೈಟ್ ಟ್ವಿಟರ್ ವಿಂಬಲ್ಡನ್ ಟೂರ್ನಿಯ ಪಂದ್ಯವೊಂದನ್ನು ನೇರಪ್ರಸಾರ ಮಾಡಿದೆ.
ಬುಧವಾರ ಬೆಳಗ್ಗೆ ವಿಂಬಲ್ಡನ್ ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟೆನ್ನಿಸ್ ಪಂದ್ಯವೊಂದನ್ನು ನೇರಪ್ರಸಾರ ಮಾಡಿದೆ. ಈ ಮೂಲಕ ಕ್ರೀಡೆಯನ್ನು ಇನ್ನಷ್ಟು ವಿಶಾಲವಾಗಿ ವಿಸ್ತರಿಸುವ ಉದ್ದೇಶವನ್ನು ಟ್ವೀಟರ್ ಹೊಂದಿದೆ.
ನೇರಪ್ರಸಾರದ ವಿಡಿಯೋಗಳನ್ನು ಹುಡುಕಲು ಟ್ವೀಟರ್ ನಲ್ಲಿ ಜಾಗವನ್ನು ಇನ್ನಷ್ಟು ವಿಶಾಲವಾಗಿರಿಸಲಿದೆ. ಮೊದಲಿಗೆ ವಿಂಬಲ್ಡನ್ ಟೂರ್ನಿಯನ್ನು ನೇರಪ್ರಸಾರ ಮಾಡುವ ಮೂಲಕ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಆ ನಂತರ ನೇರ ಪ್ರಸಾರ ಮಾಡಲಾಗುವುದು ಎಂದು ಟ್ವೀಟರ್ ಪ್ರಕಟಣೆಯಲ್ಲಿ ತಿಳಿಸಿದೆ.
ವಿಂಬಲ್ಡನ್ ಟೂರ್ನಿಯ ನೇರಪ್ರಸಾರ ಹಕ್ಕನ್ನು ಇಎಸ್ಪಿಎನ್ ಸಂಸ್ಥೆ ಹೊಂದಿದ್ದು, ನೇರ ಸಂದರ್ಶನ, ವಿಶ್ಲೇಷಣೆ ಹಾಗೂ ಪಂದ್ಯದ ಮರುಪ್ರಸಾರವನ್ನು ಟ್ವೀಟರ್ ಮಾಡುತ್ತಿದೆ.

8 ವಾಣಿಜ್ಯ ಒಪ್ಪಂದಗಳಿಗೆ ಸಾಕ್ಷಿಯಾದ ಸಿಇಒ ಸಭೆ

 ಪ್ರಿಟೋರಿಯಾ (ದ.ಆಫ್ರಿಕಾ) : ಭಾರತ ಹಾಗೂ ದಕ್ಷಿಣ ಆಫ್ರಿಕಾ ದೇಶಗಳ ಭಾರಿ ಉದ್ಯಮಿಗಳು ಇಲ್ಲಿ ಆಯೋಜನೆಗೊಂಡಿದ್ದ ಸಿಇಒಗಳ ಸಭೆಯಲ್ಲಿ ಎಂಟು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಎರಡೂ ರಾಷ್ಟ್ರಗಳ ಸೌಹಾರ್ದ ಮತ್ತು ಸಹಕಾರ ಸಂಬಂಧ ವೃದ್ಧಿಗೆ ಈ ಒಪ್ಪಂದ ಮಹತ್ವದ ಮೈಲಿಗಲ್ಲಾಗಲಿದೆ.ಹಿಂದೂಸ್ಥಾನ್ ಜಿಂಕ್ ಲಿಮಿಟೆಡ್ ಮತ್ತು ಮಿನೋವಾ ಆಫ್ರಿಯಾ ಕಂಪೆನಿಗಳ ನಡುವೆ ಭಾರತದಲ್ಲಿ ಗಣಿಗಾರಿಕೆಗೆ ಸಂಬಂಧಿಸಿದಂತೆ 2 ಒಪ್ಪಂದ, ಆರೋಗ್ಯ ಮತ್ತು ವಿಮಾ ಕ್ಷೇತ್ರದಲ್ಲಿ ಎಂಎಂಐ

ಈಗ ಚೀನಾ ಭಾರತಕ್ಕೆ ತಲೆಬಾಗಲೇಬೇಕು!

ಹೊಸದಿಲ್ಲಿ: ಕಾಲ ಯಾವತ್ತೂ ಒಂದೇ ರೀತಿ ಇರುವುದಿಲ್ಲ ಎನ್ನುವುದಕ್ಕೆ ಚೀನಾದ ಸ್ಥಿತಿ ಉತ್ತಮ ಉದಾಹರಣೆ.ಎನ್‌ಎಸ್‌ಜಿ ಸೇರಲು ಭಾರತ ನಡೆಸಿದ ಪ್ರಯತ್ನ ವಿಫಲವಾಗಿದೆ. ಬದ್ಧ ವೈರಿ ಚೀನಾ ಅದರ ಸದಸ್ಯ.ಎಂಟಿಸಿಆರ್‌ ಸೇರಲು ಚೀನಾ ನಡೆಸುತ್ತಿರುವ ಪ್ರಯತ್ನ ಸಫಲವಾಗಿಲ್ಲ. ಭಾರತ ಈಗ ಅದರ ಸದಸ್ಯ.ಚೀನಾಕ್ಕೆ ಈಗ ಶತಾಯಗತಾಯ ಎಂಟಿಸಿಆರ್‌ ಸೇರಲೇಬೇಕಾದ ಪರಿಸ್ಥಿತಿ. ಆದರೆ, ಎನ್‌ಎಸ್‌ಜಿ ಪ್ರವೇಶಕ್ಕೆ ಅಡ್ಡಗೋಡೆಯಾಗಿ ನಿಂತ ಕಾರಣಕ್ಕೆ ಭಾರತ ತಾನೂ ಚೀನಾದ

ಭಾರತಕ್ಕೆ ಪ್ರಶಸ್ತಿ

ಬೆಂಗಳೂರು: ಬಾಂಗ್ಲಾದೇಶ ತಂಡವನ್ನು ಸುಲಭವಾಗಿ ಮಣಿಸಿ ಹ್ಯಾಟ್ರಿಕ್‌ ಸಾಧನೆ ಮಾಡಿದ ಭಾರತ ತಂಡ ಸಾಬಾ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.ಜೊತೆಗೆ ಇದೇ ವರ್ಷದ ಸೆಪ್ಟೆಂಬರ್‌ 9ರಿಂದ 18ರ ವರೆಗೆ ಇರಾನ್‌ನ ಟೆಹರಾನ್‌ನಲ್ಲಿ ನಡೆಯಲಿರುವ ಫಿಬಾ ಏಷ್ಯಾ ಚಾಲೆಂಜ್‌ ಟೂರ್ನಿಗೂ ಅರ್ಹತೆ ಪಡೆದುಕೊಂಡಿತು. ಸಾಬಾ ಟೂರ್ನಿಯಲ್ಲಿ ಭಾರತ ಹೋದ ವರ್ಷವೂ ಪ್ರಶಸ್ತಿ ಗೆದ್ದಿತ್ತು.ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಲೀಗ್‌ ಪಂದ್ಯದಲ್ಲಿ ಭಾರತ 95–35

ಈಜು-ದಾಮಿನಿ, ಮಯೂರಿ ರಾಷ್ಟ್ರೀಯ ದಾಖಲೆ


 ಬೆಂಗಳೂರು: ಕರ್ನಾಟಕದ ಈಜುಪಟುಗಳಾದ ದಾಮಿನಿ ಕೆ. ಗೌಡ ಹಾಗೂ ಮಯೂರಿ ಲಿಂಗರಾಜ್, 43ನೇ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್​ಷಿಪ್​ನಲ್ಲಿ ನೂತನ ರಾಷ್ಟ್ರೀಯ ದಾಖಲೆ ನಿರ್ವಿುಸಿದರು. ಗುರುವಾರ ಒಟ್ಟು ಮೂರು ರಾಷ್ಟ್ರೀಯ ದಾಖಲೆಗಳು ನಿರ್ವಣವಾದವು. ಕೂಟದ 3ನೇ ದಿನದಂತ್ಯಕ್ಕೆ 22 ಚಿನ್ನ, 15 ಬೆಳ್ಳಿ ಹಾಗೂ 12 ಕಂಚು ಸಹಿತ ಒಟ್ಟು 49 ಪದಕಗಳೊಂದಿಗೆ ಕರ್ನಾಟಕ ತಂಡ ಅಗ್ರಸ್ಥಾನ ಕಾಯ್ದುಕೊಂಡಿತು.ಬಸವನಗುಡಿ ಈಜುಕೊಳದಲ್ಲಿ ನಡೆಯುತ್ತಿರುವ

ಪ್ರಸಕ್ತ ವಿತ್ತ ವರ್ಷದಿಂದ ಶೇ. 7ರ ಬಡ್ಡಿಯಲ್ಲಿ ಬೆಳೆ ಸಾಲ



ನವದೆಹಲಿ: ರೈತರ ಆರ್ಥಿಕ ಸಂಕಷ್ಟ ನಿವಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಮೋದಿ ಸರ್ಕಾರ ಶೇ.7ರ ಕಡಿಮೆ ಬಡ್ಡಿ ದರದಲ್ಲಿ ಅಲ್ಪಾವಧಿ ಬೆಳೆ ಸಾಲ ನೀಡಲು ಮುಂದಾಗಿದೆ. ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.ಈ ಯೋಜನೆ ಪ್ರಸಕ್ತ ವರ್ಷದಿಂದಲೇ ಜಾರಿಗೆ ಬರಲಿದೆ. ಇದರಡಿ ರೈತರು ಒಂದು ವರ್ಷದ ಅವಧಿಗೆ 3 ಲಕ್ಷ ರೂ.ವರೆಗೆ ಅಲ್ಪಾವಧಿ ಬೆಳೆ ಸಾಲ ಪಡೆಯಬಹುದಾಗಿದೆ. ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುವ ರೈತರಿಗೆ ಬಡ್ಡಿಯಲ್ಲಿ ಶೇ. 3 ವಿನಾಯಿತಿ ನೀಡುವ, ಅಂದರೆ ಶೇ.4ರ ಬಡ್ಡಿ ವಿಧಿಸುವ ಪ್ರಸ್ತಾವನೆಗೂ ಸಂಪುಟ ಅನುಮೋದನೆ

ವಿಶ್ವದ ಅತಿದೊಡ್ಡ ನೀಲರತ್ನ ಪತ್ತೆ





ವಿಶ್ವದ ಅತಿದೊಡ್ಡ ನೀಲರತ್ನ ಶ್ರೀಲಂಕಾದಲ್ಲಿ ಪತ್ತೆಯಾಗಿದೆ. ಈ ರತ್ನದ ತೂಕ49 ಕ್ಯಾರೆಟ್ ಇದ್ದು ಇದರ ಮೌಲ್ಯ 10 ಕೋಟಿ ಡಾಲರ್ (ರು.650 ಕೋಟಿ) ಆಗಲಿದೆ ಎಂದು ಅಂದಾಜಿಸಲಾಗಿದೆ.
ಶ್ರೀಲಂಕಾದ ದಕ್ಷಿಣ ಭಾಗ ರತ್ನಪುರದಲ್ಲಿ ಈ ರತ್ನ ಪತ್ತೆಯಾಗಿದೆ. ಈ ಪ್ರದೇಶವನ್ನು ವಜ್ರಗಳ ನಗರ ಎಂತಲೂ ಕರೆಯಲಾಗುವುದು. ಇದುವರೆಗೂ ಸಿಕ್ಕಿರುವ ಅತಿದೊಡ್ಡ ನೀಲಿ ರತ್ನದ ತೂಕ 1,395 ಕ್ಯಾರೆಟ್ ಆಗಿದೆ.
ಈ ರತ್ನಕ್ಕೆ ದಿ ಸ್ಟಾರ್ ಅಫ್ ಆಡಂ ಎಂದು ಹೆಸರಿಡಲಾಗಿದೆ.


ಚೆಕ್ ಬೌನ್ಸ್ ಪ್ರಕರಣಗಳನ್ನು ನಿಭಾಯಿಸಲು ಸರ್ಕಾರದಿಂದ ಹೊಸ ನಿಯಮ


ಕೇಂದ್ರ ಸರ್ಕಾರ ವರ್ಗಾವಣೆಯ ಲಿಖಿತಗಳ ಅಧಿನಿಯಮ (ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಮಸೂದೆ) (ತಿದ್ದುಪಡಿ), 2015ಕ್ಕೆ ಅಧಿಸೂಚನೆ ಹೊರಡಿಸಿದ್ದು, ಈ ಪ್ರಕಾರ ಚೆಕ್ ಬೌನ್ಸ್ ಪ್ರಕರಣದಲ್ಲಿ ಚೆಕ್ ಪಡೆದುಕೊಳ್ಳುವ ವ್ಯಕ್ತಿ ಚೆಕ್ ನಗದಾಗುವ ಸ್ಥಳದಲ್ಲಿಯೇ ಮೊಕದ್ದಮೆ ಹೂಡಬಹುದು. ಚೆಕ್ ಬ್ಯಾಂಕಿನಲ್ಲಿ ಹಾಕಿದ ವ್ಯಕ್ತಿಯ ಸ್ಥಳಕ್ಕೇ ಹುಡುಕಿಕೊಂಡು ಹೋಗಿ ಅಲ್ಲಿ ಕೇಸು ಹಾಕುವ ತ್ರಾಸ ಇನ್ನು ಮುಂದೆ ಇರುವುದಿಲ್ಲ.ಈ ಮಸೂದೆಯನ್ನು ಜೂನ್ 15, 2015ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ತರಲಾಗಿದೆ. 1881ರ ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಗೆ ತಿದ್ದುಪಡಿ ತಂದು ಘೋಷಿಸಲಾಗಿದ.ಪ್ರಸ್ತುತ ದೇಶಾದ್ಯಂತ

ಶೇ.100 ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ಮೊದಲ ರಾಜ್ಯ ಕೇರಳ

ಶೇ. 100ರಷ್ಟು ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಕೇರಳಕ್ಕೆ ದಕ್ಕಿದೆ.ಕೇರಳ ಸಂಪೂರ್ಣ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದುಕೊಂಡಿದೆ ಎಂಬ ಸುದ್ದಿಯನ್ನು ಶಿಕ್ಷಣ ಸಚಿವ ಪಿಕೆ ಅಬ್ದು ರಬ್ ದೃಢೀಕರಿಸಿದ್ದಾರೆ. 1 ವರ್ಷದಿಂದ 50 ವರುಷದ ವರೆಗಿನ ಎಲ್ಲರಿಗೂ ಪ್ರಾಥಮಿಕ ವಿದ್ಯಾಭ್ಯಾಸ ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ಕೇರಳ ಸರ್ಕಾರ ಅತುಲ್ಯಂ ಎಂಬ ಯೋಜನೆ ಹಮ್ಮಿಕೊಂಡಿತ್ತು. ಈ ಯೋಜನೆಯಲ್ಲಿ ಎರಡು ಹಂತಗಳಿದ್ದು, 2010ರಲ್ಲಿ ಮೊದಲ ಹಂತ

ಕೋನಾರ್ಕ್ ಸೂರ್ಯ ದೇವಾಲಯದಲ್ಲಿರುವ ವೈಜ್ಞಾನಿಕ ಅದ್ಭುತಗಳು


ಭಾರತದ ಪ್ರತಿಯೊಂದು ಪುರಾತನ ದೇವಾಲಯಗಳು ಇಲ್ಲಿನ ಶ್ರೀಮಂತ ಪರಂಪರೆಯಲ್ಲಿದ್ದ ವೈಜ್ಞಾನಿಕತೆಯ ಅದ್ಭುತಗಳನ್ನು ಸಾರುತ್ತಿವೆ. ಈ ಪೈಕಿ ಒಡಿಶಾದ ಪುರಿ ಜಿಲ್ಲೆಯಲ್ಲಿರುವ ಕೋನಾರ್ಕ್ ಸೂರ್ಯ ದೇವಾಲಯವೂ ಒಂದು.1238-1250 ರ ಸುಮಾರಿಗೆ ಇಲ್ಲಿನ ದೇವಾಲಯವನ್ನು ಗಂಗಾ ರಾಜಮನೆತನದ ರಾಜ ನರಸಿಂಹದೇವ ಅಭಿವೃದ್ಧಿಪಡಿಸಿದ ಎಂಬುದು ಇತಿಹಾಸಶ್ರೀ ಕೃಷ್ಣನ ಪುತ್ರ ಸಾಂಬ ಕೋನಾರ್ಕ್ ನ ಸೂರ್ಯ ದೇವಾಲಯವನ್ನು ಸೂರ್ಯನಿಗೆ  ಗೌರವ ಸಲ್ಲಿಸಲು ನಿರ್ಮಿಸಿದ

400 ವರ್ಷಗಳ ಬಳಿಕ ಮಹಿಳೆ, ದಲಿತರಿಗೆ ಪರಶುರಾಮ ದರ್ಶನ!




ಬರೋಬ್ಬರಿ 400 ವರ್ಷಗಳ ಬಳಿಕ ಈ ದೇವಸ್ಥಾನದಲ್ಲಿ ಈಗ ದಲಿತರು ಮತ್ತು ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ!ಉತ್ತರಾಖಂಡ್​ನ ಜಾನ್ಸರ್ ಬವಾರ್ ವಲಯದಲ್ಲಿರುವ ಗಡವಾಲ್​ನ ಪರಶುರಾಮ ದೇವಸ್ಥಾನದಲ್ಲಿ ಇಷ್ಟು ದಿನ ದಲಿತರು ಮತ್ತು ಮಹಿಳೆಯರಿಗೆ ಪ್ರವೇಶವೇ ಇರಲಿಲ್ಲ. ಸಂಪ್ರದಾಯದಂತೆ ಇದನ್ನು ಕಟ್ಟುನಿಟ್ಟಾಗಿ ಕಾಪಾಡಿಕೊಂಡು ಬರಲಾಗಿತ್ತು. ಆದರೆ ಈಗ ಆಡಳಿತ ಮಂಡಳಿ ನಿಷೇಧಕ್ಕೆ ಕಡಿವಾಣ ಹಾಕಿ, ಮುಂಬರುವ ದಿನಗಳಲ್ಲಿ ಎಲ್ಲರಿಗೂ ಸಮನಾದ

ಉಗ್ರರ ಗುರುತಿಗೆ ಬ್ಲ್ಯಾಕ್​ಕಾರ್ನರ್ ನೋಟಿಸ್

 ಏನಿದು ಬ್ಲ್ಯಾಕ್ ಕಾರ್ನರ್ ನೋಟಿಸ್?: ಉಗ್ರರ ಶವಗಳ ಗುರುತು ಪತ್ತೆಗೆ ಬ್ಲ್ಯಾಕ್ ಕಾರ್ನರ್ ನೋಟಿಸು ಜಾರಿಮಾಡಲಾಗುತ್ತದೆ. ಸದಸ್ಯರಾಷ್ಟ್ರಗಳ ಬೇಡಿಕೆ ಮೇರೆಗೆ ಇಂಟರ್​ಪೋಲ್ ಬ್ಲ್ಯಾಕ್ ಕಾರ್ನರ್ ನೋಟಿಸ್ ಜಾರಿ ಮಾಡುತ್ತದೆ. ಇದರಿಂದ ಉಗ್ರ ಯಾವ ದೇಶಕ್ಕೆ ಸೇರಿದವ ಎಂಬುದು ಪತ್ತೆಯಾಗುತ್ತಿದ್ದಂತೆ ಆ ದೇಶ ಉಗ್ರನ ಬಗ್ಗೆ ಎಲ್ಲ ವಿವರಗಳನ್ನೂ ನೀಡಬೇಕಾಗುತ್ತದೆ.ಪಠಾಣ್​ಕೋಟ್ ಕಾರ್ಯಾಚರಣೆ ವೇಳೆ ಉಗ್ರರ ಮುಖಗಳು ಸುಟ್ಟು ಕರಕಲಾಗಿದೆ. ಅವರ

ಟ್ಯೂಷನ್ ಹಾವಳಿ ತಪ್ಪಿಸಲು ಬಂದಿದೆ ಹೊಸ ಸಾಫ್ಟ್​ವೇರ್

ಸಿಇಟಿ ಹಾಗೂ ಜೆಇ ಪ್ರವೇಶ ಪರೀಕ್ಷೆಗಳ ವಿದ್ಯಾರ್ಥಿಗಳ ಟ್ಯೂಷನ್ ಹಾವಳಿ ತಪ್ಪಿಸುವ ಸಲುವಾಗಿ ಬೈಟ್ ಲಾಜಿಕ್ ಕಮ್ಯೂನಿಕೇಷನ್ ಸಂಸ್ಥೆ ಇ ಟೆಸ್ಟ್ ಝೋನ್ ಸಾಫ್ಟ್​ವೇರ್ ಸಂಶೋಧಿಸಿದ್ದು,  ಇ ಟೆಸ್ಟ್ ಝೋನ್ ವ್ಯವಸ್ಥಾಪಕ ನಿರ್ದೇಶಕ ಶೇಖರ್ ರೌತ್ ಚಾಲನೆ ನೀಡಿದರು.ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳು ಸಿಇಟಿ, ಜೆಇ ಪ್ರವೇಶ

ಏಕರೂಪ ನಾಗರಿಕ ಸಂಹಿತೆ, ಸುಪ್ರೀಂಕೋರ್ಟ್ ಮಧ್ಯ ಪ್ರವೇಶವಿಲ್ಲ


ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಇದು ಸಂಸತ್​ಗೆ ಬಿಟ್ಟ ವಿಚಾರವಾಗಿದ್ದು, ಸುಪ್ರೀಂಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ.

ಉದ್ಯೋಗಖಾತರಿ ಅನುಷ್ಠಾನದಲ್ಲಿ ಬೆಳಗಾವಿ ನಂ.1


ಮಹಾತ್ಮಗಾಂಧೀಜಿರಾಷ್ಟ್ರೀಯಗ್ರಾಮೀಣಉದ್ಯೋಗಖಾತರಿ (ಎಂಎನ್​ಆರ್​ಇಜಿ) ಯೋಜನೆ ಅನುಷ್ಠಾನ ಹಾಗೂ ಮಾನವದಿನಗಳ ಸೃಷ್ಟಿಯಲ್ಲಿ ಬೆಳಗಾವಿ ಜಿಲ್ಲಾಪಂಚಾಯಿತಿ ರಾಜ್ಯದಲ್ಲಿ ನಂ.1 ಸ್ಥಾನದಲ್ಲಿದೆ.9 ತಿಂಗಳ ಅವಧಿಯಲ್ಲಿ 80.28 ಕೋಟಿರೂ.ಖರ್ಚುಮಾಡಿ, ಅತಿಹೆಚ್ಚು ಮಾನವದಿನ ಅಂದರೆ, 27.47ಲಕ್ಷದಿನಗಳನ್ನುಸೃಷ್ಟಿಮಾಡಿದೆ. 69.37 ಕೋಟಿರೂ. ವ್ಯಯಿಸಿ, 24.05 ಲಕ್ಷ ಮಾನವದಿನ ಸೃಷ್ಟಿಸಿರುವ ರಾಯಚೂರು ಜಿಲ್ಲೆರಾಜ್ಯಕ್ಕೆ 2ನೇಸ್ಥಾನದಲ್ಲಿದೆ. 59.40 ಕೋಟಿರೂ

ಸಿಕ್ಕಿಂ ಸಂಪೂರ್ಣ ಸಾವಯವ ಕೃಷಿ ರಾಜ್ಯ

  

ಈಶಾನ್ಯ ಭಾರತದ ಪುಟ್ಟ ರಾಜ್ಯ ಸಿಕ್ಕಿಂ ದೇಶದ ಮೊದಲ `ಸಾವಯವ ರಾಜ್ಯ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

75 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸುಸ್ಥಿರ ಕೃಷಿ ಕೈಗೊಂಡು ಈ ಸಾಧನೆ ಮಾಡಿದೆ.

2003ರಲ್ಲಿ ಸರ್ಕಾರ ರಾಜ್ಯವನ್ನು ಸಂಪೂರ್ಣ ಸಾವಯವಗೊಳಿಸುವ ನಿರ್ಧಾರ ಕೈಗೊಂಡಿತು.

ನಂತರ ಕೃಷಿ ಜಮೀನುಗಳಲ್ಲಿ ರಾಸಾಯನಿಕ ಬಳಕೆಯನ್ನು ನಿರ್ಬಂಧಿಸಲಾಯಿತು. ಕೃಷಿಗೆ ಬಳಸುವ ರಾಸಾಯನಿಕಗಳ ಮಾರಾಟ ನಿಷೇಧಿಸಲಾಯಿತು.

ಹಾಗಾಗಿ ರೈತರಿಗೆ ಸಾವಯವ ಪದ್ಧತಿ ಅಳವಡಿಸಿಕೊಳ್ಳದೆ ಬೇರೆ ದಾರಿ ಇಲ್ಲದಂತಾಯಿತು.

ಹೀಗೆ ರಾಸಾಯನಿಕ ಗೊಬ್ಬರಗಳು, ಕೀಟ ನಾಶಕಗಳ ಬಳಕೆ ಇಲ್ಲದ ಪರಿಸರ ಪೂರಕ ಬೇಸಾಯ ಅಲ್ಲಿ ಸಾಧ್ಯವಾಯಿತು.

ಅನುಕೂಲಗಳು  :

ಈ ಮಾದರಿ ವ್ಯವಸಾಯವನ್ನು ಆದಾಯದ ಮೂಲವಾಗಿಸಿದೆ. ಜೈವಿಕ ವೈವಿಧ್ಯತೆ, ಮಣ್ಣಿನ ಫಲವತ್ತತೆ, ಮತ್ತು ಪರಿಸರ ರಕ್ಷಣೆ ಸಾಧ್ಯವಾಗಿದೆ. ಸಾವಯವ ಕೃಷಿಯಿಂದ ಉತ್ಪಾದನೆಯೂ ಹೆಚ್ಚಿದೆ.

ಹಿಮಾಲಯದ ತಪ್ಪಲಿನ ಈ ಸಣ್ಣ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೂ ಇದರಿಂದ ಪ್ರಯೋಜನವಾಗಿದೆ\



ವಿಶ್ವದಲ್ಲೇ ಮೊದಲ ಸೈಕಲ್ಹೈವೇ!

