Wednesday 13 July 2016

ಸ್ವಾಗತಕ್ಕೆ ರಿಯೊ ಸಜ್ಜು, ಒಲಿಂಪಿಕ್ ಸಮಿತಿ ಘೋಷಣೆ


 ಬ್ರೆಸಿಲ್: ಅಗಸ್ಟ್ 5ರಿಂದ ಆರಂಭವಾಗಲಿರುವ ರಿಯೊ ಒಲಿಂಪಿಕ್ ಕ್ರೀಡಾಕೂಟಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಬ್ರೆಜಿಲಿಯಾ ನಗರಕ್ಕೆ ಆದರದ ಸ್ವಾಗತ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧಿಕೃತವಾಗಿ ಘೋಷಿಸಿದೆ.ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷೆ ನಾವಲ್ ಇಲ್ ಮೌತವಾಕೆಲ್ ಪ್ರತಿಕ್ರಿಯಿಸಿ, ಪ್ರವಾಸಿಗರು ಹಾಗೂ ಕ್ರೀಡಾಳುಗಳ ಸ್ವಾಗತಕ್ಕೆ ನಗರಗಳು ಸಿದ್ಧವಾಗಿವೆ. ಈಗಾಗಲೇ ಸ್ಥಳೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ನಿರ್ಧರಿತ ಸಮಯದಲ್ಲಿ ಪಂದ್ಯಗಳ
ಆಯೋಜನೆಗೆ ಯಾವುದೇ ಅಡೆತಡೆ ಇಲ್ಲದೆ ನಡೆಯಬೇಕೆಂದು ಸೂಚಿಸಿದ್ದೇನೆ ಎಂದು ತಿಳಿಸಿದರು.

ಬ್ರೆಜಿಲ್ ಜನತೆಗೆ ಅತಿಥಿಗಳನ್ನು ಯಾವರೀತಿ ನಡೆಸಿಕೊಳ್ಳಬೇಕು ಎನ್ನುವುದು ಚೆನ್ನಾಗಿ ಗೊತ್ತು. ಒಲಿಂಪಿಕ್ ವೇಳೆ ನಗರಕ್ಕೆ ಭೇಟಿ ನೀಡಿದ ಪ್ರವಾಸಿಗರು ಸಂಪೂರ್ಣ ತೃಪ್ತಿಗೊಳ್ಳುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಭರವಸೆ ನೀಡಿದರು.

ರಿಯೊ ಒಲಿಂಪಿಕ್ ಅಗಸ್ಟ್ 5ರಿಂದ ಆರಂಭವಾಗಲಿದ್ದು, ಅಗಸ್ಟ್ 21ಕ್ಕೆ ತೆರೆಬೀಳಲಿದೆ.

No comments:

Post a Comment