Wednesday 13 July 2016

ಪಾಕ್​ಗೆ ಧನಸಹಾಯ ಕಡಿತ, ಅಮೆರಿಕದಲ್ಲಿ ಹೆಚ್ಚಿದ ಒತ್ತಡ



ವಾಷಿಂಗ್ಟನ್: ಭಯೊತ್ಪಾದನೆ ವಿರುದ್ಧ ಹೋರಾಟ ನಡೆಸುವುದಾಗಿ ಅಮೆರಿಕದಿಂದ ಆರ್ಥಿಕ ಸಹಾಯ ಪಡೆದು ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಆರೋಪ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಧನ ಸಹಾಯ ಕಡಿತ ಮಾಡಬೇಕೆಂದು ಅಮೆರಿಕದಲ್ಲಿ ಒತ್ತಡ ಹೆಚ್ಚುತ್ತಿದೆ.ಭಯೋತ್ಪಾದನೆ ವಿರುದ್ಧ ಪಾಕಿಸ್ತಾನದ ಧೋರಣೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಸಹನೆ ಕಡಿಮೆಯಾಗುತ್ತಿದೆ. ಪಾಕಿಸ್ತಾನಕ್ಕೆ ಧನಸಹಾಯ ಕಡಿತಗೊಳಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಪಾಕ್
ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಏಷ್ಯಾ ಮತ್ತು ಫೆಸಿಫಿಕ್ ರಾಷ್ಟ್ರಗಳ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಮತ್ತು ಸಂಸದ ಮ್ಯಾಟ್ ಸಾಲ್​ವುನ್ ತಿಳಿಸಿದ್ದಾರೆ.

ಪಾಕಿಸ್ತಾನಕ್ಕೆ ಧನಸಹಾಯ ನೀಡಬೇಕು ಎಂದು ಬೆಂಬಲಿಸುತ್ತಿರುವವರು, ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳಬೇಕು. ಅಮೆರಿಕದ ತೆರಿಗೆದಾರರ ಹಣವನ್ನು ಪಾಕ್​ಗೆ ನೀಡುವ ಕುರಿತು ಸ್ಪಷ್ಟನೆ ನೀಡಬೇಕು ಎಂದು ಸಂಸದ ಬ್ರಾಡ್ ಶೆರ್ಮನ್ ಪಾಕ್​ಗೆ ಧನಸಹಾಯ ನೀಡುವುದನ್ನು ವಿರೋಧಿಸಿದ್ದಾರೆ.

ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವುದಾಗಿ ತೋರಿಸಿಕೊಳ್ಳುತ್ತಿದೆ. ಪಾಕಿಸ್ತಾನ ತನ್ನ ನೀತಿಗಳನ್ನು ಬದಲಿಸಿಕೊಳ್ಳುತ್ತಿದೆ. ಭಯೋತ್ಪಾದನೆ ವಿರುದ್ಧ ಹೋರಾಡಲು ಪಾಕಿಸ್ತಾನಕ್ಕೆ ಒದಗಿಸುತ್ತಿರುವ ಶಸ್ತ್ರಾಸ್ತ್ರಗಳ ಸಮರ್ಪಕ ಬಳಕೆಯಾಗುತ್ತಿರುವ ಕುರಿತು ಅನುಮಾನವಿದೆ. ಆ ಶಸ್ತ್ರಾಸ್ತ್ರಗಳು ಭಾರತದ ವಿರುದ್ಧ ಬಳಕೆಯಾಗುವ ಸಾಧ್ಯತೆ ಇದೆ ಎಂದು ಭಯೋತ್ಪಾದನೆ ಕುರಿತ ಸಮಿತಿಯ ಹಿರಿಯ ಸದಸ್ಯ ಮತ್ತು ಸಂಸದ ವಿಲಿಯಮ್ ಕೆಟ್ಟಿಂಗ್ ಅಭಿಪ್ರಾಯ ಪಟ್ಟಿದ್ದಾರೆ.

ಪಾಕಿಸ್ತಾನವನ್ನು ಭಯೋತ್ಪಾದನೆಗೆ ಬೆಂಬಲಿಸುತ್ತಿರುವ ರಾಷ್ಟ್ರ ಎಂದು ಘೊಷಿಸುವ ಸಮಯ ಬಂದಿದೆ. ಹಕ್ಕಾನಿ ನೆಟ್​ವರ್ಕ್​ಗೆ ಪಾಕ್ ಗೂಢಚರ ಸಂಸ್ಥೆ ಐಎಸ್​ಐ ನೆರವು ನೀಡುತ್ತಿರುವುದು ಸಾಬೀತಾಗಿದೆ. ಅದೊಂದು ಭಯೋತ್ಪಾದಕ ಸಂಘಟನೆ ಎಂಬುದೂ ಸಹ ಎಲ್ಲರಿಗೂ ತಿಳಿದಿರುವ ವಿಷಯ. ಜತೆಗೆ ಪಾಕ್ ಮಿಲಿಟರಿ ಮತ್ತು ಐಎಸ್​ಐ ತಾಲಿಬಾನ್​ಗೆ ಅಗತ್ಯ ನೆರವು ನೀಡುತ್ತಿರುವುದೂ ಸಹ ಹಲವು ಸಂದರ್ಭದಲ್ಲಿ ಬಹಿರಂಗವಾಗಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿ ಜಲ್ಮಯ್ ಖಲೀಲ್ಜಾದ್ ತಿಳಿಸಿದ್ದಾರೆ.

ಅಮೆರಿಕದ ಹಲವು ಸಂಸದರು ಪಾಕಿಸ್ತಾನಕ್ಕೆ ಧನಸಹಾಯ ಮಾಡುವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ.

No comments:

Post a Comment