ವಿಶ್ವದ ಮೊದಲ ಸೈಕಲ್ಹೆದ್ದಾರಿಯನ್ನು ಜರ್ಮನಿಯ ಮುಲ್ಹೀಮ್ನಗರದಲ್ಲಿ ನಿರ್ವಿುಸಲಾಗಿದೆ. ಮೊದಲ ಐದುಕಿ.ಮೀ ಉದ್ದದ ಹೆದ್ದಾರಿಇದಾಗಿದ್ದು, ಮುಂದಿನ ದಿನಗಳಲ್ಲಿ 100 ಕಿ.ಮೀಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಇದು ಪಶ್ಚಿಮಜರ್ಮನಿಯ 10 ನಗರಗಳನ್ನುಸಂರ್ಪಸಲಿದೆ. ಇತರ ವೇಗದ ವಾಹನಗಳಿಲ್ಲದ ಮೃದುವಾದ ರಸ್ತೆಯಲ್ಲಿ ಸೈಕಲ್ತುಳಿಯುವ ಖುಷಿಯನ್ನು ಇನ್ನು ಜರ್ಮನಿಯ ನಾಗರಿಕರು ಅನುಭವಿಸಬಹುದಾಗಿದೆ. ಈ ರಸ್ತೆಯ ಸುತ್ತಲೂ 20ಲಕ್ಷಕ್ಕೂಹೆಚ್ಚು ಜನರು ವಾಸಿಸುತ್ತಿದ್ದು, ಇದು

ಭಾರತ ದೇಶದ ಆರ್ಥಿಕತೆ ಉತ್ತಮ: ಐಎಂಎಫ್


ಮುಂದಿನ ಹಣಕಾಸು ಸಾಲಿನಲ್ಲಿ ಜಿಡಿಪಿ ಬೆಳವಣಿಗೆ ಶೇ.7.5ರಷ್ಟು ಇರಲಿದೆ ಎಂದು ಹೇಳಿದೆ. ಆದರೆ ವಿಶ್ವದ ಆರ್ಥಿಕ ಪ್ರಗತಿಯನ್ನು ಶೇ.3.4ಕ್ಕೆ ಇಳಿಸಿದೆ. ಐಎಂಎಫ್  ತನ್ನ ಅಪ್ ಡೇಟ್ ಮಾಡಿದ ವಿಶ್ವ ಆರ್ಥಿಕ ಮುನ್ನೋಟ ವರದಿ ಬಿಡುಗಡೆ ಮಾಡಿದ್ದು, ಪ್ರಸಕ್ತ ಹಣಕಾಸು ಸಾಲಿನಲ್ಲಿ ಚೀನಾದ ಆರ್ಥಿಕ ಪ್ರಗತಿ ಈ ವರ್ಷ ಶೇ.6.3ಕ್ಕೆ ಮತ್ತು ಮುಂದಿನ ಸಾಲಿನಲ್ಲಿ ಶೇ.6ಕ್ಕೆ

ತುರ್ಕಮೇನಿಸ್ತಾನದಲ್ಲಿ ತಂಬಾಕಿಗೆ ಪೂರ್ಣ ನಿಷೇಧ

ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ ತುರ್ಕಮೇನಿಸ್ತಾನ ಸಂಪೂರ್ಣವಾಗಿ ನಿಷೇಧ ಹೇರಿದೆ. ಈ ಸಂಬಂಧ ತಂಬಾಕು ವಿರೋಧಿ ಕಾನೂನನ್ನು ಜಾರಿಗೊಳಿಸಲಾಗಿದೆ.ಅಂಗಡಿಗಳು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿದ್ದು ಕಂಡು ಬಂದರೆ ಒಂದು ಲಕ್ಷ ರೂ.ನಷ್ಟು ದಂಡ ವಿಧಿಸಲಾಗುವುದು . ಈ ಮೂಲಕ ತುರ್ಕಮೇನಿಸ್ತಾನ ತಂಬಾಕು ಉತ್ಪನ್ನಗಳ ಮೇಲೆ ಪರಿಣಾಮಕಾರಿಯಾಗಿ ನಿಷೇಧ ಹೇರಿದ ವಿಶ್ವದ ಮೊದಲ ದೇಶ ಎನಿಸಿಕೊಂಡಿದೆ.ವಿಶ್ವದಲ್ಲಿಯೇ ಅತಿ ಕಡಿಮೆ ಸಿಗರೇಟು

ರಾಜ್ಯದ ಮಕ್ಕಳು, ಯುವಕರಿಗೆ ಉಚಿತ ಆರೋಗ್ಯ ವಿಮೆ?



 ಬೆಂಗಳೂರು: ಎಳೆಯ ಮಕ್ಕಳೂ ಸೇರಿದಂತೆ 18 ವರ್ಷದೊಳಗಿನ ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ಭಾಗ್ಯ ಜಾರಿಗೊಳಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಅಂಗನವಾಡಿವರೆಗಿನ ವಯಸ್ಸಿನೊಳಗಿರುವ ಎಲ್ಲಾ ಮಕ್ಕಳು ಹಾಗೂ ಅಂಗನವಾಡಿ, ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ವಿಮೆ ಜಾರಿಗೊಳಿಸುವ ಕುರಿತಂತೆ ಆರೋಗ್ಯ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿ

ಹೆರಿಗೆ ಸಮಸ್ಯೆಗಳಿಂದ ದೇಶದಲ್ಲಿ ಪ್ರತಿ ಗಂಟೆಗೆ ಐದು ಮಹಿಳೆ ಸಾವು: ವಿಶ್ವ ಆರೋಗ್ಯ ಸಂಸ್ಥೆ


ನವದೆಹಲಿ: ಹೆರಿಗೆ ಸಂದರ್ಭದಲ್ಲಿ ಸಮಸ್ಯೆಗಳುಂಟಾಗಿ ಪ್ರತಿ ಗಂಟೆಗೆ ಸುಮಾರು 5 ಮಂದಿ ಮಹಿಳೆಯರು ಭಾರತದಲ್ಲಿ ಸಾವನ್ನಪ್ಪುತ್ತಾರೆ. ಅದರಲ್ಲೂ ರಕ್ತಸ್ರಾವದಿಂದ ಸಾವನ್ನಪ್ಪುವ ಮಹಿಳೆಯರ ಸಂಖ್ಯೆ ಅಧಿಕ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.ಭಾರತದಲ್ಲಿ ಪ್ರತಿವರ್ಷ ಸುಮಾರು 45 ಸಾವಿರ ತಾಯಂದಿರು ಹೆರಿಗೆ ಸಂದರ್ಭದಲ್ಲಿ ಉಂಟಾಗುವ ತೊಂದರೆಯಿಂದ ಸಾವನ್ನಪ್ಪುತ್ತಿದ್ದಾರೆ. ಜಾಗತಿಕವಾಗಿ ಈ ಪ್ರಮಾಣ ಶೇಕಡಾ 17ರಷ್ಟಿದೆ ಎಂದು ಹೇಳಿದೆ.ಹೆರಿಗೆ ಸಂದರ್ಭದಲ್ಲಿ ರಕ್ತಸ್ರಾವ

ಹೆರಿಗೆ ಸಮಸ್ಯೆಗಳಿಂದ ದೇಶದಲ್ಲಿ ಪ್ರತಿ ಗಂಟೆಗೆ ಐದು ಮಹಿಳೆ ಸಾವು: ವಿಶ್ವ ಆರೋಗ್ಯ ಸಂಸ್ಥೆ


ನವದೆಹಲಿ: ಹೆರಿಗೆ ಸಂದರ್ಭದಲ್ಲಿ ಸಮಸ್ಯೆಗಳುಂಟಾಗಿ ಪ್ರತಿ ಗಂಟೆಗೆ ಸುಮಾರು 5 ಮಂದಿ ಮಹಿಳೆಯರು ಭಾರತದಲ್ಲಿ ಸಾವನ್ನಪ್ಪುತ್ತಾರೆ. ಅದರಲ್ಲೂ ರಕ್ತಸ್ರಾವದಿಂದ ಸಾವನ್ನಪ್ಪುವ ಮಹಿಳೆಯರ ಸಂಖ್ಯೆ ಅಧಿಕ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.ಭಾರತದಲ್ಲಿ ಪ್ರತಿವರ್ಷ ಸುಮಾರು 45 ಸಾವಿರ ತಾಯಂದಿರು ಹೆರಿಗೆ ಸಂದರ್ಭದಲ್ಲಿ ಉಂಟಾಗುವ ತೊಂದರೆಯಿಂದ ಸಾವನ್ನಪ್ಪುತ್ತಿದ್ದಾರೆ. ಜಾಗತಿಕವಾಗಿ ಈ ಪ್ರಮಾಣ ಶೇಕಡಾ 17ರಷ್ಟಿದೆ ಎಂದು ಹೇಳಿದೆ.ಹೆರಿಗೆ ಸಂದರ್ಭದಲ್ಲಿ ರಕ್ತಸ್ರಾವ

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌರಶಕ್ತಿ ಮೂಲಕ ವಿದ್ಯುತ್ ಪೂರೈಕೆ


 ನವದೆಹಲಿ: ಶುದ್ಧ ಇಂಧನ ಮತ್ತು ಪರಿಣಾಮಕಾರಿ ಆರೋಗ್ಯ ನಡುವೆ ಸಂಪರ್ಕ ಕಲ್ಪಿಸಿರುವ ಕೇಂದ್ರ ಸರ್ಕಾರ ದೇಶಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿದ್ಯುತ್ ಪೂರೈಕೆಗೆ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸಲು ನಿರ್ಧರಿಸಿದೆ.ಇಂಧನ, ಪರಿಸರ ಮತ್ತು ಜಲ ಮಂಡಳಿಯ ಸಹಯೋಗದೊಂದಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೊಸ ಅಭಿಯಾನವನ್ನು ಪ್ರಾರಂಭಿಸಿದೆ.ಗ್ರಾಮೀಣ, ಪಟ್ಟಣ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಿರಂತರ ವಿದ್ಯುತ್

ಆಫ್ರಿಕಾ ಪ್ರವಾಸ ನನಗೆ ತೀರ್ಥ ಯಾತ್ರೆ ಇದ್ದಂತೆ: ಪ್ರಧಾನಿ ನರೇಂದ್ರ ಮೋದಿ



ಪ್ರಿಟೋರಿಯ: ದಕ್ಷಿಣ ಆಫ್ರಿಕಾದ ಭೇಟಿಯ ಅಂತಿಮ ದಿನಗಳಲ್ಲಿ ಮಹಾತ್ಮಾ ಗಾಂಧಿ ರೈಲು ಸಂಚಾರ ಕೈಗೊಂಡಿದ್ದ ಮಾದರಿಯಲ್ಲೇ, ದಕ್ಷಿಣ ಆಫ್ರಿಕಾದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸಹ ಐತಿಹಾಸಿಕ ರೈಲು ಪ್ರಯಾಣ ನಡೆಸಿದ್ದಾರೆ.ಮಾನವನೊಬ್ಬನ ಜೀವಿತ ಮುಕ್ತಾಯಗೊಂಡು ಮಹಾತ್ಮನೊಬ್ಬನ ಜೀವನ ಪ್ರಾರಂಭವಾದ ಭೂಮಿ ದಕ್ಷಿಣ ಆಫ್ರಿಕಾ ಆಗಿದ್ದು, ಆಫ್ರಿಕಾ ಪ್ರವಾಸ ನನಗೆ ತೀರ್ಥಯಾತ್ರೆ ಇದ್ದಂತೆ ಎಂದು ಮೋದಿ ಹೇಳಿದ್ದಾರೆ.ದಕ್ಷಿಣ ಅಪಹರಿಕಾದಲ್ಲಿ

ಭಯೋತ್ಪಾದನೆ ವಿರುದ್ಧದ ಹೋರಾಟ: ಅಮೆರಿಕಾಗೆ ಪಾಕಿಸ್ತಾನ ಮಿತ್ರನೋ ಶತೃವೋ ಎಂಬ ಬಗ್ಗೆ ಚರ್ಚೆ

ವಾಷಿಂಗ್ ಟನ್: ಭಯೋತ್ಪಾದನೆ ವಿರುದ್ಧದ ಹೋರಾಟದ ವಿಷಯದಲ್ಲಿ ಇಸ್ಲಾಮಾಬಾದ್ ದ್ವಂದ್ವ ನಿಲುವು ಹೊಂದಿರುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅಮೆರಿಕ, ಪಾಕಿಸ್ತಾನ ತನಗೆ ಮಿತ್ರನೋ ಶತೃವೋ ಎಂಬ ಬಗ್ಗೆ ಚರ್ಚೆ ನಡೆಸಲಿದೆ.ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಸಂಬಂಧದ ಬಗ್ಗೆ ಅಮೆರಿಕ ಕಾಂಗ್ರೆಸ್ ನಲ್ಲಿ ಮುಂದಿನ ವಾರ ಚರ್ಚೆ ನಡೆಯಲಿದ್ದು, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಮೆರಿಕಾಗೆ ಪಾಕಿಸ್ತಾನ ಮಿತ್ರ ರಾಷ್ಟ್ರವೋ ಶತೃರಾಷ್ಟ್ರವೋ

ಕೇಂದ್ರ ಸರ್ಕಾರಿ ನೌಕರರ ಆರಂಭಿಕ ವೇತನವನ್ನು 20 ಸಾವಿರ ನಿಗದಿಪಡಿಸುವ ಸಾಧ್ಯತೆ


ನವದೆಹಲಿ: ಏಳನೇ ವೇತನ ಆಯೋಗದ ಶಿಫಾರಸ್ಸುಗಳನ್ನು ನಿರಾಕರಿಸಿರುವ ಕೇಂದ್ರ ಸರ್ಕಾರಿ ನೌಕರರು ಆರಂಭಿಕ ವೇತನದಲ್ಲಿ ಮತ್ತು ಫಿಟ್ ಮೆಂಟ್ ಸೂತ್ರದಲ್ಲಿ ಮಾರ್ಪಾಡುಗಳನ್ನು ಮಾಡಲು ಒತ್ತಾಯಿಸಿದ್ದಾರೆ. ಈ ಸಂಬಂಧ ಸರ್ಕಾರಿ ನೌಕರರ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಲು ಉನ್ನತ ಮಟ್ಟದ ಸಮಿತಿಗೆ ಸರ್ಕಾರ ಸೂಚಿಸಿದೆ.ಕೇಂದ್ರ ಸರ್ಕಾರಿ ನೌಕರರ ಒಕ್ಕೂಟ ಬೇಡಿಕೆಯಿಟ್ಟಿರುವ ನೌಕರರ ಕನಿಷ್ಠ ವೇತನ 26 ಸಾವಿರ ರೂಪಾಯಿಗಳನ್ನು ಈಡೇರಿಸಲು ಸಾಧ್ಯವಿಲ್ಲ. ಕನಿಷ್ಠ

ಝಕೀರ್ ವಿರುದ್ಧ ಕ್ರಮ: ಪೀಸ್‌ ಟಿ.ವಿ ಪ್ರಸಾರ ಸ್ಥಗಿತ?

ನವದೆಹಲಿ : ಅನಧಿಕೃತ ವಾಹಿನಿಗಳ ಪ್ರಸಾರ ತಡೆಗೆ ಮುಂದಾಗಿರುವ ಕೇಂದ್ರ ಸರ್ಕಾರ, ಇಂತಹ ವಾಹಿನಿಗಳನ್ನು ಕೇಬಲ್‌ ಮೂಲಕ ಪ್ರಸಾರ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಬಲ್‌ ಆಪರೇಟರ್‌ಗಳಿಗೆ ಎಚ್ಚರಿಕೆ ನೀಡಿದೆ.ಧರ್ಮ ಪ್ರಚಾರಕ ಝಕೀರ್‌ ನಾಯ್ಕ್‌ ಅವರು ‘ಪೀಸ್‌ ಟಿ.ವಿ’ಯಲ್ಲಿ ಮಾಡಿರುವ ಭಾಷಣಗಳು ವಿವಾದ ಸೃಷ್ಟಿಸಿರುವ ಕಾರಣ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಪೀಸ್‌ ಟಿ.ವಿಗೆ ಪರವಾನಗಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವಾರ್ತಾ ಮತ್ತು ಪ್ರಸಾರ ಸಚಿವ

ಸಮಗ್ರ ತನಿಖೆ :ರಾಜನಾಥ್


ಪ್ರಚೋದನಾಕಾರಿ ದ್ವೇಷ ಭಾಷಣ ಮಾಡಿದ ಆರೋಪ ಎದುರಿಸುತ್ತಿರುವ ಇಸ್ಲಾಂ ಧರ್ಮ ಪ್ರಚಾರಕ ಝಕೀರ್‌ ನಾಯ್ಕ್ ಅವರ ಅಗತ್ಯ ಕ್ರಮ ತೆಗೆದುಕೊಳ್ಳುವ ಸಂಬಂಧ ಭಾಷಣದ ಸಿ.ಡಿ.ಗಳನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಭಯೋತ್ಪಾದನೆ ವಿಚಾರದಲ್ಲಿ ಸರ್ಕಾರ ಯಾವುದೇ ರಾಜಿಯಾಗುವುದಿಲ್ಲ ಎಂದು ಗೃಹಸಚಿವ ರಾಜನಾಥ್‌ ಸಿಂಗ್‌ ಸ್ಪಷ್ಟಪಡಿಸಿದರು.ಕಾರ್ಯಕ್ರಮವೊಂದರ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಝಕೀರ್‌ ನಾಯ್ಕ್ ಅವರ

ಖಂಡಾಂತರ ಕ್ಷಿಪಣಿಯನ್ನು ಪರೀಕ್ಷಿಸಿದ ಉತ್ತರ ಕೊರಿಯಾ

 ಸಿಯೋಲ್: ಜಲಾಂತರ್ಗಾಮಿ ನೌಕೆಯ ಮೂಲಕ ಉಡಾಯಿಸಬಹುದಾದ ಖಂಡಾಂತರ ಕ್ಷಿಪಣಿಯನ್ನು ಉತ್ತರ ಕೊರಿಯಾ ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ದಕ್ಷಿಣ ಕೊರಿಯಾದ ಅಧಿಕಾರಿಗಳು ತಿಳಿಸಿದ್ದಾರೆ.ಉತ್ತರ ಕೊರಿಯಾದ ಪೂರ್ವ ಕರಾವಳಿಯಲ್ಲಿ ಕ್ಷಿಪಣಿಯ ಪರೀಕ್ಷೆ ನಡೆಸಲಾಗಿದೆ. ಆದರೆ ಕ್ಷಿಪಣಿ ಎಷ್ಟು ದೂರ ಹಾರಿದೆ ಮತ್ತು ಎಲ್ಲಿ ಗುರಿ ಮುಟ್ಟಿದೆ ಎಂಬ ಕುರಿತು ಸ್ಪಷ್ಟವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ದಕ್ಷಿಣ ಕೊರಿಯಾದ ರಕ್ಷಣಾ ಸಚಿವಾಲಯದ ಅಧಿಕಾರಿಗಳು

ಭಾರತ-ಆಫ್ರಿಕಾ ನಡುವೆ ಭದ್ರತೆ, ಗಣಿಗಾರಿಕೆ ಒಪ್ಪಂದ


ಪ್ರಿಟೋರಿಯಾ: ತಮ್ಮ ಸಾಂಪ್ರದಾಯಿಕ ಸಂಬಂಧಗಳನ್ನು ಇನ್ನಷ್ಟು ಸುಭದ್ರಗೊಳಿಸಿಸುವುದರ ಜೊತೆಗೆ ಉತ್ಪಾದನೆ, ರಕ್ಷಣೆ, ಗಣಿಗಾರಿಕೆ ಮತ್ತು ಖನಿಜ ಕ್ಷೇತ್ರಗಳಲ್ಲಿ ಸಂಬಂಧಗಳನ್ನು ಹೆಚ್ಚಿಸಲು ಮುಂದಾಗಿದೆ. ಅಲ್ಲದೇ ಭಯೋತ್ಪಾದನೆ ಮತ್ತು ಬಹುಪಕ್ಷೀಯ ಸಮಸ್ಯೆಗಳನ್ನು ಸಕ್ರಿಯವಾಗಿ ನಿವಾರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.ದಕ್ಷಿಣ ಆಫ್ರಿಕಾ ಅಧ್ಯಕ್ಷ ಜಾಕೋಬ್ ಝುಮಾ ಜೊತೆ ಮಾತುಕತೆ ನಡೆಸಿದ ಪ್ರಧಾನಿ ಮೋದಿ, ಭಾರತ ರಕ್ಷಣಾ ಉಪಕರಣಗಳ

Friday 8 July 2016

ಗಂಗಾ ಕಾಯ್ದೆ ರಚನೆಗೆ ಕೇಂದ್ರ ಚಿಂತನೆ

 ಹರಿದ್ವಾರ ; ನಮಾಮಿ ಗಂಗೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವ ಸಂಬಂಧ ಗಂಗಾ ಕಾಯ್ದೆ ರಚಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಜಲ ಸಂಪನ್ಮೂಲ ಮತ್ತು ಗಂಗಾನದಿ ಪುನಶ್ಚೇತನ ಖಾತೆ ಸಚಿವೆ ಉಮಾ ಭಾರತಿ ತಿಳಿಸಿದರು.₹250 ಕೋಟಿ ವೆಚ್ಚದಲ್ಲಿ ನಮಾಮಿ ಗಂಗೆ ಯೋಜನೆಯಡಿ ಕೈಗೆತ್ತಿಕೊಂಡಿ ರುವ 43 ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು,   ‘ಕೈಗಾರಿಕೆಗಳು ತ್ಯಾಜ್ಯವನ್ನು  ನದಿಗೆ ಬಿಡುವಂತಿಲ್ಲ.  ಕೈಗಾರಿಕೆಗಳ

ಹಿರಿದಾಗಬೇಕಿದೆ ತೆರಿಗೆ ವರ್ತುಲ

 ಇದುವರೆಗೆ ಆದಾಯ ತೆರಿಗೆ ಇಲಾಖೆ ವ್ಯಾಪ್ತಿಗೆ ಬಾರದ, ಕೊಂಚ ತೆರಿಗೆ ನೀಡಲು ಕಷ್ಟವೇನೂ ಆಗದ ದೊಡ್ಡ ವರ್ಗವೊಂದು ನಮ್ಮ ಮಹಾನಗರಗಳಲ್ಲಷ್ಟೇ ಅಲ್ಲ, ಸಣ್ಣ ಪಟ್ಟಣಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲೂ ಇದೆ. ಆ ಕುರಿತು ಅವರನ್ನು ಶಿಕ್ಷಿತರನ್ನಾಗಿಸುವ, ಪ್ರೇರೇಪಿಸುವ ಕೆಲಸವಾಗಬೇಕಾಗಿದೆ.ಬತ್ತರ ದಶಕದಲ್ಲಿ ದೇಶದಲ್ಲಿ ಉದಾರೀಕರಣದ ಗಾಳಿ ಬೀಸುವ ಮೊದಲು ಲೈಸೆ… ರಾಜ್‌ ಹಾವಳಿಯಿಂದ ಉದ್ದಿಮೆಗಳನ್ನು ಸ್ಥಾಪಿಸಲಿಚ್ಛಿಸುವವರು ಸರಕಾರದ ಒಂದು ಕಚೇರಿಯಿಂದ

ಎಚ್‌ಐವಿ ರೋಗಿಗಳಿಗೆ ಚಿಕಿತ್ಸೆ ಪಡೆವ ಮಸೂದೆಗೆ ಮರುಜೀವ?

