Sunday 17 July 2016

ಪುದುಚೇರಿಯಲ್ಲಿ ಸ್ವಚ್ಛತೆ ಕಾಪಾಡಲು ‘ಸ್ವಚ್ಛ ಬಾಲ ಸೇನೆ’ ಸ್ಥಾಪನೆ


 ಪುದುಚೇರಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನವನ್ನು ಯಶಸ್ವಿಯಾಗಿಸಲು ಪುದುಚೇರಿ ಸರ್ಕಾರ ವಿನೂತನ ಪ್ರಯತ್ನಕ್ಕೆ ಕೈಹಾಕಿದೆ. ಪುದುಚೇರಿಯಲ್ಲಿ ಗಲೀಜು ಮಾಡುವವರ ಮೇಲೆ ನಿಗಾ ವಹಿಸಲು ‘ಸ್ವಚ್ಛ ಬಾಲ ಸೇನೆ’ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.ರಾಜ್ಯದಲ್ಲಿ ‘ಸ್ವಚ್ಛ ಬಾಲ ಸೇನೆ’ ಸ್ಥಾಪಿಸಲಾಗುವುದು, ಇದರಲ್ಲಿರುವ ಮಕ್ಕಳಿಗೆ ಹಳದಿ ಬಣ್ಣದ ವಿಷಲ್ ನೀಡಲಾಗುವುದು. ಈ ಮಕ್ಕಳು ರಸ್ತೆ ಬದಿಯಲ್ಲಿ ಮತ್ತು ಚರಂಡಿಗಳಿಗೆ ಕಸ
ಎಸೆಯುವವನ್ನು ಕಂಡರೆ ಸೀಟಿ ಹೊಡೆದು ಎಚ್ಚರಿಸಲಿದ್ದಾರೆ. ಜತೆಗೆ ಮಕ್ಕಳು ಬಯಲಲ್ಲಿ ಬಹಿರ್ದೆಸೆಗೆ ಹೋಗುವವರನ್ನೂ ಸಹ ಎಚ್ಚರಿಸಲಿದ್ದಾರೆ. ಇದು ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ಬರುತ್ತಿರುವ ವಿನೂತನ ಯೋಜನೆ ಎಂದು ಪುದುಚೇರಿಯ ಲೆ.ಗವರ್ನರ್ ಕಿರಣ್ ಬೇಡಿ ತಿಳಿಸಿದ್ದಾರೆ.

ಸ್ವಚ್ಛ ಬಾಲ ಸೇನೆಯಲ್ಲಿರುವ ಮಕ್ಕಳಿಗೆ ಪೊಲೀಸರು ನೆರವಾಗಲಿದ್ದಾರೆ. ಈ ಯೋಜನೆಯಿಂದ ಮಕ್ಕಳಲ್ಲಿ ಶುಚಿತ್ವದ ಕುರಿತು ಅರಿವು ಹೆಚ್ಚಾಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಪುದುಚೇರಿಯನ್ನು ಸ್ವಚ್ಛ ರಾಜ್ಯವಾಗಿ ರೂಪಿಸಲು ನೆರವಾಗಲಿದೆ. ಈ ಸಂಬಂಧ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರಿಗೆ ಮಾಹಿತಿ ನೀಡುತ್ತೇನೆ ಎಂದು ಕಿರಣ್ ಬೇಡಿ ತಿಳಿಸಿದ್ದಾರೆ.

No comments:

Post a Comment