Wednesday 13 July 2016

ಟೆಸ್ಟ್‌ ಕ್ರಿಕೆಟ್‌ಗೆ ಟೇಲರ್‌ ವಿದಾಯ


ಕಿಂಗ್ಸ್‌ಟನ್‌ (ಪಿಟಿಐ):  ವೆಸ್ಟ್‌ ಇಂಡೀಸ್‌ ತಂಡದ ವೇಗಿ ಜೆರೋಮ್‌ ಟೇಲರ್‌ ಅವರು ಮಂಗಳವಾರ ಟೆಸ್ಟ್‌ ಕ್ರಿಕೆಟ್‌ ಬದುಕಿಗೆ ವಿದಾಯ ಹೇಳಿದ್ದಾರೆ. ಆದರೆ ಸೀಮಿತ ಓವರ್‌ಗಳ ಮಾದರಿ ಯಲ್ಲಿ ಅವರು ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.32 ವರ್ಷದ ಟೇಲರ್‌ ಅವರು 46 ಟೆಸ್ಟ್‌ ಪಂದ್ಯಗಳನ್ನಾಡಿದ್ದು 130 ವಿಕೆಟ್‌ ಉರುಳಿಸಿದ್ದಾರೆ. 2003ರಲ್ಲಿ ಶ್ರೀಲಂಕಾ ವಿರುದ್ಧ ಆಡುವ
ಮೂಲಕ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಟೇಲರ್‌ ಅವರು  ಈ ವರ್ಷದ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಪಂದ್ಯ ಆಡಿದ್ದರು.
ಗಾಯದಿಂದಾಗಿ  2009 ರಿಂದ 2014ರ ಅವಧಿಯಲ್ಲಿ  ಟೆಸ್ಟ್‌ ತಂಡದಲ್ಲಿ ಸ್ಥಾನ ಗಳಿಸಲು ವಿಫಲರಾಗಿದ್ದರು.

ಟೆಸ್ಟ್‌ನಲ್ಲಿ ಟೇಲರ್‌ ಸಾಧನೆ
ಪಂದ್ಯ                ವಿಕೆಟ್‌                   ಉತ್ತಮ (ಪಂದ್ಯ)                      ಸರಾಸರಿ
 46                   130                           95 ಕ್ಕೆ 9                           34.46  

5 ವಿಕೆಟ್‌            ರನ್‌                        ಗರಿಷ್ಠ              ಶತಕ             ಅರ್ಧಶತಕ
     4               856                         106                  1                   1
 
 

No comments:

Post a Comment