  ನವದೆಹಲಿ: ಯುಪಿಎ ಸರ್ಕಾರ ಜಾರಿಗೊಳಿಸಲುದ್ದೇಶಿಸಿದ್ದ, ಎಚ್‌ಐವಿ, ಏಯ್ಡ್ಸ್ ರೋಗಿಗಳಿಗೆ ಆ್ಯಂಟಿರೆಟ್ರೊವೈರಲ್ ಥೆರಪಿ ಪಡೆಯುವುದು ಕಾನೂನುಬದ್ಧ ಹಕ್ಕು ಎಂಬ ಅವಕಾಶವನ್ನು ನೀಡುವ ಎಚ್‌ಐವಿ/ಏಡ್ಸ್ (ತಡೆ ಮತ್ತು ನಿಯಂತ್ರಣ) ಮಸೂದೆ, 2014ನ್ನು ಕೇಂದ್ರ ಸರ್ಕಾರ ಮರು ಪರಿಶೀಲನೆ ನಡೆಸಿದೆ. ಈ ಬಗ್ಗೆ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದ್ದು, ಈ ಕುರಿತು ಸಂಸದೀಯ ಸ್ಥಾಯಿ ಸಮಿತಿ ಗುರುತಿಸಿರುವ ಅಂಶಗಳನ್ನು ಪರಿಶೀಲಿಸಲು ಹಣಕಾಸು ಸಚಿವ ಅರುಣ್ ಜೇಟ್ಲಿ ಅಧ್ಯಕ್ಷತೆಯಲ್ಲಿ

ಹೈಕೋರ್ಟ್‌ಗಳಲ್ಲಿ 470 ಜಡ್ಜ್ ಹುದ್ದೆಗಳು ಖಾಲಿ : ಕರ್ನಾಟಕದಲ್ಲೂ ಖಾಲಿಯಿವೆ



ನವದೆಹಲಿ: ಕರ್ನಾಟಕವೂ ಸೇರಿದಂತೆ ದೇಶದ 24 ಹೈಕೋರ್ಟ್‌ಗಳಲ್ಲಿ ಬರೋಬ್ಬರಿ 470 ನ್ಯಾಯಾಧೀಶರ ಹುದ್ದೆಗಳು ಖಾಲಿಬಿದ್ದಿವೆ ಎಂದು ಕಾನೂನು ಸಚಿವಾಲಯದ ದತ್ತಾಂಶಗಳು ತಿಳಿಸಿವೆ. ಉನ್ನತ ನ್ಯಾಯಾಂಗಕ್ಕೆ ನ್ಯಾಯಾಧೀಶರ ನೇಮಕ ಕುರಿತು ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ಭಿನ್ನಾಭಿಪ್ರಾಯಗಳು ಮುಂದುವರಿದಿರುವ ನಡುವೆಯೇ ಈ ವಿಚಾರ ಬೆಳಕಿಗೆ ಬಂದಿದೆ. ಪ್ರಸಕ್ತ ವರ್ಷದ ಆರಂಭದಲ್ಲಿ 443 ಜಡ್ಜ್ ಹುದ್ದೆಗಳು ಖಾಲಿಯಿದ್ದರೆ, 2014ರ ಅಂತ್ಯದಲ್ಲಿ ಈ ಸಂಖ್ಯೆ 232

ಕಣ್ಣಿನ ಸನ್ನೆಯಲ್ಲೇ ಮೊಬೈಲ್ ಆಪರೇಟ್.. ಬಂದಿದೆ ಅತ್ಯಾಧುನಿಕ ಸಾಫ್ಟವೇರ್


ನ್ಯೂಯಾರ್ಕ್(ಜು.03): ಭಾರತ ಮೂಲದ ವಿದ್ಯಾರ್ಥಿಯನ್ನೂ ಒಳಗೊಂಡ ಅಂತಾರಾಷ್ಟ್ರೀಯ ಸಂಶೋಧಕರ ತಂಡವೊಂದು ಕಣ್ಣಿನ ಚಲನೆ ಮೂಲಕವೇ ಸ್ಮಾರ್ಟ್ ಫೋನ್ ಆಪರೇಟ್ ಮಾಡಬಲ್ಲ ಅತ್ಯಾಧುನಿಕ ಸಾಫ್ಟ್`ವೇರ್ ಸಂಶೋಧಿಸಿದೆ.ಅಮೆರಿಕದ ಜಾರ್ಜಿಯಾ ವಿವಿಯ ಮಸ್ಸಾಚುಸೆಟ್ಸ್`ನ ಎಂಐಟಿ ಮತ್ತು ಜರ್ಮನಿಯ ಮ್ಯಾಕ್ಸ್ ಪ್ಲ್ಯಾಂಕ್ ಇನ್ಸ್`ಟಿಟ್ಯೂಟ್ ಆಫ್ ಇರ್ಫಮೇಟಿಕ್ಸ್`ನ ತಂಡ ಈ ಸಾಫ್ಟ್`ವೇರನ್ನ ಅಭಿವೃದ್ಧಿಪಡಿಸಿದೆ. ಒಂದು ಸೆಂಟಿಮೀಟರ್`ನಷ್ಟು ಸ್ಪಷ್ಟವಾಗಿ

ನಾಸಾದ ಸ್ಪರ್ಧೆಗೆ ಆಯ್ಕೆಯಾದ ಭಾರತದ 12 ವಿದ್ಯಾರ್ಥಿಗಳು


ನವದೆಹಲಿ(ಜು.1): ವಿಶ್ವದ ಪ್ರತಿಷ್ಟಿತ ಬಾಹ್ಯಕಾಶ ಸಂಸ್ಥೆಯಾದ ಅಮೆರಿಕಾದ ನಾಸಾ(ನ್ಯಾಷನಲ್ ಏರೋನಾಟಿಕ್ಸ್ ಅಂಡ್  ಸ್ಪೇಸ್ ಅಡ್ಮಿನಿಸ್ಟ್ರೇಷನ್) ಏರ್ಪಡಿಸುವ 'ಅಂತರರಾಷ್ಟ್ರೀಯ ಬಾಹ್ಯಾಕಾಶ ನೆಲೆಸುವಿಕೆಯು ವಿನ್ಯಾಸ ಸ್ಪರ್ಧೆ "ಗೆ(ಐಎಸ್'ಎಸ್'ಡಿಸಿ) ಭಾರತದ 12 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.ಈ ವಿದ್ಯಾರ್ಥಿಗಳು ಏಷ್ಯಾದ ಪ್ರಾದೇಶಿಕ ಸುತ್ತಿನಲ್ಲಿ ಪಾಕಿಸ್ತಾನ, ಚೀನಾ, ಜಪಾನ್ ಹಾಗೂ ಕೊರಿಯಾ ದೇಶಗಳನ್ನು ಒಳಗೊಂಡ ತಂಡಗಳ ವಿರುದ್ಧ ಜಯಿಸಿ ಅಂತಿಮ ಸುತ್ತಿಗೆ

ಪೊಲೀಸರ ವೇತನ ತಾರತಮ್ಯನಿವಾರಣೆಗೆ ಸಮಿತಿ ರಚನೆ

ಬೆಂಗಳೂರು(ಜು.8): ದಶಕಗಳಿಂದಲೂ ಕೇಳಿ ಬರುತ್ತಿರುವ ಪೊಲೀಸರ ವೇತನ ಹಾಗೂ ಸೌಲಭ್ಯ ತಾರತಮ್ಯ ಸರಿಪಡಿಸಲು ರಾಜ್ಯ ಸರ್ಕಾರ ಎಡಿಜಿಪಿ ರಾಘವೇಂದ್ರ ಔರಾದ್‌ಕರ್ ನೇತೃತ್ವದಲ್ಲಿ ಸಮಿತಿ ರಚಿಸಿದೆ. ತಿಂಗಳೊಳಗೆ ವರದಿ ನೀಡುವಂತೆಯೂ ನಿರ್ದೇಶನ ನೀಡಿದೆ. ಇದರೊಂದಿಗೆ ವೇತನ ತಾರತಮ್ಯದ ಬಗ್ಗೆ ಅಸಮಾಧಾನ ಹೊಂದಿದ್ದ ರಾಜ್ಯದ ಸುಮಾರು ಒಂದು ಲಕ್ಷ ಪೊಲೀಸರಿಗೆ ಭರವಸೆ ಈಡೇರುವ ಆಶಾಭಾವನೆ ಮೂಡಿದಂತಾಗಿದೆ.ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಕಳೆದ

CJ : ಹೆಲ್ಮೆಟ್, ಪೊಲೀಸ್ ಮತ್ತು ಸಂಚಾರ ನಿಯಮ….!

 ಮೈಸೂರು, :  ಕರ್ನಾಟಕ ಮೋಟಾರು ವಾಹನ (ತಿದ್ದುಪಡಿ) ನಿಯಮ 2015 ರ ಅನ್ವಯ ರಾಜ್ಯದಲ್ಲಿ ಎಲ್ಲಾ ರೀತಿಯ ದ್ವಿಚಕ್ರವಾಹನ ಸವಾರರಿಗೆ(ಹಿಂಬದಿ ಸವಾರರಿಗೂ ಸೇರಿದಂತೆ) ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ.ಸುಪ್ರೀಂ ಕೋರ್ಟಿನ ನಿರ್ದೇಶನದ ಮೇರೆಗೆ ಇಂತಹ ನಿಯಮ ರೂಪಿಸಲಾಗಿದೆ ಎನ್ನುವುದು ರಾಜ್ಯಸರಕಾರದ ಸಮರ್ಥನೆ!ಸುಪ್ರೀಂ ಕೋರ್ಟ್ ನೀಡುವ ಎಲ್ಲಾ ನಿರ್ದೇಶನಗಳನ್ನೂ ರಾಜ್ಯ ಸರಕಾರ ಪಾಲಿಸುತ್ತಿದೆಯೇ?ರಸ್ತೆಗಳಲ್ಲಿ ಇರುವ ಮಾರಣಾಂತಿಕ ಗುಂಡಿಗಳನ್ನು

ಕ್ರೀಡಾ ಸಾಧನೆಗಳಿಗೆ 25 ಸಾವಿರ ಪ್ರೋತ್ಸಾಹಧನ….

ಬೆಂಗಳೂರು,ಜು,1,2016:ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಕ್ರೀಡಾ ಸಂಸ್ಕೃತಿಯನ್ನು ಬೆಳಸಲು ಕ್ರೀಡಾ ಸಂಘಗಳ ಸ್ಥಾಪನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಪ್ರತಿ ಹೋಬಳಿಗೊಂದು ಕ್ರೀಡಾ ಮತ್ತು ಸಂಘವನ್ನು ಸ್ಥಾಪಿಸಿ ಸ್ಥಳೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಹಾಗೂ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ಮತ್ತು ಪ್ರತಿಭೆಗಳನ್ನು ಗುರುತಿಸಲು ಯುವ ಸಬಲೀಕರಣ ಕ್ರೀಡಾ ಇಲಾಖೆಯು ಪ್ರೋತ್ಸಾಹಧನವಾಗಿ ಪ್ರತಿ ಹೋಬಳಿಗೆ ಒಂದು ಕ್ರೀಡಾ ಸಂಘಕ್ಕೆ ವಾರ್ಷಿಕ ತಲಾ 25

ಮೈಸೂರು ವಿವಿಯ ಹೆಮ್ಮೆಯ ವಿದ್ಯಾರ್ಥಿ ಭಾರತ ರತ್ನ ಪುರಸ್ಕೃತ ಸಿ ಎನ್ ಆರ್ ರಾವ್

ಮೈಸೂರು: 2013ರಲ್ಲಿ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ ಭಾರತ ರತ್ನ ಪುರಸ್ಕೃತ ಹಿರಿಯ ವಿಜ್ಞಾನಿ ಪ್ರೊ ಸಿ.ಎನ್.ಆರ್. ರಾವ್ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಎಂಬುದು ಹೆಮ್ಮೆಯ ವಿಷಯ.  ಮೈಸೂರು ವಿಶ್ವವಿದ್ಯಾಲಯದಲ್ಲಿ 1951ರಲ್ಲಿ ರಾವ್ ತಮ್ಮ ವಿಜ್ಞಾನ ಪದವಿ ಅಧ್ಯಯನವನ್ನು ಮುಗಿಸಿದರು.  ಜೂನ್ 30, 1934ರಲ್ಲಿ ಜನಿಸಿದ ಪ್ರೊ.ಸಿ.ಎನ್.ಆರ್. ರಾವ್ ಅವರ ಪೂರ್ಣ ಹೆಸರು ಚಿಂತಾಮಣಿ ನಾಗೇಶ ರಾಮಚಂದ್ರರಾವ್.  ಸಿ.ಎನ್.ಆರ್. ರಾವ್ ಅವರ ತಂದೆ ಹನುಮಂತ

ಏರ್ಪೋರ್ಟ್ ಗೆ ಮೆಟ್ರೋ ರೈಲು, ನಿಗಮದಿಂದ ಸರ್ಕಾರಕ್ಕೆ ಪ್ಲಾನ್ ನೀಡಿಕೆಗೆ ನಿರ್ಧಾರ


ಬೆಂಗಳೂರು : ಬೆಂಗಳೂರು ಮೆಟ್ರೋ ರೈಲು ನಿಗಮವು ನಗರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮೆಟ್ರೋದ ವಿವರವಾದ ಚಿತ್ರಣವನ್ನು ಸರ್ಕಾರಕ್ಕೆ ನೀಡಲು ನಿರ್ಧರಿಸಿದೆ. ಮೆಟ್ರೋ ಫೆಸ್ II ಯೋಜನೆಯಡಿ ನಾಗವಾರದಿಂದ ಏರ್ಪೋರ್ಟ್ ವರೆಗೂ ಮೆಟ್ರೋ ವಿಸ್ತರಿಸಲು ಯೋಜಿಸಲಾಗಿದೆ.5 ವರ್ಷಗಳ ಹಿಂದೆಯೇ ಏರ್ಪೋರ್ಟ್ ಸಂಪರ್ಕಿಸುವ ಮಾರ್ಗದ ಬಗ್ಗೆ ಪ್ರಸ್ತಾವನೆ ಮಾಡಲಾಗಿತ್ತು. ಈ ಹಿಂದಿನ ಸರಕಾರ ವಿಮಾನ ನಿಲ್ದಾಣಕ್ಕೆ ಹೈಸ್ಪೀಡ್ ರೈಲ್

ಭಾರತೀಯ ವಾಯುಪಡೆಗೆ ಹೊಸ ಗರಿ – ಮಿಂಚಲಿದ್ದಾರೆ ಮೂವರು ಮಹಿಳಾ ಪೈಲಟ್ ಗಳು

ಹೈದರಾಬಾದ್: ಭಾರತೀಯ ಸೇನೆಯಲ್ಲಿ ಇನ್ನು ಮುಂದಕ್ಕೆ ಅನಿರೀಕ್ಷಿತ ಬದಲಾವಣೆಯನ್ನು ಕಾಣಲಿದ್ದೇವೆ. ಭಾರತೀಯ ವಾಯುಪಡೆಯ ಐತಿಹಾಸಿಕ ದಿನಕ್ಕೆ ಶನಿವಾರ ಸಾಕ್ಷಿಯಾಗಲಿದೆ. ಮೂವರು ಮಹಿಳಾ ಯುದ್ಧ ಪೈಲಟ್ ಗಳು ಇಂದು ಅಧಿಕೃತವಾಗಿ ಭಾರತೀಯ ವಾಯುಪಡೆಯಲ್ಲಿ ಮಿಂಚಲಿದ್ದಾರೆ. ಭಾವನಾ ಕಾಂತ್‌, ಅವನಿ ಚತುರ್ವೇದಿ ಮತ್ತು ಮೋಹನಾ ಸಿಂಗ್‌ ಅವರು ಹೊಸದಾಗಿ ಸೇರ್ಪಡೆಗೊಂಡು ಇತಿಹಾಸ ಸೃಷ್ಟಿಸಲಿದ್ದಾರೆ. ಈ ಮೂವರೂ ಮಹಿಳಾ

ಅಂತರಾಷ್ಟ್ರಿಯ ಚಿತ್ರಕಲಾ ಸ್ಪರ್ಧೆಯಲ್ಲಿ ರವಿವರ್ಮ ಚತ್ರಕಲಾ ಶಾಲೆಗೆ 5 ಚಿನ್ನದ ಪದಕ

 ಚಿರು ಅಕಾಡೆಮಿ ಗೌಜಿಯಾಬಾದ (ಉತ್ತರ ಪ್ರದೆಶ) ಇವರು ನಡೆಸಿದ ಅಂತರಾಷ್ಟ್ರಿಯ ಚಿತ್ರಕಲಾ ಸ್ಪರ್ಧೆ2016ರಲ್ಲಿ ರವಿವರ್ಮ ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳಾದ ಮಯಾ ಎಸ್.ರಾವ್. ಆಶಿಷ್.ಎನ್. ವಿದಾರ್ಥಿಆಚಾರ್ಯ.ಸೃಜನ್. ಮತ್ತು ಸಮರ್ಥ. ಇವರು ಭಾಗವಹಿಸಿ ಚಿನ್ನದ ಪಧಕ ಮತ್ತು ನಗದು ಬಹುಮಾನ ಪಡೆದಿರುತ್ತಾರೆ ಈ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯ

ಶಿವಮೊಗ್ಗ : ಹಾಡಿಗೆ ಶ್ರೇಷ್ಠಗಾಯಕಿ ಗಾಗಿ ನೀಡುವ ಫಿಲಂಫೇರ್ ಪ್ರಶ ಸ್ತಿಗೆ ಭಾಜನರಾಗಿರುವ ಇಂಚರ

ಶಿವಮೊಗ್ಗ (ವಿಶ್ವ ಕನ್ನಡಿಗ ನ್ಯೂಸ್) :ಇಂಚರ ರಾವ್. ಕನ್ನಡ ಚಿತ್ರರಂಗದಲ್ಲಿ ಗಾಯಕಿ ಯಾಗಿ ಮೆರೆಯುತ್ತಿರುವ ಹೆಸರು. `ರಂಗಿ ತರಂಗ’ ಚಿತ್ರದ ಕರೆ ಯೋಲೆ…’ ಹಾಡಿಗೆ ಶ್ರೇಷ್ಠಗಾಯಕಿ ಗಾಗಿ ನೀಡುವ ಫಿಲಂಫೇರ್ ಪ್ರಶ ಸ್ತಿಗೆ ಭಾಜನರಾಗಿರುವ `ಇಂಚರ’ ಶಿವಮೊಗ್ಗೆಯವಳು. ರೋಟರಿ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರ್ಣ ಗೊಳಿಸಿರುವ ಈಕೆ, ಪ್ರಸ್ತುತ ಅದೇ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿರುವ ಕೆ.ವಿ.ವಿಶಾಲಾಕ್ಷಮ್ಮ ಮತ್ತು ಎನ್.ಜಿ.ರಮೇಶ್ ದಂಪತಿಗಳ ಪುತ್ರಿ.ಝಿ ಕನ್ನಡ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಪುರಸ್ಕಾರ ಪ್ರಧಾನ ಸಮಾರಂಭ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2014ನೇ ಸಾಲಿನ ಶ್ರೇಷ್ಟ ಅನುವಾದಕ್ಕಾಗಿ ಪುರಸ್ಕೃತರಾದವರಿಗೆ ಹಾಗೂ 2015ನೇ ಸಾಲಿನ ಗೌರವ ಪ್ರಶಸ್ತಿ ಪಡೆದಿರುವ ಪ್ರತಿಷ್ಟಿತ ಅನುವಾದಕರಿಗೆ ಚಿಂತನ ಪುಸ್ತಕ ಬಳಗದ ಅಭಿನಂದನೆಗಳು.2009ರಲ್ಲಿ ಪ್ರಾರಂಭವಾದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ಧೇಶವನ್ನು ಹೊಂದಿದ ಸಂಸ್ಥೆ. ಈ ನಿಟ್ಟಿನಲ್ಲಿ ಅನುವಾದಿತ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆಗಾಗಿ ಪ್ರತಿವರ್ಷ

ಯೂರೋಪ್ ಸಂಪತ್ತು ಸೃಷ್ಟಿ ಕುಸಿತ : ಭಾರತದಲ್ಲಿ ಶೇ.400 ಹೆಚ್ಚಳ

 ನ್ಯೂಯಾರ್ಕ್: ಕಳೆದೊಂದು ದಶಕದಲ್ಲಿ ಯೂರೋಪ್ ಒಕ್ಕೂಟದ ಜನರ ಸರಾಸರಿ ಸಂಪತ್ತು ಶೇ.5ರಷ್ಟು ಕುಗ್ಗಿದೆ. ಅಂದರೆ, 2005-2015ರ ನಡುವೆ ಸಂಪತ್ತು ವೃದ್ದಿಯಾಗುವ ಬದಲು ಶೇ.5ರಷ್ಟು ಇಳಿದಿದೆ. ಇದೇ ವೇಳೆ ಭಾರತದ ಜನರ ಸರಾಸರಿ ಸಂಪತ್ತು ಶೇ.400ರಷ್ಟು ಏರಿಕೆ ಆಗಿದೆ.ನ್ಯೂ ವರ್ಲ್ಡ್ ವೆಲ್ತ್ ಸಮೀಕ್ಷೆ ಪ್ರಕಾರ ಯೂರೋಪ್ ಒಕ್ಕೂಟದ ಜನರ ಆಸ್ತಿ ಶೇ.5ರಷ್ಟು ಕುಗ್ಗಿದೆ. ಆಷ್ಟ್ರೇಲಿಯಾ ಶೇ.100ರಷ್ಟು ಕೆನಡಾ ಶೇ.50 ರಷ್ಟು ಹೆಚ್ಚಳವಾಗಿದೆ. ಯೂರೋಪ್ ಒಕ್ಕೂಟದ ಪೊಲಾಂಡ್, ಮಾಲ್ಟಾ

ಬಿಎಸ್‌ವೈಗೆ ಕೋರ್‌ ಕಮಿಟಿ ಶಾಕ್! ಶೋಭಾಗೆ ಕಮಿಟಿಯಲ್ಲಿ ಸ್ಥಾನವಿಲ್ಲ

 ಬೆಂಗಳೂರು: ಪಕ್ಷದ ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಬಂಡಾಯದ ಬಿಸಿ ಎದುರಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಭಾರೀ ಹಿನ್ನಡೆ ಉಂಟಾಗಿದ್ದು, ಖುದ್ದು ಪಕ್ಷದ ವರಿಷ್ಠರೇ ಮುಂದಾಗಿ ಯಡಿಯೂರಪ್ಪ ಅವರ ನಾಗಾಲೋಟಕ್ಕೆ ಬ್ರೇಕ್‌ ಹಾಕುವ ಪ್ರಯತ್ನ ಮಾಡಿದ್ದಾರೆ. ರಾಜ್ಯದಲ್ಲಿನ ಪಕ್ಷದ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರ ಹೊಂದಿರುವ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿಯನ್ನು ಶೋಭಾ

ಶಸ್ತ್ರಾಸ್ತ್ರ ಖರೀದಿಯಿಂದ ಮುಂದೆ ದೇಶಕ್ಕೆ ಹೆಚ್ಚಿನ ಲಾಭ: ಪರಿಕರ್‌

 ಬೆಂಗಳೂರು: ''ದೇಶಕ್ಕೆ ಅಗತ್ಯವಿರುವ ಶಸ್ತ್ರಾಸ್ತ್ರ ಖರೀದಿಯಿಂದ ಮುಂದಿನ 10 ವರ್ಷಗಳಲ್ಲಿ ದೇಶಕ್ಕೆ 12 ರಿಂದ 15 ಶತಕೋಟಿ ಡಾಲರ್‌ನಷ್ಟು ಲಾಭವಾಗಲಿದೆ,'' ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಹೇಳಿದರು.ಭಾರತೀಯ ವಿದ್ಯುನ್ಮಾನ ಉದ್ಯಮಗಳ ಒಕ್ಕೂಟ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ '7ನೇ ವ್ಯೂಹಾತ್ಮಕ ವಿದ್ಯುನ್ಮಾನ ಸಾಧನಗಳ ಸಮಾವೇಶ' ಉದ್ಘಾಟಿಸಿ ಅವರು ಮಾತನಾಡಿದರು.''ಕಳೆದ ಒಂದೂವರೆ

ಸೋಲಾರ್‌ ಗೋಲ್‌ಮಾಲ್‌: 9 ಇಇಗಳ ಅಮಾನತು

ಬೆಂಗಳೂರು: ಚಾವಣಿ ಸೌರ ವಿದ್ಯುತ್‌ ಉತ್ಪಾದನೆ ಸಂಬಂಧ ಖಾಸಗಿ ವ್ಯಕ್ತಿಗಳೊಂದಿಗೆ ನಡೆದ ವಿದ್ಯುತ್‌ ಖರೀದಿ ಒಪ್ಪಂದಗಳಲ್ಲಿ ವ್ಯಾಪಕ ಅಕ್ರಮ ಬಯಲಾಗಿದೆ. ಈ ಹಿನ್ನೆಲೆಯಲ್ಲಿ, ಎಸ್ಕಾಂನ 9 ಕಾರ್ಯಪಾಲಕ ಎಂಜಿನಿಯರ್‌ಗಳನ್ನು (ಇಇ) ಅಮಾನತುಗೊಳಿಸಲಾಗಿದೆ.ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಈ ವಿಷಯ ತಿಳಿಸಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ''ಯೂನಿಟ್‌ಗೆ 9.56 ರೂ.ನಷ್ಟು ದುಬಾರಿ ಖರೀದಿ ದರ ನಿಗದಿ ಮಾಡಲಾಗಿತ್ತು. ಬ್ಯಾಂಕ್‌ ಸಾಲದ ಲಭ್ಯತೆ ಹಾಗೂ ಕೇಂದ್ರ

ರಿಟೇಲ್‌ ವಹಿವಾಟಿಗೆ ಉತ್ತೇಜನ ಪ್ರಮುಖ ಸುಧಾರಣಾ ಕ್ರಮ

ಮಾದರಿ ಕಾಯ್ದೆ ಜಾರಿಗೆ ರಾಜ್ಯಗಳು ಹೆಚ್ಚು ಮುತುವರ್ಜಿ ವಹಿಸಿದರೆ ದೇಶದ ಚಿಲ್ಲರೆ ವ್ಯಾಪಾರ ಮತ್ತು ಮನರಂಜನೆ ಜಗತ್ತಿನ ವಹಿವಾಟು  ಖಂಡಿತವಾಗಿಯೂ ಹೊಸ ಎತ್ತರಕ್ಕೆ ಏರಲಿದೆ.  ‘ಗ್ರಾಹಕನೆ ದೊರೆ’ ಎನ್ನುವ ಮಾತು ಅಕ್ಷರಶಃ ಜಾರಿಗೆ ಬರಲಿದೆ.
ಅಂಗಡಿ–  ಮುಂಗಟ್ಟು, ಮಾಲ್ ಮತ್ತು ಸಿನಿಮಾ ಮಂದಿರಗಳು ವರ್ಷದ ಎಲ್ಲ ದಿನಗಳಲ್ಲೂ  ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ಈಗ ಕೇಂದ್ರ ಸರ್ಕಾರ ಅನುಕೂಲ ಒದಗಿಸಿದೆ. ‘ಅಂಗಡಿ ಮತ್ತು ಮುಂಗಟ್ಟುಗಳ ಮಾದರಿ (ಉದ್ಯೋಗ

ಸಹಕಾರಿ ರಂಗದಲ್ಲಿ ರಾಜಕೀಯ ಬೇಡ


ಕೋಲಾರ: ‘ರಾಜಕಾರಣವೇ ಬೇರೆ ಸಹಕಾರಿ ರಂಗವೇ ಬೇರೆ. ಸಹಕಾರಿ ರಂಗದಲ್ಲಿ ರಾಜಕೀಯ ಬೆರೆಸುವುದು ಬೇಡ’ ಎಂದು ಇಪ್ಕೋ ಟೋಕಿಯೋ ವಿಮಾ ಕಂಪನಿ ಅಧ್ಯಕ್ಷ ಕೆ.ಶ್ರೀನಿವಾಸಗೌಡ ತಿಳಿಸಿದರು.ನಗರದ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಜರ್ಸ್ ಕೋ- ಆಪರೇಟೀವ್ ಲಿಮಿಟೆಡ್ ಮತ್ತು ಡಿಸಿಸಿ ಬ್ಯಾಂಕ್ ವತಿಯಿಂದ ಬುಧುವಾರ ನಡೆದ ಪ್ರಾಂತೀಯ ಸಹಕಾರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ರೈತರಿಗೆ ಡಿಸಿಸಿ ಬ್ಯಾಂಕ್ ಸಾಲ ನೀಡುವುದು ಎಷ್ಟು

ಜೆಎನ್‌ಯು ವಿವಾದ ಅಭಿವೃದ್ಧಿಗೆ ಮಾರಕ

ಬೆಂಗಳೂರು:  ‘ಭಾರತದಲ್ಲಿ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳ (ಎನ್‌ಜಿಒ) ಕಾರ್ಯಾಚರಣೆಗೆ ಎದುರಾಗುತ್ತಿರುವ ಎಡರು–ತೊಡರುಗಳು ಹಾಗೂ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ನಡೆದಂತಹ ವಿವಾದಗಳು ವಿದೇಶಿ ಬಂಡವಾಳ ಹೂಡಿಕೆದಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ’ ಎಂದು ನೊಬಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಜೊಸೆಫ್‌ ಸ್ಟಿಗ್ಲಿಟ್ಸ್‌ ಅಭಿಪ್ರಾಯಪಟ್ಟರು.ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ‘ಜಾಗತಿಕ ಆರ್ಥಿಕ ಅಸಮಾನತೆ

