Wednesday 13 July 2016

31ಕ್ಕೆ ಧಾರವಾಡ ಐಐಟಿ ಉದ್ಘಾಟನೆ, ಆ.1ರಿಂದ ತರಗತಿಗಳು ಆರಂಭ

  
ಧಾರವಾಡ: ರಾಜ್ಯದ ಮೊದಲ ಐಐಟಿಯು ಜು.31ಕ್ಕೆ ಉದ್ಘಾಟನೆಗೊಳ್ಳಲಿದ್ದು, ಆಗಸ್ಟ್‌ 1ರಿಂದ ತರಗತಿಗಳು ಆರಂಭವಾಗಲಿವೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್‌ ಐಐಟಿಗೆ ಚಾಲನೆ ನೀಡಲಿದ್ದಾರೆ.ಧಾರವಾಡ ಹೈಕೋರ್ಟ್‌ ಸಮೀಪದಲ್ಲಿರುವ ವಾಲಿ¾ ಕಟ್ಟಡದಲ್ಲಿ ತಾತ್ಕಾಲಿಕ ಕ್ಯಾಂಪಸ್‌ ಕಾರ್ಯನಿರ್ವಹಿಸಲಿದೆ. ಆರಂಭದಲ್ಲಿ
ಕಂಪ್ಯೂಟರ್‌ ವಿಜ್ಞಾನ, ಮೆಕಾನಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ವಿಷಯಗಳ ಅಧ್ಯಯನ ಈ ಕ್ಯಾಂಪಸ್‌ನಲ್ಲಿ ನಡೆಯಲಿದೆ.

ಆಗಸ್ಟ್‌ 1ರಿಂದ ತರಗತಿಗಳು ಆರಂಭವಾಗಲಿದ್ದು, 120ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ. ಇದಕ್ಕಾಗಿ ಬೇಕಾದ ಸಿದ್ಧತೆಗಳನ್ನು ಜು.15ರೊಳಗೆ ಸಿದ್ಧಪಡಿಸಲು ಕೇಂದ್ರ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ಅದರಂತೆ ಜಿಲ್ಲಾಡಳಿತ ಎಲ್ಲ ತಯಾರಿಯನ್ನು ಮಾಡಿಕೊಂಡಿದೆ. ಜಿಲ್ಲಾಡಳಿತ ಕೈಗೊಂಡಿರುವ ಸಿದ್ಧತೆ ಪರಿಶೀಲಿಸಲು ಜು.16ರಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಧಾರವಾಡಕ್ಕೆ ಭೇಟಿ ನೀಡಲಿದ್ದಾರೆ.

ಮೋದಿ ಬರುತ್ತಿಲ್ಲ: ಸಚಿವ ಜಾವಡೇಕರ್‌ ಅವರಿಂದ ಐಐಟಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಈ ಮುಂಚೆ ಪ್ರಧಾನಿ ಅವರನ್ನು ಉದ್ಘಾಟನೆಗೆ ಕರೆಯಿಸಲು ಯೋಚಿಸಲಾಗಿತ್ತು. ಆದರೆ ಇದು ತಾತ್ಕಾಲಿಕ ಕ್ಯಾಂಪಸ್‌ ಆಗಿರುವುದರಿಂದ ಇದರ ಬದಲಿಗೆ ಖಾಯಂ ಕ್ಯಾಂಪಸ್‌ನ ಭೂಮಿ ಪೂಜೆಗೆ ಕರೆಯಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶೀಘ್ರದಲ್ಲೇ 1400 ಕೋಟಿ ರೂ. ವೆಚ್ಚದಐಐಟಿ ಶಾಶ್ವತ ಕ್ಯಾಂಪಸ್‌ನ ಕಟ್ಟಡ ಕಾಮಗಾರಿಗಳ ಭೂಮಿಪೂಜೆ ನಡೆಸಲಾಗುವುದು. ಆಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುವುದು. ರಾಜ್ಯ ಸರ್ಕಾರ ಐಐಟಿಯ ಭೂಮಿಯನ್ನು ಇನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿಲ್ಲ. ಅದು ನೀಡಿದ ಕೂಡಲೇ ಭೂಮಿ ಪೂಜೆ ನಡೆಸಲಾಗುವುದು ಎಂದು ಬಿಜೆಪಿ ಸಂಸದ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

No comments:

Post a Comment