Wednesday 13 July 2016

ಭಾರತ ಸರ್ಕಾರದಿಂದ 5.6 ಬಿಲಿಯನ್ ಡಾಲರ್ ಪರಿಹಾರ ಕೋರಿಕೆ


ನವದೆಹಲಿ: ಪೂರ್ವಾನ್ವಯವಾಗಿ ತೆರಿಗೆ ವಸೂಲಿಗಾಗಿ ಭಾರತ ಸರ್ಕಾರದಿಂದ 5.6 ಬಿಲಿಯನ್ (560 ಕೋಟಿ) (ಅಂದರೆ 37,615 ಕೋಟಿ ರೂಪಾಯಿಗಳು) ಅಮೆರಿಕನ್ ಡಾಲರ್​ಪರಿಹಾರವನ್ನು ಇಂಗ್ಲೆಂಡಿನ ಕೈರ್ನ್ ಎನರ್ಜಿ ಕೋರಿದೆ.ಪೂರ್ವಾನ್ವಯ ತೆರಿಗೆ ಕಾನೂನನ್ನು ಬಳಸಿ ತನ್ನ ಮೇಲೆ 10,247 ಕೋಟಿ ರೂಪಾಯಿ ತೆರಿಗೆಯನ್ನು
ಏಕಪಕ್ಷೀಯವಾಗಿ ವಿಧಿಸಿದ್ದರಿಂದ ತನಗೆ ಆಗಿರುವ ನಷ್ಟವನ್ನು ಭಾರತ ಸರ್ಕಾರ ಭರಿಸಿಕೊಡಬೇಕು ಎಂದು ಕೈರ್ನ್ ನೋಟಿಸ್ ನೀಡಿದೆ.

ಇಂಗ್ಲೆಂಡ್-ಭಾರತ ಹೂಡಿಕೆ ಒಪ್ಪಂದವನ್ನು ಬಳಸಿಕೊಂಡು ಎಡಿನ್​ಬರೋ ಮೂಲದ ಕೈರ್ನ್ ಎನರ್ಜಿ ಸಂಸ್ಥೆಯು ತೆರಿಗೆ ಬೇಡಿಕೆ ವಿರುದ್ಧ ಏಳು ವರ್ಷಗಳ ಹಿಂದೆ ಖಟ್ಲೆ ಹೂಡಿದ್ದು ವಿವಾದ ಇತ್ಯರ್ಥಕ್ಕೆ ತುರ್ತಾಗಿ ಪಂಚಾಯ್ತಿ ನಡೆಸುವಂತೆ ಆಗ್ರಹಿಸಿದೆ. 2006ರಲ್ಲಿ ತನ್ನ ಭಾರತೀಯ ಆಸ್ತಿಪಾಸ್ತಿಯನ್ನು ಹೊಸ ಕಂಪೆನಿ ಕೈರ್ನ್ ಇಂಡಿಯಾಕ್ಕೆ ವರ್ಗಾವಣೆ ಮಾಡಿದ್ದಕ್ಕಾಗಿ ‘ಕ್ಯಾಪಿಟಲ್ ಗೈನ್ ಟ್ಯಾಕ್ಸ್’ (ಧನಲಾಭ ತೆರಿಗೆ) ಹೊರಿಸಿದ್ದು ಅನ್ಯಾಯ. ಇದು ಕೇವಲ ಆಂತರಿಕ ವ್ಯವಹಾರವಾಗಿದ್ದು, ಯಾವುದೇ ಷೇರುಗಳು ಅಥವಾ ಆಸ್ತಿಪಾಸ್ತಿಯನ್ನು ಮೂರನೇ ವ್ಯಕ್ತಿಗೆ ಯಾವುದೇ ಧನಲಾಭಕ್ಕಾಗಿ ಮಾರಾಟ ಮಾಡಿಲ್ಲ ಎಂದು ಕಂಪೆನಿ ಪ್ರತಿಪಾದಿಸಿದೆ.





No comments:

Post a Comment