ನ್ಯಾಷನಲ್‌ ಕಾಲೇಜು–ಫ್ಲೋರಿಡಾ ವಿವಿ ಒಪ್ಪಂದ


ಬೆಂಗಳೂರು:  ಸಂಶೋಧನಾ ಕೇಂದ್ರದ ಸ್ಥಾನಮಾನ ನೀಡುವ ಸಂಬಂಧ ಬಸವನಗುಡಿಯ ನ್ಯಾಷನಲ್‌ ಕಾಲೇಜು ಹಾಗೂ ಅಮೆರಿಕದ ಫ್ಲೋರಿಡಾ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ ಬುಧವಾರ ಒಪ್ಪಂದ ಮಾಡಿಕೊಂಡವು.ನ್ಯಾಷನಲ್‌ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಷನಲ್‌ ಎಜುಕೇಷನ್‌ ಸೊಸೈಟಿಯ ಅಧ್ಯಕ್ಷ ಡಾ.ಎ.ಎಚ್‌. ರಾಮ ರಾವ್‌ ಹಾಗೂ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಎಸ್‌. ಸೀತಾರಾಮ ಅಯ್ಯಂಗಾರ್‌ ಒಪ್ಪಂದಕ್ಕೆ ಸಹಿ ಹಾಕಿದರು.ಡಾ.ಎಸ್. ಸೀತಾರಾಮ ಅಯ್ಯಂಗಾರ್ ಮಾತನಾಡಿ, ‘ಕಾಲೇಜಿನಲ್ಲಿ ಕೇಂದ್ರ ಆರಂಭದಿಂದ ಆವಿಷ್ಕಾರ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ

ೆಎಸ್‌ಆರ್‌ಟಿಸಿಗೆ ‘ಇಂಡಿಯಾ ಬಸ್‌ ಅವಾರ್ಡ್‌

 ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (ಕೆಎಸ್‌ಆರ್‌ಟಿಸಿ) ಸತತ ಎರಡನೇ ಬಾರಿಗೆ ‘ಇಂಡಿಯಾ ಬಸ್‌ ಅವಾರ್ಡ್ಸ್‌– 2016’ ಲಭಿಸಿದೆ.ಪಣಜಿಯಲ್ಲಿ ನಡೆದ ಸಮಾರಂಭದಲ್ಲಿ ಗೋವಾ ಸರ್ಕಾರದ ಸಾರಿಗೆ ಸಚಿವ ಸುದಿನ್‌ ದಾವಲಿಕರ್‌ ಅವರು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದರ್‌ ಕುಮಾರ್‌ ಕಟಾರಿಯಾ ಅವರಿಗೆ ಪ್ರಶಸ್ತಿ ಪ್ರದಾನ

ಉಪಗ್ರಹ ತಂತ್ರಜ್ಞಾನ: ಯುವ ತಂತ್ರಜ್ಞರಿಗೆ ತೃಪ್ತಿ ನೀಡುವ ಕ್ಷೇತ್ರ

ಬೆಂಗಳೂರು:  ‘ಉಪಗ್ರಹ ತಂತ್ರಜ್ಞಾನದಲ್ಲಿ ಮಾತ್ರ ಎಲ್ಲ ವಿಭಾಗಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಲು ಅವಕಾಶವಿದೆ. ಯುವ ತಂತ್ರಜ್ಞರಿಗೆ ಅತ್ಯಂತ ತೃಪ್ತಿ ತರುವ ಕ್ಷೇತ್ರವಿದು’ ಎಂದು ಇಸ್ರೊ ಮಾಜಿ ಅಧ್ಯಕ್ಷ ಪ್ರೊ.ಯು.ಆರ್‌.ರಾವ್‌ ಹೇಳಿದರು.
ಯಲಹಂಕ ಸಮೀಪದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಮೂರನೇ ಹಂತದ ವಿದ್ಯಾರ್ಥಿ ಉಪಗ್ರಹ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ವಿದ್ಯಾರ್ಥಿ ಉಪಗ್ರಹ  ಯೋಜನೆಯಲ್ಲಿ ತೊಡಗಿಕೊಂಡಿರುವ ಯುವ ತಂತ್ರಜ್ಞರು ಆಳವಾದ ಸಂಶೋಧನೆಯಲ್ಲಿ ತೊಡಗಬೇಕು. ಸಣ್ಣ ಸಣ್ಣ

ನಾಳೆಯಿಂದ ಎಲೆಕ್ಟ್ರಾನಿಕ್ಸ್‌ ಶೃಂಗಸಭೆ

ಬೆಂಗಳೂರು:  ಭಾರತೀಯ ಎಲೆಕ್ಟ್ರಾನಿಕ್ಸ್‌ ಉದ್ಯಮ ಸಂಘಟನೆ ‘ಎಲ್ಸಿನಾ’ ಜುಲೈ 7ಮತ್ತು 8ರಂದು ಬೆಂಗಳೂರು  ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಏಳನೇ ಎಲೆಕ್ಟ್ರಾನಿಕ್ಸ್‌ ಶೃಂಗಸಭೆ (ಎಸ್‌ಇಎಸ್‌ 2016) ಹಮ್ಮಿಕೊಂಡಿದೆ. ಸೈಯೆಂಟ್‌, ಬಿಇಎಲ್‌, ಸಿ–ಡಾಟ್‌ , ಎಚ್‌ಎಎಲ್‌ ಮತ್ತು ಸೆಂಟ್ರಂ ಎಲೆಕ್ಟ್ರಾನಿಕ್ಸ್‌ ಸಹಯೋಗದಲ್ಲಿ ನಡೆಯುವ ಎರಡು ದಿನಗಳ ಶೃಂಗಸಭೆಯಲ್ಲಿ 47ಕ್ಕೂ ಹೆಚ್ಚು  ದೇಶೀಯ ರಕ್ಷಣಾ ಸಾಮಗ್ರಿಗಳ ತಯಾರಿಕಾ ತಂತ್ರಜ್ಞಾನ ಉದ್ಯಮಗಳು

ಮೊಬೈಲ್‌ ಆ್ಯಪ್‌ ಶೃಂಗಸಭೆ

ಬೆಂಗಳೂರು: ಆ್ಯಪ್ಸ್‌ ವರ್ಲ್ಡ್‌ ನಿಯತಕಾಲಿಕೆ ಆಯೋಜಿಸಿರುವ ಜಾಗತಿಕ ಮೊಬೈಲ್‌ ಕಿರು ತಂತ್ರಾಂಶ (ಆ್ಯಪ್‌) ಶೃಂಗಸಭೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ  ಬುಧವಾರ  ನಗರದಲ್ಲಿ ಆರಂಭವಾಗಲಿದೆ.ನಗರದಲ್ಲಿ ಎರಡು ದಿನಗಳ ಕಾಲ ಈ ಶೃಂಗಸಭೆ ನಡೆಯಲಿದ್ದು, ಮೊಬೈಲ್ ಆ್ಯಪ್‌ ಕ್ಷೇತ್ರದ ತಂತ್ರಜ್ಞರು ಮತ್ತು ಹೂಡಿಕೆದಾರರನ್ನು  ಒಂದೇ ವೇದಿಕೆ ಅಡಿ ತರಲಿದೆ.ಸ ಮೊಬೈಲ್  ಆ್ಯಪ್‌ ಆವಿಷ್ಕಾರ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಕಿರು ತಂತ್ರಾಂಶ ಆವಿಷ್ಕರಿಸಿದ ತಂತ್ರಜ್ಞರು

ವಿಶ್ವದಲ್ಲೇ ಮೊದಲ ಸೈಕಲ್ಹೈವೇ!

ವಿಶ್ವದ ಮೊದಲ ಸೈಕಲ್ಹೆದ್ದಾರಿಯನ್ನು ಜರ್ಮನಿಯ ಮುಲ್ಹೀಮ್ನಗರದಲ್ಲಿ ನಿರ್ವಿುಸಲಾಗಿದೆ. ಮೊದಲ ಐದುಕಿ.ಮೀ ಉದ್ದದ ಹೆದ್ದಾರಿಇದಾಗಿದ್ದು, ಮುಂದಿನ ದಿನಗಳಲ್ಲಿ 100 ಕಿ.ಮೀಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಇದು ಪಶ್ಚಿಮಜರ್ಮನಿಯ 10 ನಗರಗಳನ್ನುಸಂರ್ಪಸಲಿದೆ. ಇತರ ವೇಗದ ವಾಹನಗಳಿಲ್ಲದ ಮೃದುವಾದ ರಸ್ತೆಯಲ್ಲಿ ಸೈಕಲ್ತುಳಿಯುವ ಖುಷಿಯನ್ನು ಇನ್ನು ಜರ್ಮನಿಯ ನಾಗರಿಕರು ಅನುಭವಿಸಬಹುದಾಗಿದೆ. ಈ ರಸ್ತೆಯ ಸುತ್ತಲೂ 20ಲಕ್ಷಕ್ಕೂಹೆಚ್ಚು ಜನರು ವಾಸಿಸುತ್ತಿದ್ದು, ಇದು

Thursday 7 July 2016

ಸ್ಟಾರ್ಟ್ ಅಪ್​ ನಿಧಿಗೆ 10,000 ಕೋಟಿ ರೂ ನೀಡಲು ಕೇಂದ್ರ ಒಪ್ಪಿಗೆ

  ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೆಲ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.ಸ್ಟಾರ್ಟ್ ಅಪ್​ ನಿಧಿ ಯೋಜನೆಗೆ 10,000 ಕೋಟಿ ರೂಪಾಯಿಗಳನ್ನು ನೀಡಲು ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಿದೆ. ಸಂಪುಟ ಸಭೆಯ ಬಳಿಕ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.ದೇಶದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಸ್ಟಾರ್ಟ್ ಅಪ್(ನವೋದ್ಯಮ)ಗಳಿಗೆ ಹಣಕಾಸು ನೆರವು ಒದಗಿಸುವ

ಐಟಿ: ಭಾರತದಲ್ಲಿ 6 ಲಕ್ಷ ಉದ್ಯೋಗ ಕಡಿತ?

 ನವದೆಹಲಿ: ಮಾಹಿತಿ ತಂತ್ರಜ್ಞಾನ (ಐಟಿ) ವಲಯದಲ್ಲಿ 6.4 ಲಕ್ಷ ಉದ್ಯೋಗಗಳು ಭಾರತದಲ್ಲಿ ಕಡಿತಗೊಳ್ಳುವ ಅಪಾಯವಿದೆ ಎಂದು ಅಮೆರಿಕದ ಅಧ್ಯಯನ ವರದಿಯೊಂದು ಎಚ್ಚರಿಸಿದೆ. ಅಮೆರಿಕದ ಸಂಶೋಧನಾ ಸಂಸ್ಥೆಯಾದ ಎಚ್‌ಎಫ್ಎಸ್‌ ರೀಸರ್ಚ್‌ ಈ ವರದಿ ಬಿಡುಗಡೆ ಮಾಡಿದ್ದು, ಮುಂದಿನ 5 ವರ್ಷದಲ್ಲಿ ಭಾರತದ ಐಟಿ ಮತ್ತು ಬಿಪಿಒ ವಲಯದಲ್ಲಿ ದೊಡ್ಡ ರಿಸ್ಕ್ಗಳು ಎದುರಾಗಲಿವೆ ಎಂದಿದೆ.ಆಟೋಮೇಶನ್‌ ಮತ್ತು ರೋಬೋಟಿಕ್ಸ್‌ ತಂತ್ರಜ್ಞಾನಗಳು ಈಗ ಜನಪ್ರಿಯವಾಗುತ್ತಿವೆ. ಇದರಿಂದಾಗಿ

ಟೆಕ್ಸ್ಟ್ಟು ಸ್ಪೀಚ್

  ಮಾಹಿತಿ ತಂತ್ರಜ್ಞಾನದ ಅನುಕೂಲಗಳನ್ನು ನಮಗೆ ಮುಟ್ಟಿಸುವ ಕಂಪ್ಯೂಟರ್, ಸ್ಮಾರ್ಟ್​ಫೋನ್ ಮುಂತಾದ ಸಾಧನಗಳತ್ತ ಒಮ್ಮೆ ನೋಡಿದರೆ ಈ ಪ್ರಪಂಚದಲ್ಲಿ ಅದೆಷ್ಟು ಪ್ರಮಾಣದ ಪಠ್ಯವನ್ನು ಡಿಜಿಟಲೀಕರಿಸಲಾಗಿದೆ ಎನ್ನುವುದು ಗೊತ್ತಾಗುತ್ತದೆ. ಅಂತರಜಾಲದಲ್ಲಂತೂ ನಮ್ಮ ಸಂಪರ್ಕಕ್ಕೆ ಬರುವ ಮಾಹಿತಿಯಲ್ಲಿ ಬಹುದೊಡ್ಡ ಭಾಗ ಪಠ್ಯರೂಪದಲ್ಲೇ ಇರುತ್ತದೆ. ಇಷ್ಟೆಲ್ಲ ಪಠ್ಯ ನಮ್ಮ ಕಣ್ಣಮುಂದೆ ಕಾಣುವ ಬದಲು ಧ್ವನಿರೂಪದಲ್ಲಿ ನಮ್ಮ ಕಿವಿಯನ್ನು ತಲುಪುವಂತಿದ್ದರೆ ಅದನ್ನೆಲ್ಲ

ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಕಾಶ್ ಜಾವಡೇಕರ್ ಅಧಿಕಾರ ಸ್ವೀಕಾರ

  ನವದೆಹಲಿ: ಮಾಜಿ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ (ಎಚ್‌ಆರ್‌ಡಿ)ದ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು, ಎಲ್ಲಾ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವ ಭರವಸೆ ನೀಡಿದ್ದಾರೆ.ಈ ಹಿಂದೆ ಸ್ವತಂತ್ರ ಹೊಣೆಗಾರಿಕೆ ನಿರ್ವಹಿಸುತ್ತಿದ್ದ ಜಾವಡೇಕರ್, ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟ ಪುನಾರಚನೆ ಬಳಿಕ ಕ್ಯಾಬಿನೆಟ್ ಸ್ಥಾನಕ್ಕೆ ಬಡ್ತಿ ಪಡೆದ ಏಕೈಕ ಸಚಿವರಾಗಿದ್ದಾರೆ.ಎಲ್ಲಾ ಸವಾಲುಗಳನ್ನು

ಗೋವು ಸಂತ ಸಂಗಮ ಸಮ್ಮೆಳನ ಕಾರ್ಯಕ್ರಮ

 ಪುತ್ತೂರು: ಧರ್ಮಜಾಗೃತಿ ಸಮಿತಿ – ಪುತ್ತೂರು ಇದರ ಆಶ್ರಯದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾನ್ನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಜುಲೈ 7 ರಂದು “ಗೋವು-ಸಂತ ಸಂಗಮ” ಸಮ್ಮೆಳನ ಕಾರ್ಯಕ್ರಮ ನಡೆಯಲಿದೆ. ಸಮ್ಮೇಳನವು ಮಧ್ಯಾಹ್ನ 2.30 ರಿಂದ ಒಕ್ಕಲಿಗ ಗೌಡ ಸಮುದಾಯ ಭವನ, ಬೈಪಾಸ್ ರಸ್ತೆ, ತೆಂಕಿಲ, ಪುತ್ತೂರು ಇಲ್ಲಿ ನಡೆಯಲಿದೆ.ಮಾನ ಮುತ್ತುಗಳಾದ ಗೋವು ಹಾಗೂ

ಪ್ರಾಣಿ ಬಲಿ ನಿಷೇಧ: ರಾಜ್ಯ ಸರ್ಕಾರ ಭರವಸೆ

 ಬೆಂಗಳೂರು: ಧಾರ್ಮಿಕ ಆಚರಣೆಗಳ ವೇಳೆ ಪ್ರಾಣಿ ಬಲಿ ತಡೆಗಟ್ಟುವ ಮೂಲಕ ಪ್ರಾಣಿ ಬಲಿ ತಡೆ ಕಾಯ್ದೆ 1957ರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ.ಚಾಮರಾಜನಗರ ತಾಲೂಕಿನ ಕೊಳ್ಳೇಗಾಲದ ಪವಾಡಪುರುಷ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ ವೇಳೆ ಭಕ್ತರು ಪ್ರಾಣಿ ಬಲಿಗೆ ಮುಂದಾಗಿದ್ದು, ಪ್ರಾಣಿ ಬಲಿ ತಡೆಯುವಂತೆ ಆದೇಶ ನೀಡಲು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಮಾಧ್ಯಮಲೋಕಕ್ಕೆ ಮೌಲ್ಯಗಳು ಬೇಕಿಲ್ಲವೆ?


 ಪ್ರತಿವರ್ಷದಂತೆ ಮೊನ್ನೆ ಜುಲೈ 1 ರಂದು ಪತ್ರಿಕಾ ದಿನಾಚರಣೆ ಒಂದು ಸಂಪ್ರದಾಯವೆಂಬಂತೆ ನಡೆದುಹೋಯಿತು. ಮಾಧ್ಯಮ ಲೋಕದ ಪ್ರತಿಷ್ಠಿತ ಪ್ರಶಸ್ತಿಗಳಾದ ಟೀಯೆಸ್ಸಾರ್, ಮೊಹರೆ ಹಣಮಂತರಾಯ, ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳ ಪ್ರದಾನವೂ ಆಯಿತು. ಅಲ್ಲಿಗೆ ಪತ್ರಿಕಾದಿನಾಚರಣೆಗೆ ಪೂರ್ಣವಿರಾಮ ದೊರಕಿದಂತೆಯೇ! ಅದರಾಚೆಗೂ ಹೋಗಿ ಮಾಧ್ಯಮ ಲೋಕ ಇಂದು ಎದುರಿಸುತ್ತಿರುವ ಸನ್ನಿವೇಶ, ಸವಾಲುಗಳ ಕುರಿತು ಚರ್ಚೆಯಾಗಲಿ,

ಸೌರ ವಿದ್ಯುತ್ ಯೋಜನೆಗೆ ವಿಶ್ವ ಬ್ಯಾಂಕ್‌ನಿಂದ 1 ಬಿಲಿಯನ್ ಡಾಲರ್ ನೆರವು

 ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾರತದ ಸೌರ ವಿದ್ಯುತ್ ಯೋಜನೆಗೆ ವಿಶ್ವ ಬ್ಯಾಂಕ್ 1 ಬಿಲಿಯನ್ ಡಾಲರ್ ನೆರವು ನೀಡುವುದಾಗಿ ವಿಶ್ವ ಬ್ಯಾಂಕ್ ಹೇಳಿದೆ.ಚೀನಾದಂತೆ ಹೊರಸೂಸುವಿಕೆ ಕಡಿತ ನಡೆಸುವ ಬದಲು ವರ್ಷದ 365 ದಿನಗಳಿಗೂ ವಿದ್ಯುತ್ ಉತ್ಪಾದಿಸುವ ಯೋಜನೆ ಹಾಗೂ ಹವಾಮಾನ ವೈಪರೀತ್ಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ವಿಶ್ವದ ಪ್ರಮುಖ ಬ್ಯಾಂಕ್‌ಗಳಿಂದ ನಿಧಿ ಸಹಾಯವನ್ನು ಕೋರಿದ್ದಾರೆ.ಜಗತ್ತಿನ ಯಾವುದೇ ರಾಷ್ಟ್ರ ಸೌರ

ಪ್ಲಾಸ್ಟಿಕ್ ತ್ಯಾಜ್ಯನ್ನು ಇಂಧನವಾಗಿ ಮಾರ್ಪಡಿಸುತ್ತಿದೆ ಪುಣೆ ಸಂಸ್ಥೆ

  ಪುಣೆ ಮೂಲದ ರುದ್ರ ಎನ್‌ವೈರ್ನ್‌ಮೆಂಟಲ್ ಸೊಲ್ಯೂಷನ್ಸ್ ಸಮಸ್ಥೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಪರಿಸರಕ್ಕೆ ಯಾವುದೇ ಹಾನಿ ಉಂಟಾಗದಂತೆ ಪಾಲಿ-ಇಂಧನವನ್ನಾಗಿ ಮಾರ್ಪಡಿಸುತ್ತಿದೆ.ರುದ್ರ ಸಂಸ್ಥೆಯ ಸಂಸ್ಥಾಪಕಿ ಮೇಧಾ ತಡ್ಪತ್ರಿಕರ್ ಮತ್ತು ಅವರ ತಂಡ ರುದ್ರ ಸ್ಥಾವರದಲ್ಲಿ ಪಾಲಿ ಇಂಧನ ಉತ್ಪಾದನಾ ಯಂತ್ರಗಳನ್ನು ಅಭಿವೃದ್ಧಿಪಡಿಸಿ ತಯಾರಿಸಿದ್ದಾರೆ. ಈ ಯಂತ್ರಗಳು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಿಸಿಯಲ್ಲಿ ಕರಗಿಸಿ ಪೈರೋಲಿಸಿಸ್ ಪ್ರಕ್ರಿಯೆ ಮೂಲಕ ಪಾಲಿ-ಇಂಧನವನ್ನಾಗಿ ಪರಿವರ್ತಿಸುತ್ತವೆ.ಈ

ವಸ್ತುಗಳ ಗುರುತಿಸುವಿಕೆಗೆ ಫ್ರೆಂಚ್ ಸ್ಟಾರ್ಟ್‌ಅಪ್ ಮೂಡ್‌ಸ್ಟಾಕ್ಸ್ ಖರೀದಿಸಿದ ಗೂಗಲ್

  ಸ್ಯಾನ್ ಫ್ರಾನ್ಸಿಸ್ಕೋ: ಫ್ರೆಂಚ್ ಸ್ಟಾರ್ಟ್‌ಅಪ್ ಮೂಡ್‌ಸ್ಟಾಕ್ಸ್ ಖರೀದಿಸಲು ಒಪ್ಪಂದ ಮಾಡಿಕೊಂಡಿರುವುದಾಗಿ ಗೂಗಲ್ ಹೇಳಿದೆ. ಮೂಡ್‌ಸ್ಟಾಕ್ಸ್ ತಂತ್ರಜ್ಞಾನ ಕಂಪ್ಯೂಟರ್ ವಿಷನ್, ಯಂತ್ರ ಕಲಿಕೆ (Machine Learning ) ಹಾಗೂ ಸ್ಮಾರ್ಟ್‌ಫೋನ್‌ಗಳು ಮತ್ತು ಮೊಬೈಲ್ ಯಂತ್ರಗಳು ಚಿತ್ರಗಳು, ವಸ್ತುಗಳನ್ನು ಗುರುತಿಸಲು ಸಹಕರಿಸುತ್ತದೆ.ಜನರು ಪ್ರಪಂಚವನ್ನು ಅರ್ಥ ಮಾಡಿಕೊಳ್ಳುವಂತೆ ಕಂಪ್ಯೂಟರ್‌ಗಳು ಅರ್ಥ ಮಾಡುವ, ಗುರುತಿಸಿಕೊಳ್ಳುವ ತಂತ್ರಜ್ಞಾನ ಮತ್ತಿತರ

ಸೋಲೋ ಫುಟ್​ಬಾಲ್​ನಲ್ಲಿ ರಮೇಶ್​ಬಾಬು ವಿಶ್ವದಾಖಲೆ

 ಬೆಂಗಳೂರು: ಲೋಹವಿಜ್ಞಾನಿ ಡಾ.ಎಸ್.ರಮೇಶ್ ಬಾಬು, ನಿರಂತರವಾಗಿ ಒಂದು ಗಂಟೆ ಸೊಲೊ ಫುಟ್​ಬಾಲ್ ಆಡುವ ಮೂಲಕ ವಿಶ್ವದಾಖಲೆ ನಿರ್ವಿುಸಿದ್ದಾರೆ. ಇದರಿಂದ ರಮೇಶ್​ಬಾಬು 53ನೇ ವಿಶ್ವದಾಖಲೆಯ ಒಡೆಯ ಎನಿಸಿಕೊಂಡಿದ್ದಾರೆ.ಒಂದು ಗೋಲ್ ಪೋಸ್ಟ್​ನಿಂದ ಮತ್ತೊಂದು ಗೋಲ್ ಪೋಸ್ಟ್​ಗೆ ಚೆಂಡನ್ನು ಒದೆಯುವುದೇ ಈ ಆಟ ನಿಯಮವಾಗಿತ್ತು. ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್​ನ (ಐಐಎಸ್​ಸಿ) ಫುಟ್​ಬಾಲ್ ಮೈದಾನದಲ್ಲಿ ಜೂನ್ 26 ರಂದು

ಎನ್​ಎಸ್​ಜಿ ಸದಸ್ಯತ್ವ, ತನ್ನ ನಿಲುವನ್ನು ಸಮರ್ಥಿಸಿಕೊಂಡ ಚೀನಾ

 ಬೀಜಿಂಗ್: ಎನ್​ಎಸ್​ಜಿ ಸದಸ್ಯತ್ವ ಪಡೆಯಲು ಏನೆಲ್ಲಾ ಅರ್ಹತೆಗಳು ಇರಬೇಕು ಎಂಬುದನ್ನು ಭಾರತ ಮೊದಲು ತಿಳಿಯಲಿ. ಚೀನಾ ಕಾನೂನುಬದ್ಧವಾಗಿ ಭಾರತದ ಸದಸ್ಯತ್ವಕ್ಕೆ ವಿರೋಧ ವ್ಯಕ್ತಪಡಿಸಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ತಿಳಿಸಿದ್ದು, ಭಾರತದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದೆ.ಎನ್​ಎಸ್​ಜಿ ಸದಸ್ಯತ್ವ ಕೈತಪ್ಪಲು ಚೀನಾ ಕಾರಣ ಎಂದು ಭಾರತೀಯ ನಾಯಕರು ಆರೋಪಿಸಿರುವ ಹಿನ್ನೆಲೆಯಲ್ಲಿ ಚೀನಾದ ಗ್ಲೋಬಲ್ ಟೈಮ್್ಸ ಎಂಬ

ಉತ್ತರಾಖಂಡ ವೆಚ್ಚ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಸ್ತು

  ನವದೆಹಲಿ: ಪ್ರಸ್ತುತ ಕೇಂದ್ರ ಆಡಳಿತಕ್ಕೆ ಒಳಪಟ್ಟಿರುವ ಉತ್ತರಾಖಂಡದಲ್ಲಿ ಏಪ್ರಿಲ್ 1 ಬಳಿಕದ ವೆಚ್ಚಗಳಿಗೆ ಧನ ವಿನಿಯೋಗಕ್ಕೆ ಅವಕಾಶ ಮಾಡಿಕೊಡುವ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶುಕ್ರವಾರ ಒಪ್ಪಿಗೆ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ರಾಷ್ಟ್ರಪತಿಯವರು ಸುಗ್ರೀವಾಜ್ಞೆಗೆ ಗುರುವಾರ ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿರುವ ಹಿನ್ನೆಲೆಯಲ್ಲಿ ಏಪ್ರಿಲ್ 1 ಬಳಿಕದ

ಸ್ಮಾರ್ಟ್ ಸಿಟಿ ಯೋಜನೆಗೆ ಬೆಂಗಳೂರು ಸ್ಪರ್ಧೆ

  ನವದೆಹಲಿ: ಸ್ಮಾರ್ಟ್ ಸಿಟಿ ಯೋಜನೆಯ ಪಟ್ಟಿಗೆ ಹೊಸದಾಗಿ 9 ನಗರಗಳನ್ನು ಸೇರ್ಪಡೆಗೊಳಿಸಿದ್ದು, ಉದ್ದೇಶಿತ ಸ್ಮಾರ್ಟ್ ಸಿಟಿಗಳ ಸಂಖ್ಯೆ 109ಕ್ಕೆ ಏರಿದೆ. ಇದರ ಜತೆಗೆ ಸ್ಮಾರ್ಟ್​ಸಿಟಿ ಯೋಜನೆಯಲ್ಲಿ ಸೇರ್ಪಡೆ ಯಾಗುವ ಅವಕಾಶ ಬೆಂಗಳೂರಿಗೂ ಲಭ್ಯವಾಗಿದೆ. ಸ್ಮಾರ್ಟ್​ಸಿಟಿ ಯೋಜನೆ ಯಲ್ಲಿ ಸೇರ್ಪಡೆಯಾಗಲು ಮುಂದಿನ ಹಂತದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪಟನಾ, ತಿರುವನಂತಪುರಂ, ಬೆಂಗಳೂರು, ಅಮರಾವತಿ, ಇಟಾನಗರ್, ಗ್ಯಾಂಗ್ಟಕ್ ನಗರಗಳು ಭಾಗವಹಿಸಬಹುದು ಎಂದು ಕೇಂದ್ರ

ಮತ್ತೊಂದು ಮೈಲಿಗಲ್ಲಿನತ್ತ ಇಸ್ರೋ

 ಇತ್ತೀಚೆಗಷ್ಟೇ ಮೊಟ್ಟ ಮೊದಲ ರೆಕ್ಕೆ ಸಹಿತ ಗಗನನೌಕೆಯನ್ನು ಪರೀಕ್ಷಿಸಿದ ಇಸ್ರೋ, ಇದೀಗ ಮತ್ತೊಂದು ಸಾಹಸಕ್ಕೆ ಸಜ್ಜಾಗಿದೆ. ಗೂಗಲ್ ನಿರ್ವಿುತ ಉಪಗ್ರಹ ಸೇರಿ 20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಕೌಂಟ್​ಡೌನ್ ಶುರುವಾಗಿದೆ. ಈ ಮೂಲಕ ಒಂದೇ ರಾಕೆಟ್​ನಲ್ಲಿ ಅತಿ ಹೆಚ್ಚು ಉಪಗ್ರಹಗಳನ್ನು ಉಡಾಯಿಸಿದ ದ್ವಿತೀಯ ಸ್ಥಾನದ ಹೆಗ್ಗಳಿಕೆ ಇಸ್ರೋ ಪಾಲಾಗಲಿದೆ.ಈಗಾಗಲೇ ಹಲವು ಮೈಲಿಗಲ್ಲುಗಳನ್ನು ಸಾಧಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ

ನೇತಾಜಿ ಕಾರು ಚಾಲಕ ಈಗ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ..!

 ಅಜಂಗಡ: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಗುಮ್ನಾಮಿ ಬಾಬಾ ಹೆಸರಿನಲ್ಲಿ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಬದುಕಿದ್ದರು ಎಂಬ ಗುಮಾನಿಗಳ ಮಧ್ಯೆ ನೇತಾಜಿ ಅವರ ಕಾರು ಚಾಲಕ ಹಾಗೂ ಅಂಗರಕ್ಷಕರಾಗಿದ್ದ ಕರ್ನಲ್ ನಿಜಾಮುದ್ದೀನ್ ಮತ್ತೆ ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗಿದ್ದಾರೆ. ಈಗ ಅವರು ಸುದ್ದಿಯಾಗಿರುವುದು ಏಕೆಂದರೆ ಅವರೀಗ ಈ ಭೂಮಿಯಲ್ಲಿ ಬದುಕಿರುವ ಅತ್ಯಂತ ಹಿರಿಯ ಮನುಷ್ಯ ಮತ್ತು 116ನೇ

ಮಠಾಧೀಶರಿಗೆ ಗೌರವ ಡಾಕ್ಟರೇಟ್ ಶಿಫಾರಸು

  ಧಾರವಾಡ: ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್​ಗೆ ‘ನಾ ಮುಂದು ತಾ ಮುಂದು’ ಎಂದು ವರ್ಷದಿಂದ ವರ್ಷಕ್ಕೆ ಪೈಪೋಟಿ ಹೆಚ್ಚುತ್ತಿರುವಾಗಲೇ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಈ ಬಾರಿ ರಾಜ್ಯದ

ಅತ್ಯಾಧುನಿಕ ಏರ್​ವಿುಸೈಲ್ ಪರೀಕ್ಷಾರ್ಥ ಪ್ರಯೋಗ ಯಶ

 ಬಲಸೋರ್ (ಒಡಿಷಾ): ಇಸ್ರೇಲ್ ತಂತ್ರಜ್ಞಾನ ಸಹಯೋಗದೊಂದಿಗೆ ಭಾರತ ಅಭಿವೃದ್ಧಿ ಪಡಿಸಿದ ಅತ್ಯಾಧುನಿಕ ಏರ್ ಮಿಸೈಲ್ ಪರೀಕ್ಷಾರ್ಥ ಪ್ರಯೋಗ ಇಂದು ನಡೆದಿದೆ.ಹೈದ್ರಾಬಾದ್ ಮೂಲದ ಡಿಆರ್​ಡಿಒ ಅಭಿವೃದ್ಧಿ ಪಡಿಸಿದ ಈ ಮಿಸೈಲ್ ಬೆಳಗ್ಗೆ 8.15ಕ್ಕೆ ಚಂಡೀಪುರದಲ್ಲಿರುವ ರಕ್ಷಣಾ ಇಲಾಖೆ ನೆಲೆಯಲ್ಲಿ ಪ್ರಯೋಗಕ್ಕೆ ಒಳಗಾಯಿತು. ಇದು 50 ರಿಂದ 70 ಕಿ.ಮೀ. ಪ್ರದೇಶದ ವರೆಗೆ ದಾಳಿ ಸಾಮರ್ಥ್ಯ ಹೊಂದಿದೆ. ತನ್ನ ನಿಗದಿತ ಕಾರ್ಯದೊಂದಿಗೆ ವಿಚಕ್ಷಣೆ ಮತ್ತು ಬೆದರಿಕೆ ತುರ್ತು ಸಂದೇಶ

ಸ್ವಚ್ಛ ಬೆಂಗಳೂರಿಗೆ ಸ್ಮಾರ್ಟ್​ಫೋನ್ ಒಣ ಕಸ ಸಮಸ್ಯೆಗೆ ಪರಿಹಾರ

 ಬೆಂಗಳೂರು: ಈಗ ಪ್ರತಿಯೊಬ್ಬರ ಬಳಿ ಸ್ಮಾರ್ಟ್ ಫೋನ್​ಗಳಿರುವುದು ಸಾಮಾನ್ಯ. ಬಹಳಷ್ಟು ಜನ ವಾಟ್ಸ್​ಪ್, ಫೇಸ್​ಬುಕ್, ಟ್ವಿಟರ್ ಬಳಕೆಗಂತೂ ಉಪಯೋಗಿಸುತ್ತಾರೆ. ಆದರೆ, ಸ್ಮಾರ್ಟ್​ಫೋನನ್ನು ನಗರದ ಸ್ವಚ್ಛತೆಗಾಗಿಯೂ ಬಳಕೆ ಮಾಡಬಹುದಾ?
ಈ ಪ್ರಶ್ನೆಯನ್ನು ಲಾಲ್​ಬಾಗ್ ಮತ್ತು ಬಸವನಗುಡಿಯ ಆಸುಪಾಸಿನ ಗಲ್ಲಿಗಳಲ್ಲಿ ಕೇಳಿದರೆ ಹೌದು ಎಂಬ ಉತ್ತರ ಕೇಳಿ ಬರುತ್ತದೆ. ಲಾಲ್​ಬಾಗ್ ಪಶ್ಚಿಮ ದ್ವಾರದ ಹತ್ತಿರದಲ್ಲಿನ (ಬಸವನಗುಡಿ ಬಡಾವಣೆ) ಕನಿಷ್ಠ 1 ಸಾವಿರ ಮನೆಯಲ್ಲಿರುವ ಸ್ಮಾರ್ಟ್

ನೀರಿನ ಬಾಟಲಿಯಿಂದ ರೋಗ!

 ನವದೆಹಲಿ: ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಮರುಬಳಕೆ ಮಾಡುವುದ ರಿಂದ ಯಾವುದೇ ಸಮಸ್ಯೆಯಾಗಲಾರದು ಎಂಬ ಕಲ್ಪನೆಯಿದೆ. ಆದರೆ ನೀರಿನ ಬಾಟಲಿಗಳ ಮೂಲಕವೇ ಅಪಾಯಕಾರಿಯಾದ ಬ್ಯಾಕ್ಟೀರಿಯಾಗಳು ಮಾನವನ ಹೊಟ್ಟೆ ಸೇರಬಹುದೆಂದು ಅಧ್ಯಯನ ವರದಿಯೊಂದು ತಿಳಿಸಿದೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ಕೆಲ ರಾಸಾಯನಿಕಗಳ ಅಂಶವಿರುತ್ತದೆ. ಇದು ನೀರಿನ ಮೂಲಕ ಮಾನವನ ದೇಹ ಸೇರುತ್ತದೆ. ಇದರಿಂದ ಆರೋಗ್ಯದ ಮೇಲೆ ಪ್ರಭಾವ ಬೀರಲಿದೆ ಎಂದು ಅಧ್ಯಯನ

ಇಂದಿನಿಂದ ಇ-ಟೋಲ್

 ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೂತನ ಯೋಜನೆ
ನವದೆಹಲಿ/ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕರ್ನಾಟಕ ಸೇರಿದಂತೆ ದೇಶದ 275 ಟೋಲ್​ಗಳಲ್ಲಿ ವಿದ್ಯುನ್ಮಾನ ಸುಂಕ ವ್ಯವಸ್ಥೆ’ (ಎಲೆಕ್ಟ್ರಾನಿಕ್ ಟೋಲಿಂಗ್ ಸಿಸ್ಟಮ್ ಜಾರಿಗೊಳಿಸುತ್ತಿದೆ. ರಾಜ್ಯದ 24 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುರುವಾರದಿಂದಲೇ ಈ ಸೌಲಭ್ಯ ದೊರೆಯಲಿದೆ.ಭಾರತದಲ್ಲಿ ಒಟ್ಟು 350 ಟೋಲ್​ಗಳಿದ್ದು ಒಂದು ವರ್ಷದ ಅವಧಿಯಲ್ಲಿ

ಕಪ್ಪುಹಣ ಘೋಷಣೆಗೆ ಸೆ.30 ಕೊನೆಯ ದಿನ, ಜೇಟ್ಲಿ

 ನವದೆಹಲಿ: ಕಪ್ಪುಹಣ ಘೋಷಿಸಲು ಕೇಂದ್ರ ಸರ್ಕಾರ ಸೆ.30 ವರೆಗೆ ಸಮಯ ನಿಗದಿ ಪಡಿಸಿದೆ. ಕಪ್ಪುಹಣ ಹೊಂದಿರುವವರಿಗೆ ಶಿಕ್ಷೆಯಿಂದ ಪಾರಾಗಲು ಇದು ಕೊನೆಯ ಅವಕಾಶ ಎಂದು ಹಣಕಾಸು ಸಚಿವರ ಅರುಣ್ ಜೇಟ್ಲಿ ತಿಳಿಸಿದ್ದಾರೆ.ಅಕ್ರಮವಾಗಿ ಕಪ್ಪು ಹಣ ಹೊಂದಿರುವವರಿಗೆ ಮತ್ತು ತೆರಿಗೆ ಪಾವತಿಸದಿರುವವರಿಗೆ ಇದು ಕೊನೆಯ ಅವಕಾಶವಾಗಿದ್ದು, ಸೆ.30ರೊಳಿಗೆ ದಂಡ ಪಾವತಿಸಿ ಕಪ್ಪು ಹಣವನ್ನು ಘೋಷಿಸಿಕೊಳ್ಳಬೇಕು. ಕಪ್ಪುಹಣ ಘೊಷಣೆ ಕಾಯ್ದೆಯಡಿ ಕಪ್ಪು ಹಣದ ಮಾಹಿತಿ ನೀಡಿ ತೆರಿಗೆ

ಮುಂಡಗೋಡಿನಲ್ಲಿ ದಲೈಲಾಮಾ ಹುಟ್ಟುಹಬ್ಬ ಆಚರಣೆ

 ಮುಂಡಗೋಡ: ಟಿಬೇಟಿಯನ್ ಧರ್ಮಗುರು ದಲೈಲಾಮಾ ತಮ್ಮ 82 ನೇ ಹುಟ್ಟುಹಬ್ಬವನ್ನು ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ಟಿಬೇಟಿಯನ್ ಕ್ಯಾಂಪಿನಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು.ಕ್ಯಾಂಪ್ ನಂಬರ್ 6 ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಟಿಬೇಟಿಯನ್ನರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು. ದಲೈಲಾಮಾ ಆಗಮನದ

ವೇತನ ತಾರತಮ್ಯ ಅಧ್ಯಯನಕ್ಕೆ ಸಮಿತಿ

 ಬೀದರ್: ಕರ್ನಾಟಕ ಹಾಗೂ ಇತರೆ ರಾಜ್ಯಗಳಲ್ಲಿನ ಪೊಲೀಸರ ವೇತನ ಹಾಗೂ ಭತ್ಯೆ ಸಂಬಂಧ ತಾರತಮ್ಯ ಕುರಿತು ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರ ಐವರು ಹಿರಿಯ ಐಪಿಎಸ್ ಅಧಿಕಾರಿಗಳುಳ್ಳ ವಿಶೇಷ ಸಮಿತಿ ರಚಿಸಿದೆ. ಬೀದರ್ ಮೂಲದವರಾದ ಕರ್ನಾಟಕ ಪೊಲೀಸ್ ನೇಮಕಾತಿ (ರಿಕ್ರೂಟ್​ವೆುಂಟ್) ಎಡಿಜಿಪಿ ರಾಘವೇಂದ್ರ ಔರಾದಕರ್ ಅವರನ್ನು ಈ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ

ಇಲಿ ಬೇಟೆಗಾಗಿ 5 ಲಕ್ಷ ರೂಪಾಯಿ ಟೆಂಡರ್

 ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಇಲಿ, ಹೆಗ್ಗಣಗಳ ಕಾಟ ಜಾಸ್ತಿಯಾಗಿದ್ದು, ಅವು ಗಳನ್ನು ಹಿಡಿಯಲು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಕೆಲ ತಿಂಗಳ ಹಿಂದೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಇಲಿಗಳು ಪ್ರಮುಖ ಕಡತಗಳನ್ನು ಹಾಳು ಮಾಡಿದ್ದವು.ನಗರ ಯೋಜನೆ ಕಚೇರಿಗಳಲ್ಲಿದ್ದ ಜೆರಾಕ್ಸ್ ಯಂತ್ರದ ತಂತಿಗಳು ಇಲಿಗಳಿಗೆ ಬಲಿಯಾಗಿದೆ. ಅದರಿಂದಾಗಿ ಕಚೇರಿಯ ಕಡತಗಳ ಜೆರಾಕ್ಸ್​ಗೆ ಹೊರಗಡೆಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಇದರಿಂದ

ಹಳಿ ತಪ್ಪಿದ ಉದ್ಯಾನ ಎಕ್ಸ್ ಪ್ರೆಸ್ ರೈಲುಗಾಡಿ ಎಂಜಿನ್ ಚಕ್ರಗಳು

ಮುಂಬೈ: ಸಿಎಸ್​ಟಿ ಮುಂಬೈ – ಬೆಂಗಳೂರು ಉದ್ಯಾನ ಎಕ್ಸ್​ಪ್ರಸ್ ರೈಲುಗಾಡಿಯ ಎಂಜಿನ್​ನ ಎರಡು ಚಕ್ರಗಳು ಛತ್ರಪತಿ ಶಿವಾಜಿ ಟರ್ಮಿನಸ್​ನಲ್ಲಿ ಹಳಿ ತಪ್ಪಿದ ಪರಿಣಾಮವಾಗಿ ಹಲವಾರು ಉಪನಗರ ರೈಲು ಸೇವೆಗಳು ಗುರುವಾರ ಅಸ್ತವ್ಯಸ್ತಗೊಂಡವು.ಬೆಳಗ್ಗೆ 8.15ರ ವೇಳೆಗೆ ಪ್ಲಾಟ್​ಫಾರ್ಮ್ 17ರಿಂದ ರೈಲು ಹೊರಟ ಬಳಿಕ ಸಂಭವಿಸಿದ ಈ ಘಟನೆಯಲ್ಲಿ

ಶೇ.100 ಎಫ್ ಡಿಐ ಭಾರತಕ್ಕೇನು ಲಾಭ?

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ, ದೇಶದ ಆರ್ಥಿಕತೆ ಅಭಿವೃದ್ಧಿ ದೃಷ್ಟಿಯಿಂದ ರಕ್ಷಣೆ, ವೈಮಾನಿಕ, ಔಷಧ, ಸಿಂಗಲ್‌ಬ್ರ್ಯಾಂಡ್‌ ರಿಟೇಲ್‌, ಪ್ರಸಾರ ಕ್ಷೇತ್ರಗಳಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುವು ಮಾಡಿದೆ. ಸರ್ಕಾರದ ಈ ಮಹತ್ವದ ತೀರ್ಮಾನದಿಂದ ಭಾರತದ ಆರ್ಥಿಕತೆಗೆ ಹೇಗೆ ಪ್ರಯೋಜನವಾಗುತ್ತದೆ? ವಿದೇಶಿ ನೇರ ಬಂಡವಾಳ ಹೂಡಿಕೆಯಿಂದ ದೇಶೀಯ ಆವಿಷ್ಕಾರಗಳು, ಕಂಪನಿಗಳಿಗೆ ಮಾರಕ ಎಂಬ ಕೂಗು ಯಾಕಾಗಿ? ಎಂಬ ಕುರಿತ

ಸಾರಿಗೆ ನಿಗಮಗಳ ನೌಕರರ ಸಂಬಳ ಏರಿಕೆ


ಬೆಂಗಳೂರು: ವೇತನ ಹೆಚ್ಚಳ ಕುರಿತ ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿಯ ಕಳೆದ 4 ವರ್ಷಗಳ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ರ್‌ಟಿಸಿ) ಸೇರಿದಂತೆ ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿಯ ವೇತನವನ್ನು ಶೇ.8ರಷ್ಟು ಹೆಚ್ಚಿಸಲು ತೀರ್ಮಾನಿಸಿದೆ.ರಾಜ್ಯ ಸರ್ಕಾರದ ಈ ತೀರ್ಮಾನದಿಂದ ಕೆಎಸ್‌ಆರ್‌ಟಿಸಿ, ಈಶಾನ್ಯ ಕರ್ನಾಟಕ ಸಾರಿಗೆ ನಿಗಮ (ಎನ್‌ಈಕೆಆರ್‌ಟಿಸಿ),ವಾಯುವ್ಯ ಕರ್ನಾಟಕ ಸಾರಿಗೆ ನಿಗಮ

ಜು. 25ರಿಂದ ಕೆಎಸ್‌ಆರ್‌ಟಿಸಿ ಬಂದ್‌?

ಬೆಂಗಳೂರು: 'ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಅಸಮರ್ಪಕ ಹಾಗೂ ಏಕಪಕ್ಷೀಯವಾಗಿದೆ' ಎಂದು ಆರೋಪಿಸಿ ಜುಲೈ 25ರಿಂದ ಅಖೀಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಮತ್ತು ಎಐಟಿಯುಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿವೆ. ಪರಿಣಾಮ ಅಂದು ಬಸ್‌ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.  ಶೇ. 35ರಷ್ಟು ವೇತನ ಪರಿಷ್ಕರಣೆ ಮಾಡಿ ಎಂದು ಕೇಳಲಾಗಿತ್ತು. ಆದರೆ, ಕೊಟ್ಟಿದ್ದು ಕೇವಲ ಶೇ. 8ರಷ್ಟು. ಇದನ್ನು

ಪುಟ್ಟಗೌರಿ ತಾಯಿ ಸಾವನ್ನಪ್ಪಿದ್ದಕ್ಕೆ ವ್ಯಕ್ತಿಗೆ ಹೃದಯಾಘಾತ!

 ಮಂಡ್ಯ: ತಮ್ಮ ನೆಚ್ಚಿನ ನಟ, ನಟಿಯರು, ರಾಜಕಾರಣಿಗಳು ದುರಂತಕ್ಕೀಡಾಗ, ಹೆಚ್ಚು ಸಂಭ್ರಮಿಸಿದಾಗ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳೋದು, ಹೃದಯಾಘಾತಕ್ಕೊಳಗಾಗುವ ಘಟನೆ ನಡೆಯುತ್ತಿರುತ್ತದೆ...ಅದೇ ರೀತಿ ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ಪುಟ್ಟಗೌರಿ ತಾಯಿ ಸಾವನ್ನಪ್ಪಿದ್ದ ದೃಶ್ಯ ನೋಡಿ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಂಡ್ಯದ ಕೆಆರ್ ಪೇಟೆ ತಾಲೂಕಿನ  ಮಾಕವಳ್ಳಿಯಲ್ಲಿ ನಡೆದಿದೆ.ಪುಟ್ಟಗೌರಿ ಮದುವೆ ಧಾರವಾಹಿ ನೋಡುತ್ತಿದ್ದ ವೇಳೆ

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮರುಜೀವ;ಕಾನೂನು ಸಲಹೆ ಕೇಳಿದ ಕೇಂದ್ರ

  ನವದೆಹಲಿ: ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ವಿಚಾರದ ಬಗ್ಗೆ ಪರಿಶೀಲನೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾನೂನು ಆಯೋಗಕ್ಕೆ ಪತ್ರ ಬರೆದಿದ್ದ ಬೆನ್ನಲ್ಲೇ ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ರಾಜಕೀಯ ಪಾಳಯದಲ್ಲಿ ಬಿಸಿ, ಬಿಸಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.ಅತ್ಯಂತ ಕಠಿಣ ಹಾದಿಯ ಏಕರೂಪ ಸಂಹಿತೆ ಜಾರಿ ಬಗ್ಗೆ ಮೊದಲ ಬಾರಿಗೆ ಕೇಂದ್ರ ಸರ್ಕಾರ ಆಯೋಗದ ಸಲಹೆ ಕೇಳಿದೆ. ಈ ವಿಚಾರದಲ್ಲಿ ಈಗಾಗಲೇ

ಏಕರೂಪ ನಾಗರಿಕ ಸಂಹಿತೆ ಹಾಗೆಂದರೇನು?

 ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತಂತೆ ಕೇಂದ್ರ ಸರ್ಕಾರ, ಕಾನೂನು ಆಯೋಗಕ್ಕೆ ಪರಾಮರ್ಶೆ ನಡೆಸುವಂತೆ ಸೂಚನೆ ನೀಡಿದೆ. ಇದು ದೇಶದಲ್ಲಿ ಮತ್ತೆ ಈ ಕಾಯ್ದೆ ಕುರಿತ ಚರ್ಚೆ ತೀಕ್ಷ್ಣಗೊಳ್ಳಲು ಕಾರಣವಾಗಿದೆ.ಸದ್ಯ ದೇಶದಲ್ಲಿ ವಿವಿಧ ಧರ್ಮಗಳಿಗೆ ಅನುಸಾರವಾಗಿ ವೈಯಕ್ತಿಕ ಕಾನೂನುಗಳು ಬೇರೆ ಬೇರೆಯಾಗಿದ್ದು, ಏಕರೂಪದಲ್ಲಿ ತರುವುದಕ್ಕೆ ವ್ಯಾಪಕ ಪರ-ವಿರೋಧ ಅಭಿಪ್ರಾಯಗಳಿವೆ. ಇದೇ ಕಾರಣದಿಂದ ಕೇಂದ್ರ ಸರ್ಕಾರದ ನಡೆಮಹತ್ವ

ಮೂರನೇ ಕ್ಲಾಸಿನಲ್ಲಿ ಶಾಲೆ ಬಿಟ್ಟಿದ್ದ ಕವಿಯ ಕವನಗಳೀಗ ವಿವಿ ಪಠ್ಯಪುಸ್ತಕದಲ್ಲಿದೆ!

 ಹಲ್ದಾರ್ ನಾಗ್ ಎಂಬ ಕವಿಯೊಬ್ಬರಿಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಒಡಿಶಾ ಮೂಲದ 65ರ ಹರೆಯದ ಈ ಕವಿ ಕೋಸ್ಲಿ ಭಾಷಾ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಪದ್ಮ ಪ್ರಶಸ್ತಿ ನೀಡಲಾಗಿದೆ.ಒಡಿಶಾದ ಬಡ ಕುಟುಂಬವೊಂದರಲ್ಲಿ ಜನಿಸಿದ ನಾಗ್, ಅಪ್ಪ ತೀರಿಕೊಂಡ ನಂತರ ಶಾಲೆ ಬಿಡಬೇಕಾಗಿ ಬಂತು. ಅಪ್ಪ ತೀರಿಕೊಂಡಾಗ ನಾಗ್ ಅವರು ಮೂರನೇ ತರಗತಿಯಲ್ಲಿದ್ದರು.ಮನೆಯ ಕಷ್ಟಗಳನ್ನು ಹೋಗಲಾಡಿಸುವುದಕ್ಕಾಗಿ ಶಾಲೆ ಬಿಟ್ಟ ನಾಗ್ ಹಲವಾರು ಕಡೆ

ಮೌಢ್ಯ ವಿರೋಧಿ ಕಾಯ್ದೆಯ ಹೆಸರು ಬದಲು; ಶೀಘ್ರದಲ್ಲೇ ಚರ್ಚೆ

  ಬೆಂಗಳೂರು: ಮೂಢನಂಬಿಕೆಗಳಿಗೆ ಕಡಿವಾಣ ಹೇರಲು ಜಾರಿಗೊಳಿಸಲು ಉದ್ದೇಶಿಸಿರುವ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಗೆ ವ್ಯಾಪಕ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅದರ ಹೆಸರು ಬದಲಿಸಿ ಹೊಸ ಕಾಯ್ದೆ ರೂಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಜತೆಗೆ ಹಿಂದಿನಿಂದಲೂ ನಡದುಕೊಂಡು ಬರುತ್ತಿರುವ ಕೆಲವು ಆಚರಣೆಗಳ ಬಗ್ಗೆ ನಿಷೇಧ ಹೇರದಿರುವ ಬಗ್ಗೆಯೂ ಚಿಂತನೆ ನಡೆದಿದೆ.ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಎಂಬ ಬದಲು "ಕರ್ನಾಟಕ ನರಬಲಿ ಮತ್ತು ಇತರೆ ಅಮಾನವೀಯ

ಢಾಕಾ ಉಗ್ರರಿಗೆ ಸ್ಫೂರ್ತಿಯಾಗಿದ್ದ ಜಾಕಿರ್ ನಾಯಕ್ ಮೇಲೆ ಗುಪ್ತಚರ ಇಲಾಖೆ ನಿಗಾ

ನವದೆಹಲಿ: ಢಾಕಾದಲ್ಲಿ ದಾಳಿ ನಡೆಸಿದ್ದ ಉಗ್ರರಿಗೆ ಸ್ಫೂರ್ತಿಯಾಗಿದ್ದ ಮುಂಬೈ ನ ಇಸ್ಲಾಮ್ ಧರ್ಮ ಪ್ರಚಾರಕ ಜಾಕಿರ್ ನಾಯಕ್ ಮೇಲೆ ಗುಪ್ತಚರ ಇಲಾಖೆ ನಿಗಾ ವಹಿಸಿದೆ.ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ನ ಸ್ಥಾಪಕ ಡಾ.ಜಾಕಿರ್ ನಾಯಕ್ ಹಾಗೂ ಇಸಿಸ್ ಉಗ್ರ ಸಂಘಟನೆ ಬೆಂಬಲಿಗ ಮೆಹ್ದಿ ಮಸ್ರೂರ್ ಬಿಸ್ವಾಸ್ ಢಾಕಾ ಉಗ್ರರಿಗೆ ಸ್ಫೂರ್ತಿಯಾಗಿದ್ದರು ಎಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಗುಪ್ತಚರ ಇಲಾಖೆ, ಇಸ್ಲಾಮ್ ಧರ್ಮ ಪ್ರಚಾರಕ ಜಾಕಿರ್ ನಾಯಕ್ ಮೇಲೆ ಕಣ್ಣಿಟ್ಟಿದೆ.

ಮೌಂಟ್ ಎವರೆಸ್ಟ್ ಹತ್ತಿದ ಬೆಂಗಳೂರು ಯುವಕ

 ಮೌಂಟ್ ಎವರೆಸ್ಟ್ ಹತ್ತಿದ ಬೆಂಗಳೂರು ಯುವಕ
 ಬೆಂಗಳೂರು: ನಗರದ ಇಂಜಿನಿಯರ್ ಪದವೀಧರ ಸತ್ಯರೂಪ್ ಸಿದ್ಧಾರ್ಥ್ ಹಾಗೂ 5 ಜನರ ತಂಡ ವಿಶ್ವವಿಖ್ಯಾತ ಅತೀ ಎತ್ತರದ ಪರ್ವತ ಶ್ರೇಣಿ ಮೌಂಟ್ ಎವರೆಸ್ಟ್ ಹತ್ತಿ ಇಳಿಯುವ ಮೂಲದ ಸಾಧನೆಯನ್ನು ಮಾಡಿದ್ದಾರೆ.
33 ವರ್ಷದ ಸತ್ಯರೂಪ್ ಅವರು ಈ ವರೆಗೂ 6 ಬಾರಿ ಎವರೆಸ್ಟ್ ಹತ್ತಲು ಪ್ರಯತ್ನಿಸಿದ್ದರು. ಆದರೆ. ಇದು ಸಾಧ್ಯವಾಗಿರಲಿಲ್ಲ. ಇದರಂತೆ ಪ್ರಯತ್ನಗಳ ಬೆನ್ನು ಬಿಡದ ಸತ್ಯರೂಪ್ ಅವರು ಮೇ.21ರಂದು ಕೊನೆಗೂ ಪರ್ವತ ಹತ್ತುವ ಮೂಲಕ ಸಾಧನೆ ಮಾಡಿದ್ದಾರೆ.
ಕಳೆದ ವರ್ಷ ಕೂಡ ಎವರೆಸ್ಟ್ ಹತ್ತರು ಸತ್ಯರೂಪ್ ಅವರು ಯತ್ನ ನಡೆಸಿದ್ದರು. ಪರ್ವತ ಹತ್ತಲು ಆರಂಭಿಸಿ ಕೆಲವು ಸಮಯ ಕಳೆಯುತ್ತಿದ್ದಂತೆ ನೇಪಾಳದಲ್ಲಿ ಭೂಕಂಪ ಸಂಭವಿಸಿತ್ತು. ಈ ಕಾರಣದಿಂದ ಪರ್ವತ ಹತ್ತಲು ಸಾಧ್ಯವಾಗಿರಲಿಲ್ಲ. ಇದೀಗ ಪರ್ವತ ಹತ್ತಿರುವ ಸಂತಸ ಸತ್ಯರೂಪ್ ಅವರಿಗಿದೆ.
ಮೇ.21 ರಂದು ಬೆಳಿಗ್ಗೆ 6 ಗಂಟೆಗೆ ಪರ್ವತ ಶಿಖರವನ್ನು ಹತ್ತಿಲಾಯಿತು. ಆ ಸಮಯ ನನಗೆ ಮ್ಯಾಜಿಕ್ ನಂತಿತ್ತು. ಯಾವ ವಿಚಾರದ ಬಗ್ಗೆಯೂ ಆಲೋಚನೆ ಬರಲಿಲ್ಲ. ಅಲ್ಲಿನ ಸೌಂದರ್ಯವನ್ನು ಸವಿಯುತ್ತಿದ್ದೆ ಎಂದು ಸತ್ಯರೂಪ್ ಅವರು ಹೇಳಿಕೊಂಡಿದ್ದಾರೆ.
ಇನ್ನು ಪರ್ವತ ಹತ್ತುವಾಗ ಸತ್ಯರೂಪ್ ಅವರಿಗೆ ಅಂಟಾರ್ಟಿಕಾದ ಮೌಂಟ್ ವಿನ್ಸನ್ ಮಾಸ್ಸಿಫ್ ಕಣ್ಣಿಗೆ ಬಿದ್ದಿದ್ದು, ಈ ಪರ್ವತವನ್ನು 2016ರ ಡಿಸೆಂಬರ್ ತಿಂಗಳಿನಲ್ಲಿ ಹತ್ತಲು ನಿರ್ಧರಿಸಲಾಗಿದೆ ಎಂದು ಸತ್ಯರೂಪ್ ಅವರು ಹೇಳಿಕೊಂಡಿದ್ದಾರೆ.
ಪರ್ವತ ಹತ್ತುವಾಗ 2 ಮತ್ತು 3 ಕ್ಯಾಂಪ್ ಗಳಲ್ಲಿ ಉಳಿದುಕೊಳ್ಳಲಾಗಿತ್ತು. ಈ ವೇಳೆ ಶರ್ಪಾ ಜನಾಂಗದವರು 8 ಸಾವಿರ ಮೀಟರ್ ಗಳಷ್ಟು ಆಳದಲ್ಲಿ ಕೆಳಗೆ ಬೀಳುತ್ತಿರುವುದನ್ನು ನೋಡಿದ್ದೆ. ಇದು ನಿಜಕ್ಕೂ ಸಾಕಷ್ಟು ಭಯವನ್ನುಂಟು ಮಾಡಿತ್ತು. ಕ್ಯಾಂಪ್ ನಲ್ಲಿದ್ದಾಗ ಹೊಟ್ಟೆಯಲ್ಲಿ ಭಯ ಶುರುವಾಗಿತ್ತು. ಟೆಂಟ್ ಒಳಗೆ ಹೋಗಿ ಕೆಲವು ಸಮಯ ಆಲೋಚಿಸಿದ್ದೆ. ನಾನೂ ಕೂಡ ಕೆಳಗೆ ಬೀಳಬಹುದು ಎಂದು ತಿಳಿದಿದ್ದೆ.
ಕಣ್ಣು ಮುಚ್ಚಿದಾಗಲೆಲ್ಲಾ ಮಂಜು ಕೆಳಗೆ ಬೀಳುತ್ತಿರುವುದು, ನಾನು ಕೆಳಗೆ ಬೀಳುತ್ತಿದ್ದೇನೆನೋ ಎನ್ನುವಂತಹ ದೃಶ್ಯಗಳು ಬರುತ್ತಿತ್ತು. ನಂತರ ಈಗಾಗಲೇ ನಾನು ಸತ್ತು ಹೋಗಿದ್ದೇನೆ. ಏನೇ ಆದರೂ ಪರ್ವತ ಹತ್ತಲೇ ಬೇಕೆಂದು ನಿರ್ಧರಿಸಿದ್ದೆ ಎಂದು ಹೇಳಿದ್ದಾರೆ.
ಪರ್ವತ ಹತ್ತುವಾಗ ಸಾಕಷ್ಟು ಮಂದಿಗೆ ಉಸಿರಾಡಲು ಕಷ್ಟವಾಗುತ್ತಿತ್ತು. ಹೀಗಾಗಿ ಪರ್ವತ ಹತ್ತಲು ಸಾಧ್ಯವಾಗಿರಲಿಲ್ಲ. ಆದರೂ, ನಾನು ಮಾತ್ರ ನನ್ನ ಹಠವನ್ನು ಬಿಡದೆ ಪರ್ವತ ಹತ್ತಲು ಮುಂದಾಗಿದ್ದೆ. ಪರ್ವತ ಹತ್ತಲು ಇನ್ನು ಕೆಲವೇ ದೂರ ಇರುವಾಗಲೇ ಆಮ್ಲಜನಕದ ಸಿಲಿಂಡರ್ ಕೆಲಸ ಮಾಡುವುದನ್ನು ನಿಲ್ಲಿಸಿದ್ದತು. ಆಮ್ಲಜನಕವಿಲ್ಲದೆಯೇ ನಾನು ಹತ್ತು ನಿಮಿಷ ಅಲ್ಲಿಯೇ ಇದ್ದೆ. ನಂತರ ಶೆರ್ಪಾ ಜನಾಂಗದವರಿಂದ ಆಮ್ಲಜನಕವನ್ನು ಪಡೆದು ಮತ್ತೆ ಪರ್ವತ ಹತ್ತಲು ಆರಂಭಿಸಿದ್ದೆ.
ಚಿಕ್ಕವನಿದ್ದಾಗ ನನಗೆ ಅಸ್ತಮಾ ಸಮಸ್ಯೆ ಇತ್ತು. ಇನ್ಹೇಲರ್ ಇಲ್ಲದೆಯೇ 100 ಮೀಟರ್ ಕೂಡ ಓಡಲು ಸಾಧ್ಯವಾಗುತ್ತಿರಲಿಲ್ಲ. ನಂತರ ನನ್ನೊಂದಿಗೆ ನಾನೇ ಸವಾಲು ಹಾಕಿಕೊಂಡೆ ಇನ್ಹೇಲರ್ ಇಲ್ಲದೆಯೇ, ಔಷಧಿಗಳು ಇಲ್ಲದೆಯೇ ಹತ್ತಬೇಕೆಂದು. ಇದೀಗ ನನ್ನ ಕನಸು ನನಸಾಗಿದೆ.
ಪರ್ವತ ಹತ್ತುವ ಕುರಿತಂತೆ ನನ್ನ ಕುಟುಂಬಸ್ಥರಿಗೆ ಅನುಮಾನವಿತ್ತು. ಆದರೆ, ನನ್ನ ಧೈರ್ಯ ಹಾಗೂ ಗುರಿಯನ್ನು ತಲುಪಿಯೇ ತೀರುತ್ತೇನೆಂದು ಅವರಿಗೆ ನಂಬಿಕೆಯಿತ್ತು. ಇದರಂತೆ ಸಾಕಷ್ಟು ಪರ್ವತಗಳನ್ನು ಹತ್ತಿ ಯಶಸ್ಸು ಗಳಿಸಿದ್ದೇನೆ. ಮನೆಗೆ ಸುರಕ್ಷಿತವಾಗಿ ತಲುಪಿದ್ದೇನೆ.
ಪರ್ವತ ಹತ್ತುವ ಕುರಿತಂತೆ ನನ್ನ ಸ್ನೇಹಿತರು ನನಗೆ ಸಹಾಯ ಮಾಡಿದ್ದರು. ನನ್ನ ಕುಟುಂಬದವರನ್ನು ಒಪ್ಪಿಸಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಪರ್ವತ ಹತ್ತಲು ತೆಗೆದುಕೊಂಡಿರುವ ಎಚ್ಚರಿಕೆ ಕ್ರಮಗಳು ಹಾಗೂ ಭದ್ರತೆ ಬಗ್ಗೆ ಅವರಿಗೆ ವಿವರಣೆ ನೀಡಿದ್ದರು. ಆಗಾಗ ಪೋಷಕರಿಗೆ ಮಾಹಿತಿಗಳನ್ನು ರವಾನಿಸಿದ್ದರು.
ಪರ್ವತ ಹತ್ತಿ ಕೆಳಗೆ ಇಳಿಯುವ ಸಂದರ್ಭದಲ್ಲಿ ಟ್ರಾಕಿಂಗ್ ಸಿಸ್ಟಮ್ ಡಿವೈಸ್ ಕಳೆದುಕೊಂಡಿದ್ದೆ. ಇದರಿಂದಾಗಿ 7-8 ಗಂಟೆಗಳ ಕಾಲ ನಾನು ಯಾರಿಗೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದು ಸಾಕಷ್ಟು ಆತಂಕವನ್ನು ಸೃಷ್ಟಿ ಮಾಡಿತ್ತು.
ಇದೇ ವೇಳೆ ತಂಡದಲ್ಲಿದ್ದ ಮೂವರು ಜನರು ಕಾಣೆಯಾಗಿರುವುದಾಗಿ ಮಾಹಿತಿ ಸಿಕ್ಕಿತ್ತು. ಈ ವೇಳೆ ಸುದ್ದಿ ವರದಿಗಾರರು ನನ್ನ ಮನೆಗೆ ಹೋಗಿ ನನ್ನ ಬದುಕುಳಿದಿದ್ದೇನೋ ಇಲ್ಲವೋ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ನನ್ನ ಬದುಕಿರುವ ಮಾಹಿತಿ ಸಿಗುವವರೆಗೂ ಮನೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ವಿಮಾನ ನಿಲ್ದಾಣದಲ್ಲಿ ನಾನು ಬರುವಿಕೆಯನ್ನೇ ಕಾಯುತ್ತಿದ್ದ ಕುಟುಂಬಸ್ಥರು ನನ್ನ ಮುಖ ನೋಡಿದ ಕೂಡಲೇ ಮನಸ್ಸಿನಲ್ಲಿ ಸಮಾಧಾನ ಪಟ್ಟುಕೊಂಡಿರುವುದು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು ಎಂದು ಸತ್ಯರೂಪ್ ಅವರು ತಮ್ಮ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಮೋದಿ 5 ದಿನಗಳ ಆಫ್ರಿಕಾ ಪ್ರವಾಸ: ಆಹಾರ ಭದ್ರತೆ, ಇಂಧನ ಕ್ಷೇತ್ರದಲ್ಲಿ ಮಹತ್ವದ ಒಪ್ಪಂದಗಳ ಸಾಧ್ಯತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಐದು ದಿನಗಳ ಆಫ್ರಿಕಾ ಪ್ರವಾಸ ಆರಂಭಗೊಂಡಿದೆ. ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿ ನರೇಂದ್ರ ಮೋದಿ ಆಫ್ರಿಕಾ ರಾಷ್ಟ್ರಗಳಿಗೆ ಪ್ರಧಾನಿ ಭೇಟಿ ನೀಡುತ್ತಿದ್ದು, ಮಹತ್ವ ಪಡೆದುಕೊಂಡಿದೆ.ಪ್ರವಾಸದ ವೇಳೆ ಆಹಾರ ಭದ್ರತೆ, ಇಂಧನ ಕ್ಷೇತ್ರದಲ್ಲಿ ಮಹತ್ವದ ಒಪ್ಪಂದ ಏರ್ಪಡುವ ನಿರೀಕ್ಷೆಗಳಿದ್ದು, ಮೊಜಾಂಬಿಕ್, ದಕ್ಷಿಣ ಆಫ್ರಿಕಾ, ತಾಂಜಾನಿಯಾ ಮತ್ತು ಕೀನ್ಯಾಗಳಿಗೆ ಭೇಟಿ ನೀಡಲಿರುವ ಮೋದಿ ಮಹತ್ವದ ದ್ವಿಪಕ್ಷೀಯ

ಮುಷ್ಕರಕ್ಕೆ ಮಾತುಕತೆಯೇ ಮದ್ದು: ನೂತನ ಎಚ್ಆರ್ ಡಿ ಸಚಿವ ಜಾವಡೆಕರ್


 ನವದೆಹಲಿ: ಮುಷ್ಕರಕ್ಕೆ ಮಾತುಕತೆಯೇ ಮದ್ದು ಎಂದಿರುವ ನೂತನ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೆಕರ್ ಅವರು, ಪಕ್ಷದ ರಾಜಕೀಯ ಮಾಡುವುದಕ್ಕೆ ಶಿಕ್ಷಣ ಬೇಕಾಗಿಲ್ಲ ಎಂದು ಹೇಳಿದ್ದಾರೆ.ಈ ವಿವಾದಗಳಿಂದಲೇ ಸುದ್ದಿ ಮಾಡಿದ್ದ ಮಾಜಿ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಸ್ಥಾನಕ್ಕೆ ಪ್ರಕಾಶ್ ಜಾವಡೆಕರ್ ಬಂದಿದ್ದು, ಸಲಹೆ ಸೂಚನೆಗಳನ್ನು ನಾನು ಮುಕ್ತವಾಗಿ ಸ್ವೀಕರಿಸುತ್ತೇನೆ ಮತ್ತು ಎಲ್ಲರೊಂದಿಗೆ ತಾವು ಚರ್ಚೆಗೆ ಸಿದ್ಧ ಎಂದು ಹೇಳಿದ್ದಾರೆ.ಇಂದು

ಭೂಮಿಯಿಂದ ಬರುತ್ತಿದೆ ಮಿಥೇನ್‌ ಗ್ಯಾಸ್‌, ಬೆಂಕಿ: ಬೆಚ್ಚಿದ ಜನರು

 ಬೆಂಗಳೂರು: ಬೆಳ್ಳಂದೂರು ಕೆರೆಯ ಬೆಂಕಿ ತಣ್ಣಗಾಗುವಷ್ಟರಲ್ಲೇ ಲಕ್ಷ್ಮೀಪುರ ಕಲ್ಲು ಗಣಿಗಾರಿಕೆ ಕ್ವಾರಿ ಬಳಿ ಭೂಮಿಯಿಂದ ಉಗುಳುತ್ತಿರುವ ಬೆಂಕಿ ನಗರವನ್ನು ಬೆಚ್ಚಿ ಬೀಳಿಸಿದೆ.ಆನೇಕಲ್‌ ತಾಲೂಕಿನ ಲಕ್ಷ್ಮೀಪುರದಲ್ಲಿ ನೆಲದ ಪದರದೊಳಗೆ ಮಿಥೇನ್‌ ಅನಿಲ ಹರಡಿದ್ದು, ನೆಲ ಬಿರುಕು ಬಿಟ್ಟಿರುವ ಕಡೆಗಳೆಲ್ಲಾ ಗ್ಯಾಸ್‌ ಹೊರಬಂದು ಬೆಂಕಿಯಾಗುತ್ತಿದೆ. ಇದರಿಂದ ಆತಂಕಗೊಂಡಿರುವ ಸ್ಥಳೀಯರು ಹೊರಬರುತ್ತಿರುವ ಅನಿಲಕ್ಕೆ ಬೆಂಕಿ ಹಚ್ಚಿ ಅದನ್ನೇ ಅಡುಗೆ ಒಲೆ ಮಾಡಿಸಿಕೊಂಡು ಅನ್ನ

ಮೊದಲ ಪ್ರಯತ್ನದಲ್ಲೇ ಕೆಎಎಸ್ ಪಾಸ್ ಮಾಡಿದ್ದರು ಕಲ್ಲಪ್ಪ ಹಂಡಿಭಾಗ್


ಬೆಳಗಾವಿ: ಕುಗ್ರಾಮದಲ್ಲಿ ಹುಟ್ಟಿ ಬೆಳೆದಿದ್ದ ಕಲ್ಲಪ್ಪ ಹಂಡಿಭಾಗ್ ಅವರು ಮೊದಲ ಪ್ರಯತ್ನದಲ್ಲೇ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.ರಾಯಭಾಗ್ ತಾಲೂಕಿನ ಹಂಡಿಗುಂಡ್ ಎಂಬ ಗ್ರಾಮದಲ್ಲಿ ಕಲ್ಲಪ್ಪ ಅವರು ಜನಿಸಿದ್ದರು. ಬಡಕುಟುಂಬದಿಂದ ಮೇಲೆ ಬಂದಿದ್ದ ಕಪ್ಪಲ್ಲ ಅವರ ಪ್ರತಿಭೆ ಇಡೀ ರಾಜ್ಯದ ಜನತೆ ಗ್ರಾಮವನ್ನು ಗುರ್ತಿಸುವಂತೆ ಮಾಡಿತ್ತು.
ಬಿ.ಎಡ್ ಮಾಡಿದ್ದ ಕಲ್ಲಪ್ಪ ಅವರು 2006ರಲ್ಲಿ ಸರ್ಕಾರಿ ಶಿಕ್ಷಕನಾಗಿ ಆಯ್ಕೆಯಾಗಿದ್ದರು. 2010ರಲ್ಲಿ ಮೊದಲ ಪ್ರಯತ್ನದಲ್ಲೇ

Wednesday 6 July 2016

ಡ್ರೋನ್ ಪಡೆ ಹೊಂದಿದ ಪ್ರಥಮ ಪೊಲೀಸ್- ಕರ್ನಾಟಕ

 ಬೆಂಗಳೂರು, ಮೇ ೯: ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕ ಪೊಲೀಸರು ಡ್ರೋನ್ (ಚಾಲಕರಹಿತ ವಿಮಾನ) ಹೊಂದಿರುವ ಪಡೆ ಎನಿಸಿಕೊಂಡಿದ್ದು, ಕಳೆದ ತಿಂಗಳು ೧೨ ಡ್ರೋನ್‌ಗಳು ಇಲಾಖೆಗೆ ಸೇರ್ಪಡೆಗೊಂಡಿವೆ.ಮೊದಲ ಹಂತದ ಡ್ರೋನ್‌ಗಳನ್ನು ಈಗಾಗಲೇ ಪೊಲೀಸ್ ಪಡೆಗೆ ಸೇರ್ಪಡೆಗೊಳಿಸಲಾಗಿದ್ದು, ಕಾರ್ಯಾಚರಣೆ ಆರಂಭಗೊಂಡಿದೆ.ಡ್ರೋನ್‌ಗಳ ಕಾರ್ಯಾಚರಣೆಗೆ ೨೦ ಪೊಲೀಸರಿಗೆ ವಿಶೇಷ ತರಬೇತಿ ನೀಡಲಾಗಿದ್ದು, ಅವರಿಗೆ ಪ್ರತ್ಯೇಕ ಸವಾಲುಗಳನ್ನು ಎದುರಿಸುವ ಬಗ್ಗೆ

ವಿಶ್ವವಿಖ್ಯಾತ 139 ನೇ ಪುರಿ ಜಗನ್ನಾಥ ರಥಯಾತ್ರೆ ಆರಂಭ;


ಪುರಿ (ಒಡಿಶಾ):ಇಲ್ಲಿ ವಿಶ್ವವಿಖ್ಯಾತ 12ನೇ ಶತಮಾನದ ಜಗನ್ನಾಥ ಮಂದಿರದಲ್ಲಿ 139 ನೇ ಜಗನ್ನಾಥ ರಥಯಾತ್ರೆ  ಬುಧವಾರದಿಂದ ಆರಂಭವಾಯಿತು.ವಿಡಿಯೋ ನೋಡಿ ಬಲಭದ್ರ ಮತ್ತು ಸುಭದ್ರಾ ದೇವಿಯ ವಾರ್ಷಿಕ ಯಾತ್ರೆಯ ಮುಕ್ತಾಯದ ಅಂಗವಾಗಿ ಗುಡಿಚಾ ದೇವಸ್ಥಾನದಲ್ಲಿ  ವಿಜ್ರಂಭಣೆಯಿಂದ ರಥಯಾತ್ರೆ ನಡೆಯುತ್ತಿದೆ. ವಿಶ್ವಖ್ಯಾತಿಯ ರಥಯಾತ್ರೆಯನ್ನು ಕಣ್‌ ತುಂಬಿಕೊಳ್ಳಲು ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಪುರಿಗೆ ಆಗಮಿಸಿದ್ದಾರೆ. 9 ದಿನಗಳ ಕಾಲ

ಹಂಪಿ ವಿ.ವಿ.ಯಲ್ಲಿ ಸಂಶೋಧನಾ ಕಮ್ಮಟ


 ಹೊಸಪೇಟೆ: ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಯು.ಜಿ.ಸಿ. ಪ್ರಾಯೋಜಿತ ಮಹಿಳಾ ಅಧ್ಯಯನ ಕೇಂದ್ರ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಸೋಷಿಯಲ್ ಸೈನ್ಸ್ ರಿಸರ್ಚ್  ಪ್ರಾಯೋಜಕತ್ವದ ಹತ್ತು ದಿನಗಳ ಸಮಾಜ ವಿಜ್ಞಾನಗಳ ಸಂಶೋಧನಾ ವಿಧಾನದ ಕಮ್ಮಟ ಏರ್ಪಡಿಸಲಾಗಿತ್ತು.ಕಮ್ಮಟದಲ್ಲಿ ಪ್ರೊ. ವೈ.ಜೆ. ರಾಜೇಂದ್ರ ಅವರು ಕಾರ್ಯಾತ್ಮಕ ಸಂಶೋಧನೆ ಕುರಿತು ಹಾಗೂ ನಮ್ಮ ದೇಶದಲ್ಲಿ ಸಂವಿಧಾನಗಳ ಮಾಹಿತಿ ನೀಡಿದರು.ಸಮಾಜ ವಿಜ್ಞಾನ ಸಂಶೋಧನೆ ಯಲ್ಲಿ

ಸರಕಾರಿ ಶಾಲೆ ನೆಲಸಮಕ್ಕೆ ಮುಂದಾದ ಸೇನೆ: ಪ್ರತಿಭಟನೆ


 ಬೆಂಗಳೂರು: ಶತಮಾನ ಪೂರೈಸಿರುವ ಜೆ ಸಿ ನಗರದ ನಾಲ್ಕು ಸರಕಾರಿ ಶಾಲೆಗಳು ಹಾಗೂ ಪಿಯು ಕಾಲೇಜು ಕಟ್ಟಡ ನೆಮಸಮಗೊಳಿಸಲು ಸೇನಾ ಸಿಬ್ಬಂದಿ ಮುಂದಾದ ಪರಿಣಾಮ, ಇಲ್ಲಿ ವ್ಯಾಸಂಗ ಮಾಡುತ್ತಿರುವ 1200 ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.ಸೇನಾ ಸಿಬ್ಬಂದಿ ಯಾವಾಗ ಶಾಲೆ ನೆಲಸಮಗೊಳಿಸುವರೋ ಎಂಬ ಆತಂಕದಲ್ಲೇ ವಿದ್ಯಾರ್ಥಿಗಳು

ಅಂಚೆ ಮೂಲಕ ಮನೆಗೇ ಬರಲಿದೆ ಗಂಗಾಜಲ! ಕೇಂದ್ರದ ಹೊಸ ಯೋಜನೆ

  
 ನವದೆಹಲಿ: ಮನೆ ಮನೆಗೆ ಪತ್ರಗಳನ್ನು ಬಟವಾಡೆ ಮಾಡುವ ಪೋಸ್ಟ್‌ಮ್ಯಾನ್‌ಗಳು ಇನ್ನು ಮುಂದೆ ಗಂಗಾಜಲವನ್ನು ಮನೆಬಾಗಿಲಿಗೆ ಪೂರೈಕೆ ಮಾಡಲಿದ್ದಾರೆ. ಇ- ಕಾಮರ್ಸ್ ವೇದಿಕೆಯನ್ನು ಬಳಸಿಕೊಂಡು ಹರಿದ್ವಾರ, ಹೃಷಿಕೇಶಗಳಿಂದ ಜನರಿಗೆ ಗಂಗಾಜಲವನ್ನು ಪೂರೈಕೆ ಮಾಡಲು ಅಂಚೆ ಇಲಾಖೆಗೆ ಸೂಚಿಸಿದ್ದೇನೆ ಎಂದು ಮಾಹಿತಿ ಮತ್ತು ಸಂವಹನ ಸಚಿವ ರವಿಶಂಕರ್‌ ಪ್ರಸಾದ್‌ ಅವರು ಹೇಳಿದ್ದಾರೆ. ಅಂಚೆ ಇಲಾಖೆ ದೇಶದೆಲ್ಲೆಡೆ ತನ್ನ ಜಾಲವನ್ನು ಹೊಂದಿದೆ. ಮೊಬೈಲ್‌ ಫೋನ್‌

251 ರೂ. ಮೊಬೈಲ್‌ ಹೀಗಿದೆ ನೋಡಿ...


 ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ಜಗತ್ತಿನ ಅತಿ ಅಗ್ಗದ ಸ್ಮಾರ್ಟ್‌ ಫೋನ್‌ ಫ್ರೀಡಂ 251, ಮಾರುಕಟ್ಟೆಗೆ ಪ್ರವೇಶಿಸಲು ಸಿದ್ಧವಾಗಿದೆ. ಜು.7ರಿಂದ  ಗ್ರಾಹಕರಿಗೆ ದೊರಕಲಿದ್ದು, ಈ ಹಿನ್ನೆಲೆಯಲ್ಲಿ ಮೊಬೈಲ್‌ನ ಮೊದಲ ಚಿತ್ರಗಳು ಬಿಡುಗಡೆಯಾಗಿವೆ.

ಕಂಪನಿ ಪ್ರಕಾರ, ಫೋನ್‌ 1 ಜಿಬಿ ರ್ಯಾಮ್‌, 8 ಜಿಬ ಸ್ಟೋರೇಜ್‌, 4 ಇಂಚಿನ ಡಿಸ್ಪೆ$Éà, 3.2 ಮೆಗಾಪಿಕ್ಸೆಲ್‌ ಹಿಂಭಾಗದ ಕ್ಯಾಮೆರಾ ಹೊಂದಿದೆ. ಇದರಲ್ಲಿ 1450 ಎಮ್‌ಎಎಚ್‌ ಬ್ಯಾಟರಿ ಇದ್ದು, ಆ್ಯಂಡ್ರಾಯಿಡ್‌ ಕಿಟ್‌ಕ್ಯಾಟ್‌ ಆಪರೇಟಿಂಗ್‌ ಸಿಸ್ಟಂ ಹೊಂದಿದೆ. ಮೇಲ್ಮೋಟಕ್ಕೆ ಮೊಬೈಲ್‌ ಎಲ್ಲಾ ವರ್ಗದವನ್ನು ಸೆಳೆವಂತಿದ್ದು, ಮೊಬೈಲ್‌ನ ಕಪ್ಪು ಮತ್ತು ಬಿಳಿ ಬಣ್ಣದ ಫೋಟೋ ಬಿಡುಗಡೆ ಮಾಡಲಾಗಿದೆ. ಗ್ರಾಹಕರಿಗೆ ಪೂರೈಸಲು 2 ಲಕ್ಷ ಮೊಬೈಲ್‌ಗ‌ಳನ್ನು ರಿಂಗಿಂಗ್‌ ಬೆಲ್ಸ್‌ ತಯಾರು ಮಾಡಿಟ್ಟುಕೊಂಡಿದೆ. ಲಕ್ಕಿ ಡ್ರಾ ಮೂಲಕ ಪ್ರತಿ ರಾಜ್ಯದಲ್ಲಿ 10 ಸಾವಿರ ಮೊಬೈಲ್‌ ಡೆಲಿವರಿಗೆ ಗ್ರಾಹಕರನ್ನು ಆಯ್ಕೆ ಮಾಡಲು ಉದ್ದೇಶಿಲಾಗಿದೆ.

ಧಾರವಾಡ ಐಐಟಿ: 31ಕ್ಕೆ ಮೋದಿಯಿಂದ ಉದ್ಘಾಟನೆ?

ಧಾರವಾಡ: ತಾತ್ಕಾಲಿಕ ಕ್ಯಾಂಪಸ್‌ನಲ್ಲಿ ಆರಂಭಗೊಂಡಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಜು.31ರಂದು ಉದ್ಘಾಟನೆಗೊಳ್ಳುವುದು ಬಹುತೇಕ ಖಚಿತವಾಗಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ, ಧಾರವಾಡ ಐಐಟಿಗೆ ಮೊದಲ ವರ್ಷ 5 ವಿದ್ಯಾರ್ಥಿನಿಯರು ಸೇರಿ 120 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.ಜತೆಗೆ ಮೊದಲ ವರ್ಷದ ಬ್ಯಾಚ್‌ನಲ್ಲಿ ಧಾರವಾಡದ 5 ವಿದ್ಯಾರ್ಥಿಗಳಿಗೂ ತಮ್ಮೂರಿನ ಐಐಟಿಯಲ್ಲೇ

ಹೊಸ ಸ್ಪೀಕರ್‌: ಮೊದಲ ದಿನದ ಕಲಾಪ ಸುಸೂತ್ರ


 ಬೆಂಗಳೂರು: ನೂತನ ಸ್ಪೀಕರ್‌ ಆಗಿ ಕಾರ್ಯಭಾರ ವಹಿಸಿಕೊಂಡ ಕೆ.ಬಿ. ಕೋಳಿವಾಡ ಮೊದಲ ದಿನವೇ ಸುಸೂತ್ರ ಕಲಾಪ ನಡೆಸುವ ಮೂಲಕ ಗಮನ ಸೆಳೆದರು. ಬಿಡಿಎ ಬದಲಿ ನಿವೇಶನ ವಿಚಾರದಲ್ಲಿ ಧರಣಿ ಮುಂದುವರಿಸಿದ ಪ್ರತಿಪಕ್ಷ ಬಿಜೆಪಿ ಸದಸ್ಯರ ಮನವೊಲಿಸುವಲ್ಲಿ ಸ್ಪೀಕರ್‌ ಯಶಸ್ವಿಯಾದರು. ಮೈಸೂರಿನಲ್ಲಿ ಡಿಸಿಗೆ ಕಾಂಗ್ರೆಸ್‌ ನಾಯಕರು ಬೆದರಿಕೆ ಹಾಕಿದ ವಿಷಯ ಪ್ರಸ್ತಾವಿಸಿದ ಸಂದರ್ಭ ಮಾತಿನ ಚಕಮಕಿ ನಡೆದು ಎಲ್ಲ ಸದಸ್ಯರು ಎದ್ದು ನಿಂತರು. ಇದರಿಂದ ಸಿಡಿಮಿಡಿಗೊಂಡ

ಪಾವತಿ ಬ್ಯಾಂಕ್‌ ಬರ್ತಿದೆ, ದಾರಿ ಬಿಡಿ!

 
 ರಿಸರ್ವ್‌ ಬ್ಯಾಂಕ್‌ ಈಗಾಗಲೇ 11 ಪಾವತಿ ಬ್ಯಾಂಕುಗಳಿಗೆ ಲೈಸನ್ಸ್‌ ಕೊಟ್ಟಿದೆ. ಇನ್ನೊಂದು ವರ್ಷದೊಳಗೆ ಇವು ಆರಂಭವಾಗುತ್ತವೆ. ಆದರೆ, ಲೈಸನ್ಸ್‌ ಪಡೆದ 2 ಕಂಪೆನಿಗಳು ನಷ್ಟದ ಭೀತಿಯಿಂದ ಈಗಾಗಲೇ ಹಿಂದೆ ಸರಿದಿವೆ. ಹಾಗಿದ್ದರೆ ಪೇಮೆಂಟ್‌ ಬ್ಯಾಂಕುಗಳು ನಿಜಕ್ಕೂ ಜನರಿಗೆ ಅನುಕೂಲಕರವಾಗಿ ಪರಿಣಮಿಸಿ, ತಾವೂ ಲಾಭ ಮಾಡಿಕೊಂಡು, ಅಸ್ತಿತ್ವ ಉಳಿಸಿಕೊಳ್ಳಲಿವೆಯೇ? ಒಂದಷ್ಟು ಒಳನೋಟಗಳು ಇಲ್ಲಿವೆ.

ನಮ್ಮ ದೇಶದಲ್ಲಿ ಇನ್ನೊಂದು ವರ್ಷದಲ್ಲಿ ಪಾವತಿ ಬ್ಯಾಂಕುಗಳ ಶಕೆ ಆರಂಭವಾಗಲಿದೆ. ಭಾರತಕ್ಕೆ ಇದೊಂದು ನೂತನ ಪ್ರಯೋಗ. ಈ ನಿಟ್ಟಿನಲ್ಲಿ 11 ಸಂಸ್ಥೆಗಳಿಗೆ ಭಾರತೀಯ ರಿಸರ್ವ್‌ ಬ್ಯಾಂಕು ಈಗಾಗಲೇ ಪರವಾನಗಿ ಕೊಟ್ಟಿದೆ. ಈ ಸಂಸ್ಥೆಗಳು ಆದಿತ್ಯ ಬಿರ್ಲಾ ನೋವ, ಏರ್‌ಟೆಲ್‌, ಎಂ.ಕಾಮರ್ಸ್‌, ಚೋಳಮಂಡಲಂ, ಎಸ್‌.ಫಿನ್‌.ಪೇಟೆಕ್‌, ಎನ್‌.ಎಸ್‌.ಡಿ.ಎಲ್‌, ರಿಲಯನ್ಸ್‌, ಸನ್‌ ಫಾರ್ಮ, ದಿಲೀಪ್‌ ಸಂ Ì, ಟೆಕ್‌ ಮಹೀಂದ್ರಾ ಮತ್ತು ಎಂ.ಪೇಸಾ. ಇವೆಲ್ಲ ಖಾಸಗಿ ವಲಯದಲ್ಲಿವೆ. ಸರಕಾರಿ ವಲಯದ ಅಂಚೆ ಇಲಾಖೆ ಬಹಳ ವಿರೋಧಗಳ ನಡುವೆಯೂ ಅಂಗೀಕಾರ ಪಡೆದ ಇನ್ನೊಂದು ಸಂಸ್ಥೆ. ಈ ಸಂಸ್ಥೆಗಳಿಗೆ ಕೆಳಗಿನ ನಿಯಮಗಳ ಪ್ರಕಾರ ಬ್ಯಾಂಕಿಂಗ್‌ ರೆಗ್ಯುಲೇಷನ್‌ ಕಾನೂನು, ನಿಯಮ 22ರ ಪ್ರಕಾರ ಪರವಾನಗಿ ನೀಡಲಾಗಿದೆ.

1. ಈ ಸಂಸ್ಥೆಗಳು ಆರಂಭವಾದ ಐದು ವರ್ಷಗಳಲ್ಲಿ ಕನಿಷ್ಠ 100 ಕೋಟಿ ರೂ. ಬಂಡವಾಳ ಹೂಡಬೇಕು. ಪ್ರವರ್ತಕರ‌ ಬಂಡವಾಳ ಶೇ.40 ಇರಬೇಕು. ಇತರ ಷೇರುದಾರರು ಶೇ.10ವರೆಗೆ ಹೂಡಬಹುದು. ಅನಿವಾಸಿ ಭಾರತೀಯರಿಗೆ ಈ ಮಿತಿ ಶೇ.5.

2. ಈ ಬ್ಯಾಂಕುಗಳು ಸಾಲ ಅಥವಾ ಕ್ರೆಡಿಟ್‌ ಕಾರ್ಡ್‌ ಕೊಡುವಂತಿಲ್ಲ. ಕೇವಲ ಡಿಮಾಂಡ್‌ ಅಥವಾ ಉಳಿತಾಯ ಖಾತೆಗಳನ್ನು 1,00,000 ರೂ.ನ ಮಿತಿಯೊಳಗೆ (ಇದು ಡಿಐಸಿಜಿಸಿ ವಿಮೆಯ ಗರಿಷ್ಠ ಮೊತ್ತ) ತೆರೆಯಬಹುದು.

3. ಇವುಗಳ ಮುಖ್ಯ ಗಮನ ಹಣ ವರ್ಗಾವಣೆ ಹಾಗೂ ವ್ಯವಹಾರ ಪಾವತಿಗಳು. ತಮ್ಮ ಹೆಸರಿನಲ್ಲಿ ಪಾವತಿ ಬ್ಯಾಂಕು ಎಂದು ನಮೂದಿಸಬೇಕು.

4. ಮೂಲತಃ ಉಚ್ಚ ತಾಂತ್ರಿಕತೆ, ಕೋರ್‌ ಬ್ಯಾಂಕಿನೊಂದಿಗೆ ಕಾರ್ಯಾರಂಭ ಮಾಡಿ ಪಾವತಿಯ ಎಲ್ಲಾ ಪದ್ಧತಿಗಳನ್ನು ಪರಿಚಯಿಸಬೇಕು. ಅಂತ್ಯದಿಂದ ಅಂತ್ಯ ((End to end) ಸೌಲಭ್ಯಗಳಿಗೆ ಗಮನ ನೀಡಬೇಕು. ಶೇ.25 ಶಾಖೆಗಳು ಗ್ರಾಮೀಣ (ಜನಸಂಖ್ಯೆ 10,000ದಿಂದ ಕೆಳಗೆ) ಪ್ರದೇಶದಲ್ಲಿರಬೇಕು.

5. ತಮ್ಮ ಠೇವಣಿಯ ಶೇ.75ನ್ನು ಸರಕಾರಿ ಬಾಂಡ್‌ಗಳಲ್ಲಿ ಎಸ್‌ಎಲ್‌ಆರ್‌ ಆಗಿ ತೊಡಗಿಸಬೇಕು. ಸಿಆರ್‌ಆರ್‌ ಅನಂತರ ಉಳಿದ ಹಣವನ್ನು ಬ್ಯಾಂಕು ನಿರಖು ಠೇವಣಿಯಲ್ಲಿಯೂ ತೊಡಗಿಸಿಕೊಳ್ಳಬಹುದು. ವಿಮೆ, ಮ್ಯೂಚುವೆಲ್‌ ಫ‌ಂಡ್‌, ಇತರ ಬ್ಯಾಂಕುಗಳ ಗೃಹಸಾಲ ಇತ್ಯಾದಿಗಳನ್ನು ತಮ್ಮ ಗ್ರಾಹಕರಿಗೆ ನೇರವಾಗಿ ಒದಗಿಸಬಹುದು.

6. ಚಿಲ್ಲರೆ ಮಾರುಕಟ್ಟೆ ಆಧುನೀಕರಣಕ್ಕೆ ಆದ್ಯತೆ. ವಲಸೆ ಕಾರ್ಮಿಕರು, ಇತರ ಕಾರ್ಮಿಕರು, ಸಣ್ಣ ಉದ್ದಿಮೆದಾರರು, ಕೃಷಿಕರು ಇತ್ಯಾದಿ ಉಪೇಕ್ಷಿತ ಜನಾಂಗಕ್ಕೆ ಸೇವೆ ನೀಡಲು ಆದ್ಯತೆ.

7. ಎಲ್ಲ ಬ್ಯಾಂಕುಗಳ ತಮ್ಮ ಪ್ರತ್ಯೇಕ ಟ್ರೆಜರಿ, ಹಾನಿ ನಿರ್ವಹಣಾ ವ್ಯವಸ್ಥೆ, ಗ್ರಾಹಕರ ದೂರು ನಿರ್ವಹಣೆ ವಿಭಾಗಗಳನ್ನು ಹೊಂದಿರಬೇಕು. ಇತರ ಬ್ಯಾಂಕುಗಳೊಂದಿಗೆ ಅಥವಾ ಸೇವಾನಿರತ ಸಂಸ್ಥೆಗಳೊಂದಿಗೆ ಸಹಯೋಗ ಮಾಡಿಕೊಳ್ಳಬಹುದು.

8. ಹತ್ತು ವರ್ಷದ ಸಮರ್ಪಕ ಸೇವೆಯ ನಂತರ ಸಾರ್ವಕಾಲಿಕ ಬ್ಯಾಂಕಾಗಿ ಪರಿವರ್ತನೆಗೆ ಅರ್ಹತೆ ಬರುತ್ತದೆ. ಈ ಬ್ಯಾಂಕುಗಳು ಎಟಿಎಂ, ಡೆಬಿಟ್‌ ಕಾರ್ಡ್‌ ನೀಡಬಹುದು.

ಇಂದು ಭಾರತದಲ್ಲಿ ಬ್ಯಾಂಕುಗಳು ತಮ್ಮ ಒಟ್ಟು ವಹಿವಾಟಿನ ಶೇ.80ಕ್ಕಿಂತಲೂ ಹೆಚ್ಚಿನ ವಹಿವಾಟನ್ನು ಪಾವತಿ ಮುಖಾಂತರ ಮಾಡುತ್ತಿವೆ. ಆದರೆ ಅದರಿಂದ ಬರುವ ಆದಾಯವು ಒಟ್ಟು ಆದಾಯದ ಶೇ.5ಕ್ಕಿಂತಲೂ ಕಡಿಮೆ. ಎಟಿಎಂ, ಪಿಒಎಸ್‌ (point of sales), ಮೊಬೈಲ್‌ ಬ್ಯಾಂಕಿಂಗ್‌, ಅಂತರ್ಜಾಲ ಬ್ಯಾಂಕಿಂಗ್‌, ಡಿಜಿಟಲ್‌ ಬ್ಯಾಂಕಿಂಗ್‌ಗಳು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಶೀಘ್ರಗತಿಯಲ್ಲಿ ಅತೀ ಕಡಿಮೆ ವೆಚ್ಚದ ಪಾವತಿಗೆ ಇಲ್ಲಿ ಆದ್ಯತೆ.
ಒಂದು ಚೆಕ್‌ ಪಾವತಿಯ ಶೇ.50 ಖರ್ಚಿನಲ್ಲಿ ಒಂದು ಎಟಿಎಂ ಪಾವತಿ ಮಾಡಬಹುದು. ಅಂತರ್ಜಾಲ ಪಾವತಿಗೆ ತಗಲುವ ವೆಚ್ಚ ಕೇವಲ ಶೇ.4. ಡಿಜಿಟಲ್‌ ಮತ್ತು ಮೊಬೈಲ್‌ ಪಾವತಿಗೆ ಶೇ.2. ತಗಲುವ ಸಮಯ ಕೆಲ ನಿಮಿಷಗಳಿಂದ ಹೆಚ್ಚೆಂದರೆ 2 ಗಂಟೆ. ಗಾತ್ರ ಹೆಚ್ಚಿದಷ್ಟೂ ಹೆಚ್ಚುವ ತೇಲು ನಿಧಿ (Float fund)ಬ್ಯಾಂಕುಗಳ ಆದಾಯಕ್ಕೆ ಮೂಲಾಧಾರ. ದೇಶದ ಶೇ.80ಕ್ಕಿಂತಲೂ ಹೆಚ್ಚಿನ ಜನರಲ್ಲಿ ಇಂದು ಮೊಬೈಲ್‌ ಇರುವುದು ಈ ಎಲ್ಲ ಪಾವತಿಗಳನ್ನು ಸುಲಭವಾಗಿಸಲಿದೆ. ಪಾವತಿಗಳನ್ನು ಮಾಡುವುದು ಪ್ರತಿಯೊಬ್ಬನಿಗೂ ಅನಿವಾರ್ಯ. ಗ್ರಾಹಕರ ಸಂಖ್ಯೆ ಹೆಚ್ಚಿದಷ್ಟೂ ಪಾವತಿಗಳೂ ಹೆಚ್ಚುವುದರಿಂದ ಇವುಗಳ ಆಳ (potentia) ಅಗಾಧ. ಇದಕ್ಕಾಗಿಯೇ ಆದಿತ್ಯ ಬಿರ್ಲಾ ಸಂಸ್ಥೆ ಐಡಿಯಾದೊಂದಿಗೆ, ಮೆ.ಪೇಸ್ಸಾ ವೋಡಾಘೋನಿನೊಂದಿಗೆ, ರಿಲಯನ್ಸ್‌ ಸ್ಟೇಟ್‌ ಬ್ಯಾಂಕಿನೊಂದಿಗೆ, ಸನ್‌ ಫಾರ್ಮ ಪೇಟಿಎಂನೊಂದಿಗೆ, ಎನ್‌.ಎಸ್‌.ಡಿ.ಎಲ್‌ ಐಡಿಬಿಐ ಬ್ಯಾಂಕಿನೊಂದಿಗೆ ಸಹಯೋಗ ಮಾಡುತ್ತಿವೆ. 25 ಕೋಟಿ ಗ್ರಾಹಕರನ್ನು ಹೊಂದಿರುವ ಏರ್‌ಟೆಲ್‌ ಹಾಗೂ 2900 ಶಾಖೆಗಳೊಂದಿಗೆ ಮಾರ್ಚ್‌ ಒಳಗೆ ಕಾರ್ಯಾರಂಭಿಸುವ 23.8 ಕೋಟಿ ಗ್ರಾಹಕರನ್ನು ಹೊಂದಿರುವ ಅಂಚೆ ಇಲಾಖೆ ಏಕಾಂಗಿಯಾಗಿ ಮುನ್ನುಗ್ಗುತ್ತಿದೆ.

ಈಗಾಗಲೇ ಹೇಳುವಂತೆ ಪಾವತಿ ವ್ಯವಸ್ಥೆ ಲಾಭದಾಯಕವಲ್ಲ. ಲಾಭವಿರುವುದು ತೇಲು ನಿಧಿಯಲ್ಲಿ, ವಿಮೆಯಲ್ಲಿ, ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಮತ್ತು ಇತರ ಸೇವೆಯಲ್ಲಿ. ಈ ಸಂಸ್ಥೆಗಳು ರಿಸರ್ವ್‌ ಬ್ಯಾಂಕಿಗೆ ನೀಡಿದ ಕಾರ್ಯಸಾಧ್ಯತೆ (Viability) ದಾಖಲೆಯ ಪ್ರಕಾರ ಲಾಭ ಆರಂಭವಾಗಲು 3ರಿಂದ 5 ವರ್ಷಗಳೇ ಹಿಡಿಯಬಹುದು. ಈ ಕಾರಣಕ್ಕಾಗಿಯೇ ಚೋಳಮಂಡಲಂ, ದಿಲೀಪ್‌ ಸಾಂ Ì ಮತ್ತು ಟೆಕ್‌ ಮಹಿಂದ್ರಾ, ತಮ್ಮ ಪರವಾನಗಿಯನ್ನು ಹಿಂತಿರುಗಿಸಿವೆ. ಇನ್ನೆರಡು ಸಂಸ್ಥೆಗಳು ಈ ನಿಟ್ಟಿನಲ್ಲಿ ಯೋಚಿಸುತ್ತಿವೆ ಎಂದು ಸುದ್ದಿ. ಕಾರಣ, ತಮ್ಮ ಈಗಿನ ವಹಿವಾಟಿಗೆ ಇದರಿಂದ ಆರ್ಥಿಕ ಮುಗ್ಗಟ್ಟು ಬರಬಹುದು ಎಂಬುದು.

ಈ ಬ್ಯಾಂಕುಗಳಿಂದ ದೇಶಕ್ಕೆ ಏನು ಲಾಭ?
1. ದೇಶದಲ್ಲಿ ಶೇ.30ಕ್ಕಿಂತಲೂ ಹೆಚ್ಚಿನ ಪಾವತಿ ಈಗಲೂ ನಗದು ರೂಪದಲ್ಲಿ ನಡೆಯುತ್ತಿವೆ. ಇದು ಜಿಡಿಪಿಯ ಶೇ.13. ಮುಂದುವರಿದ ದೇಶಗಳಲ್ಲಿ ಇದರ ಪರಿಮಾಣ ಶೇ.7ರಿಂದ 8. ಅಂದರೆ ಜಿಡಿಪಿಯ ಶೇ.2.5ರಿಂದ 8.

2. ಭಾರತ ಒಂದೇ ಇಂದು ಜಗತ್ತಿನ ಶೇ.13 ನೋಟುಗಳನ್ನು ಮುದ್ರಿಸುತ್ತಿದೆ. ಇದಕ್ಕೆ ತಗಲುವ ವೆಚ್ಚ 8,000 ಕೋಟಿ ರೂ.ಗಿಂತಲೂ ಹೆಚ್ಚು.

3. ಎಲ್ಲ ಪಾವತಿಗಳೂ ಮುಖ್ಯವಾಹಿನಿಗೆ ಬಂದರೆ ಕಪ್ಪು ಹಣ ಮತ್ತು ಖೋಟಾ ನೋಟುಗಳ ಹಾವಳಿ ಬಹಳಷ್ಟು ಕಡಿಮೆಯಾಗುತ್ತದೆ.

4. ಭಾರತದಲ್ಲಿ ವಿಮೆ ಮತ್ತು ಮ್ಯೂಚುವಲ್‌ ಫ‌ಂಡ್‌ ಪ್ರಮಾಣ ಒಂದಂಕಿಯಲ್ಲೇ ಇದೆ. ಸಾಮಾಜಿಕ ಭದ್ರತೆಯ ದೃಷ್ಟಿಯಿಂದ ಇದನ್ನು ಶೇ.25ರಿಂದ 30ಕ್ಕೆ ಏರಿಸುವುದು ಅಗತ್ಯ.

5. ಶೇ.20ಕ್ಕಿಂತಲೂ ಹೆಚ್ಚಿನ ಹಣ ಭಾರತದಲ್ಲಿ ಇನ್ನೂ ಕಪಾಟಿನಲ್ಲಿದೆ. ಈ ಹಣವನ್ನು ಬ್ಯಾಂಕಿಂಗ್‌ ವ್ಯವಸ್ಥೆಗೆ ತಂದು ಉತ್ಪಾದಕ ರಂಗದಲ್ಲಿ ತೊಡಗಿಸಿಕೊಂಡರೆ ಮಾತ್ರ ದೇಶದ ಪ್ರಗತಿ ಸಾಧ್ಯ. ಪಾವತಿ ಬ್ಯಾಂಕುಗಳೂಂದಿಗೆ ಈಗಾಗಲೇ ಆಲೋಚಿಸಿರುವ ಸಣ್ಣ ಬ್ಯಾಂಕುಗಳು ಈ ಕೆಲಸ ಮಾಡಲು ಪೂರಕವಾಗಲಿವೆ.

6. ಆರ್ಥಿಕ ಸೇರ್ಪಡೆಯನ್ನು ಈಗಿರುವ ಬ್ಯಾಂಕುಗಳು ತಮ್ಮ ಇತರ ಸೇವೆಗಳೊಂದಿಗೆ ಪರಿಣಾಮಕಾರಿಯಾಗಿ ನಿರ್ವಹಿಸುವುದು ಅನುಮಾನಾಸ್ಪದ. ಅದಕ್ಕಾಗಿ ಈ ಪೂರಕ ವ್ಯವಸ್ಥೆ.

ಈ ವ್ಯವಸ್ಥೆ ಜಯಶಾಲಿಯಾಗಬೇಕಾದರೆ ಕೆಲವು ವಿಷಯಗಳು ಪ್ರಾಮುಖ್ಯವಾಗುತ್ತವೆ. ಇದರಲ್ಲಿ ಮುಖ್ಯ ಪಾತ್ರ ನ್ಯೂನತೆರಹಿತ ತಾಂತ್ರಿಕತೆ ಮತ್ತು ಸಂಪೂರ್ಣ ತಿಳಿವಳಿಕೆಯುಳ್ಳ ಗ್ರಾಹಕ ಸಂವೇದಿ ಸಿಬ್ಬಂದಿ ವರ್ಗ. ಈ ವ್ಯವಸ್ಥೆಯ ಅನುಕೂಲತೆಯನ್ನು ತೀರಾ ಕೆಳಮಟ್ಟದ ಜನಗಳಿಗೆ ತಿಳಿ ಹೇಳಿ ಅವರನ್ನು ವ್ಯವಸ್ಥೆಗೆ ಒಪ್ಪಿಸುವುದು ಒಂದು ಪಂಥಾಹ್ವಾನ. ಸರಕಾರ, ರಿಸರ್ವ್‌ ಬ್ಯಾಂಕು ಸಹ ಈ ಪ್ರಕ್ರಿಯೆಗೆ ಕಾನೂನು ಮಾರ್ಪಾಡು ಮತ್ತು ಅದರ ಅಧಿಕಾರಿಗಳ ಮುಖಾಂತರ ಸಮಯೋಚಿತ ಬಾಹ್ಯ ಬೆಂಬಲ ನೀಡಿದರೆ ಮಾತ್ರ ಇದು ಸಾಧ್ಯ. ಎಲ್ಲ ಅಂದುಕೊಂಡಂತೆ ನಡೆದರೆ ಈ ಪ್ರಯೋಗ ಒಂದು ಆರ್ಥಿಕ ಕ್ರಾಂತಿಗೆ ಸಾಕ್ಷಿಯಾಗಬಹುದು.

ಪೇಮೆಂಟ್‌ ಬ್ಯಾಂಕ್‌ಗಳ ತಾಂತ್ರಿಕತೆ
1. ಇ.ಕಾಮರ್ಸ್‌ ವೇದಿಕೆಯ ಮೂಲಕ ಮೊಬೈಲ್‌ ವ್ಯಾಲೆಟ್‌. ರೀಚಾರ್ಜ್‌, ಡಿಜಿಟಲ್‌ ಇತ್ಯಾದಿ ಪಾವತಿ ಪದ್ಧತಿ.
2. ಸ್ಮಾರ್ಟ್‌ ಪೋನ್‌ ಇಲ್ಲದೆಯೂ ಹಣ ವರ್ಗಾವಣೆ ಯಾ ಪಾವತಿ ಮಾಡಲು ಕ್ಯೂ.ಆರ್‌. ಕಾರ್ಡ್‌ಗಳು.
3. ಫಿನ್‌. ಚೆಕ್‌. ಕಂಪನಿಗಳೊಂದಿಗೆ ಬ್ಯಾಂಕಿನಿಂದ ನೇರ ಹಣ ವರ್ಗಾವಣೆಗೆ ಕ್ರೋಡೀಕೃತ ಮತ್ತು ಮಾಸಿದ ((Obfuscat) ಸಂದೇಶ ಪದ್ಧತಿ.
4ಎಸ್‌.ಎಫ್.ಸಿ. ವ್ಯವಸ್ಥೆಯಲ್ಲಿ ವಾಸ್ತವಿಕ ಮೇಘಾಧಾರಿತ (Virtual card in cloud) ಸಂಪರ್ಕ ರಹಿತ ಕಾರ್ಡು ಮತ್ತು ಮೊಬೈಲ್‌ ಪಾವತಿ. ಆರ್ಥಿಕ ಗೌಪ್ಯತೆ ಕಾಪಾಡುವ ಪ್ರತ್ಯೇಕ ಗುರುತಿನ ಪಾಸ್‌ವರ್ಡ್‌ ವ್ಯವಸ್ಥೆ.

ಈ ಪೂರ್ತಿ ವ್ಯವಹಾರಗಳು 2005ರ ಬ್ಯಾಂಕಿಂಗ್‌ ಒಂಬಡ್ಸ್‌ ಮನ್‌ ವ್ಯವಸ್ಥೆಯೊಳಗೆ ಬರುತ್ತವೆ. ಅಂದರೆ ಗ್ರಾಹಕನಿಗೆ ಕೊರತೆ ನಿವಾರಣೆ ವೇದಿಕೆಯೂ ಲಭ್ಯವಿದೆ. ಆದರೆ, ಈ ಬ್ಯಾಂಕುಗಳು ಈಗಿನ ಬ್ಯಾಂಕುಗಳಿಗೆ ಪೈಪೋಟಿ ನೀಡುವುದರಿಂದ, ಅವುಗಳ ಪ್ರತಿಕ್ರಿಯೆಯನ್ನು ಕಾದು ನೋಡಬೇಕಾಗಿದೆ.

ವಿಜಯ್‌ ಮಲ್ಯಗೆ 4,000 ಕೋಟಿ ರೂ. ಮನ್ನಾ ಭಾಗ್ಯ?

ಹೊಸದಿಲ್ಲಿ: ಬ್ಯಾಂಕ್‌ಗಳಿಗೆ 9,000 ಕೋಟಿ ರೂ. ಸಾಲ ಪಾವತಿ ಮಾಡದೇ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ ಅವರಿಗೆ, ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ಶೀಘ್ರವೇ ಬರೋಬ್ಬರಿ 4,000 ಕೋಟಿ ರೂ. ಮೊತ್ತದ ಬಡ್ಡಿ ಮನ್ನಾ ಭಾಗ್ಯ ಕಲ್ಪಿಸುವ ಸಾಧ್ಯತೆ ಇದೆ. ಮಲ್ಯ ಅವರು ತಾವು ಮಾಡಿದ ಸಾಲದ ಮೊತ್ತ ಮತ್ತು ಅಲ್ಪ ಪ್ರಮಾಣದ ದಂಡವನ್ನು ಕಟ್ಟಿದರೆ, ಅವರೊಂದಿಗಿನ ಸಾಲ ವ್ಯವಹಾರವನ್ನು ಚುಕ್ತಾ ಮಾಡಲು ನಾವು ಸಿದ್ಧ ಎಂದು ಎಸ್‌ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅವರು ಸಂಸದೀಯ ಸಮಿತಿಗೆ ಮಾಹಿತಿ ನೀಡಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಮಲ್ಯ ಅವರು ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳಿಂದ 4,000 ಕೋಟಿ ರೂ.ಗೆ ಹೆಚ್ಚಿನ ಸಾಲ ಪಡೆದಿದ್ದಾರೆ. 2014ರಲ್ಲೇ ಈ ಸಾಲ ಮತ್ತು ಅದರ ಮೇಲಿನ ಬಡ್ಡಿಯ ಒಟ್ಟು ಮೊತ್ತ 6,963 ಕೋಟಿ ರೂ. ತಲುಪಿತ್ತು. ಕೆಲ ಸಮಯದ ಹಿಂದೆ ಬ್ಯಾಂಕ್‌ಗಳ ಒಕ್ಕೂಟ ಈ ಮೊತ್ತ 9,000 ಕೋಟಿ ರೂ. ತಲುಪಿದೆ ಎಂದಿದ್ದವು.
ಈ ನಡುವೆ ಸಾಲ ಮರುಪಾವತಿ ಮಾಡಲಾಗದೇ ವಿದೇಶಕ್ಕೆ ಪರಾರಿಯಾಗಿದ್ದ ಮಲ್ಯ ಒಮ್ಮೆಗೆ 4,400 ಕೋಟಿ ರೂ.ಗಳನ್ನು ಪಾವತಿ ಮಾಡುವ ಮೂಲಕ ಒನ್‌ಟೈಮ್‌ ಸೆಟ್ಲಮೆಂಟ್‌ ಮಾಡಿಕೊಳ್ಳುವ ಆಫ‌ರ್‌ ಅನ್ನು ಬ್ಯಾಂಕ್‌ಗಳಿಗೆ ನೀಡಿದ್ದರು. ಆದರೆ ಇದನ್ನು ಬ್ಯಾಂಕ್‌ಗಳು ತಿರಸ್ಕರಿಸಿದ್ದವು. ಆದರೆ ಇದೀಗ ಈ ಮೊತ್ತವನ್ನು ಮಲ್ಯ ಅವರು 4,850 ಕೋಟಿ ರೂ.ಗೆ ಏರಿಸಿದ್ದಾರೆ. ಮೂಲ ಹಣದ ಜೊತೆಗೆ 150 ಕೋಟಿ ರೂ. ಭಡ್ತಿ ಮತ್ತು ಪ್ರಕರಣ ಸಂಬಂಧ ಬ್ಯಾಂಕ್‌ಗಳು ಮಾಡಿದ್ದ ಕಾನೂನು ಸಲಹೆಯ ವೆಚ್ಚವನ್ನು ಪಾವತಿಸುವ ಪ್ರಸ್ತಾವವನ್ನು ಬ್ಯಾಂಕ್‌ಗಳ ಮುಂದೆ ಮಲ್ಯ ಇಟ್ಟಿದ್ದಾರೆ. ಅಂದರೆ ಅಂದಾಜು 9,000 ಕೋಟಿ ರೂ.ಸಾಲದ ಪೈಕಿ 5,000 ಕೋಟಿ ರೂ.ಪಾವತಿಸುವ ಇರಾದೆ ವ್ಯಕ್ತಪಡಿಸಿದ್ದಾರೆ. ಮಲ್ಯ ಅವರ ಯಾವುದೇ ಆಸ್ತಿಗಳೂ ಇತ್ತೀಚಿನ ದಿನಗಳಲ್ಲಿ ಹರಾಜೇ ಆಗದ ಕಾರಣ, ಪ್ರಕರಣವನ್ನು ಇನ್ನಷ್ಟು ದಿನ ಎಳೆಯುವ ಬದಲು, ಒನ್‌ಟೈಮ್‌ ಸೆಟ್ಲಮೆಂಟ್‌ಗೆ ಬ್ಯಾಂಕ್‌ಗಳು ಕೂಡಾ ಒಲವು ವ್ಯಕ್ತಪಡಿಸಿವೆ ಎನ್ನಲಾಗಿದೆ. ಹೀಗಾಗಿಯೇ ಮಲ್ಯ ಅವರ ಪ್ರಸ್ತಾಪದ ಕುರಿತು ಎಸ್‌ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅವರು ಸಂಸದೀಯ ಸಮಿತಿಗೆ ಮಾಹಿತಿ ನೀಡಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಲು ಅರುಂಧತಿ ನಿರಾಕರಿಸಿದ್ದಾರೆ.

'ಗಂಗಾ ಕಲ್ಯಾಣ' ರೂವಾರಿ ಜಿಗಜಿಣಗಿ

ವಿಜಯಪುರ: ಮೂರೂವರೆ ದಶಕಗಳಿಂದ ರಾಜಕಾರಣದಲ್ಲಿರುವ, ಐದು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ 'ಅಜಾತ ಶತ್ರು' ರಮೇಶ ಚಂದಪ್ಪ ಜಿಗಜಿಣಗಿ ಅವರಿಗೆ ಕೊನೆಗೂ ಕೇಂದ್ರ ಮಂತ್ರಿ ಸ್ಥಾನ ಒಲಿದು ಬಂದಿದೆ. ತುರ್ತು ಪರಿಸ್ಥಿತಿ ಸಮಯದಲ್ಲಿ ವಿದ್ಯಾರ್ಥಿ ನಾಯಕರಾಗಿ ಹೋರಾಡಿ, ರಾಜಕೀಯ ಪ್ರವೇಶ ಮಾಡಿದ ಜಿಗಜಿಣಗಿ ಅವರು ಚಿಕ್ಕೋಡಿ ಲೋಕಸಭೆ ಮೀಸಲು ಕ್ಷೇತ್ರದಿಂದ ಸತತ ಮೂರು ಬಾರಿ ಹಾಗೂ ವಿಜಯಪುರ ಮೀಸಲು ಕ್ಷೇತ್ರದಿಂದ ಸತತ ಎರಡನೇ ಬಾರಿ ಸಂಸದರಾಗಿದ್ದಾರೆ.1983ರಲ್ಲಿ ಮೊದಲ ಬಾರಿಗೆ ವಿಜಯಪುರ ಜಿಲ್ಲೆಯ ಬಳ್ಳೊಳ್ಳಿ ಮೀಸಲು ಕ್ಷೇತ್ರದಿಂದ ಜನತಾ ಪಕ್ಷದ ಶಾಸಕರಾಗಿ ಆಯ್ಕೆಯಾದ ಜಿಗಜಿಣಗಿ ಆನಂತರ

Tuesday 5 July 2016

ಪಠ್ಯಕ್ಕೆ ಅಳವಡಿಕೆಯಾದ ಮಾನವ ಹಕ್ಕು

 ಬೆಂಗಳೂರು: ಮಾನವ ಹಕ್ಕುಗಳ ಆಯೋಗದ ಎರಡು ವರ್ಷದ ಪ್ರಯತ್ನದ ಫಲವಾಗಿ ಮಾನವ ಹಕ್ಕುಗಳ ವಿಷಯವನ್ನು ಶಿಕ್ಷಣ ಇಲಾಖೆ ಪಠ್ಯಕ್ಕೆ ಅಳವಡಿಸಿದೆ ಎಂದು ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ತಿಳಿಸಿದ್ದಾರೆ.ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಟ್ರಸ್ಟ್ ಗಾಂಧಿಭವನದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಮಾನವ ಹಕ್ಕುಗಳ ಮಾಹಿತಿ ಕುರಿತಾದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಮಾನವ ಹಕ್ಕುಗಳ ಬಗ್ಗೆ ಅರಿವು ಇಲ್ಲ. ಇದಕ್ಕೆ ನಮ್ಮಲ್ಲಿನ ಶಿಕ್ಷಣ ವ್ಯವಸ್ಥೆ

ಗೋಮಾತೆಯ ರಕ್ಷಣೆಗೆ ನೋಡಲ್ ಅಧಿಕಾರಿ ನೇಮಿಸಿದ ಹರಿಯಾಣ

ಗುರ್ಗಾಂವ್: ಗೋ ಹತ್ಯೆ ಮತ್ತು ಗೋವುಗಳ ಕಳ್ಳಸಾಗಣೆಯ ಮೇಲೆ ನಿಗಾವಹಿಸಲು ಮತ್ತು ತಡೆಯಲು ಹರಿಯಾಣ ಸರ್ಕಾರ ಡಿಐಜಿ ದರ್ಜೆಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿದೆ.

ಹರಿಯಾಣ ಸರ್ಕಾರ ಗೋಸಂರಕ್ಷಣೆಗಾಗಿ ಹರಿಯಾಣ ಗೋವಂಶ ಸಂರಕ್ಷಣ ಮತ್ತು ಗೋಸಂವರ್ಧನ ಕಾಯ್ದೆಯನ್ನು ಜಾರಿಗೆ ತಂದಿತ್ತು. ಹರಿಯಾಣದ ಎಲ್ಲಾ ಜಿಲ್ಲೆಗಳಲ್ಲಿ ಗೋವುಗಳ ಕಳ್ಳಸಾಗಣೆ ಮತ್ತು ಗೋಹತ್ಯೆಯ ಮೇಲೆ ನಿಗಾವಹಿಸಲು ಗೋ ರಕ್ಷಾ ಆಯೋಗ ಸುಮಾರು 300 ತಂಡಗಳನ್ನು ರಚಿಸಿದೆ. ಈ ತಂಡದಲ್ಲಿ 60 ನಾನ್-ಗೆಜೆಟೆಡ್ ಅಧಿಕಾರಿಗಳು ಮತ್ತು 220 ಪೊಲೀಸರು ಸೇರಿದಂತೆ ಸ್ಥಳೀಯರು ಇದ್ದು, ಈ ತಂಡಗಳ ಉಸ್ತುವಾರಿಯನ್ನು ಭಾರತಿ ಅರೋರಾ ಅವರು ವಹಿಸಿಕೊಳ್ಳಲಿದ್ದಾರೆ.

ಹರಿಯಾಣ ಸರ್ಕಾರ 24 ಗಂಟೆಗಳ ಹೆಲ್ಪ್ ಲೈನ್ ಸಹ ಸ್ಥಾಪಿಸಿದ್ದು, ಗೋವುಗಳ ಕಳ್ಳಸಾಗಣೆ ಮತ್ತು ಗೋಹತ್ಯೆ ಕುರಿತು ಮಾಹಿತಿ ನೀಡಲು ಜನತೆಗೆ ಸೂಚಿಸಿದೆ. ಜನವರಿ 1 ರಿಂದ ಏಪ್ರಿಲ್ 30ರವರೆಗೆ ಪಂಜಾಬ್ ಗೋಹತ್ಯೆ ನಿಷೇಧ ಕಾಯ್ದೆ ಅನ್ವಯ 85 ಪ್ರಕರಣಗಳನ್ನು ದಾಖಲಿಸಲಾಗಿದ್ದು, 191 ಗೋವುಗಳನ್ನು ರಕ್ಷಿಸಲಾಗಿದೆ ಮತ್ತು 446 ಜನರನ್ನು ಬಂಧಿಸಲಾಗಿದೆ.

ರಂಜಾನ್ ಸಂದರ್ಭವಾಗಿರುವುದರಿಂದ ಗೋವುಗಳ ಹತ್ಯೆ ಮತ್ತು ಕಳ್ಳಸಾಗಣೆ ಹೆಚ್ಚುವ ಸಾಧ್ಯತೆ ಇದೆ. ಹಾಗಾಗಿ ಗೋರಕ್ಷಾ ದಳದ ಸದಸ್ಯರಿಗೆ ರಾತ್ರಿ ವೇಳೆಯಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಲಾಗಿದೆ ಎಂದು ಗೋ ರಕ್ಷಾ ಆಯೋಗದ ಅಧ್ಯಕ್ಷ ಭಾನಿ ರಾಮ್ ಮಂಗಲ್ ತಿಳಿಸಿದ್ದಾರೆ.

ಗುರುಗ್ರಹದ ಕಕ್ಷೆ ಸೇರುತ್ತಿರುವ ಜುನೋ

 ನಾಸಾದ ಮಹತ್ವಾಕಾಂಕ್ಷೆಯ ಸೌರಶಕ್ತಿ ಚಾಲಿತ ‘ಜುನೋ’ ಸ್ಪೇಸ್​ಕ್ರಾಫ್ಟ್ ಐದು ವರ್ಷಗಳ ಕಾಲ 280 ಕೋಟಿ ಕಿ.ಮೀ. ಪ್ರಯಾಣ ಮಾಡಿ ಜುಲೈ 4ರಂದು ಭಾರತೀಯ ಕಾಲಮಾನ ರಾತ್ರಿ 10.30ರ ಹೊತ್ತಿಗೆ ಗುರುಗ್ರಹದ ಕಕ್ಷೆಗೆ ಸೇರ್ಪಡೆಯಾಗುತ್ತಿದೆ. ಜುಲೈ 5ರಂದು ಬೆಳಗ್ಗೆ 10.30ರ ವೇಳೆಗೆ ಈ ಪಕ್ರಿಯೆ ಪೂರ್ಣಗೊಳ್ಳುತ್ತದೆ. ಇದರ ನೇರಪ್ರಸಾರವನ್ನು ನಾಸಾ ಮಾಡುತ್ತಿದ್ದು, ಇದು ಮಂಗಳವಾರ (ಜು.5) ಬೆಳಗ್ಗೆ 9 ಗಂಟೆಗೆ ಆರಂಭವಾಗುತ್ತದೆ. ಸ್ಪೇಸ್ ಕ್ರಾಫ್ಟ್ ಒಂದರ ಸುದೀರ್ಘ ಪ್ರಯಾಣ ಇದಾಗಿದ್ದು, ಕಕ್ಷೆ ಸೇರ್ಪಡೆಗೊಂಡ ಬಳಿಕ ಒಂದು ವರ್ಷ ಕಾಲ ಗುರುಗ್ರಹಕ್ಕೆ ಪ್ರದಕ್ಷಿಣೆ ಹಾಕಲಿದೆ. ಆ ಸಂದರ್ಭದಲ್ಲಿ ಅದು ಗುರುಗ್ರಹದ ಸಮೀಪದ ಛಾಯಾಚಿತ್ರಗಳನ್ನು ತೆಗೆದು ನಾಸಾಕ್ಕೆ ರವಾನಿಸಲಿದೆ. 2018ರ ವೇಳೆಗೆ ಈ ಸ್ಪೇಸ್​ಕ್ರಾಫ್ಟ್ ಗುರುಗ್ರಹದ ಚಂದ್ರನಿಗೆ ಡಿಕ್ಕಿ ಹೊಡೆದು ನಾಶವಾಗುವ ಸಾಧ್ಯತೆ ಇದೆ.

ಗುರಿ ಮತ್ತು ಉದ್ದೇಶ

ಗುರು ಗ್ರಹದ ವಾತಾವರಣ ಬಹುತೇಕ ಜಲಜನಕ ಮತ್ತು ಹೀಲಿಯಂ ಮುಂತಾದವುಗಳಿಂದಲೇ ಕೂಡಿದೆ. ಮಂಗಳ ಗ್ರಹಕ್ಕೆ ಸಮೀಪದಲ್ಲಿರುವ ಈ ಗ್ರಹ, ಸೌರ ಮಂಡಲದ ಐದನೇ ಗ್ರಹವಾಗಿದೆ. ಗುರುಗ್ರಹದ ಕಕ್ಷೆ ಸೇರುವ ಜುನೋ ಸ್ಪೇಸ್​ಕ್ರಾಫ್ಟ್ ಆ ಗ್ರಹದಲ್ಲಿ ನೀರಿನ ಅಂಶ ಎಷ್ಟಿದೆ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡಲಿದೆ. ಸೌರ ಮಂಡಲ ರಚನೆ ಹಾಗೂ ಗುರುಗ್ರಹದ ರಚನೆ ಹೇಗಾಯ್ತು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಸ್ಪೇಸ್​ಕ್ರಾಫ್ಟ್ ಕಳುಹಿಸುವ ಚಿತ್ರ ಹಾಗೂ ದತ್ತಾಂಶಗಳು