Wednesday 13 July 2016

ತೀರ್ಪಿನ ವಿರುದ್ಧ ಶ್ವೇತಪತ್ರ ಹೊರಡಿಸಿದ ಚೀನಾ



ಬೀಜಿಂಗ್ (ಪಿಟಿಐ): ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿ ನೀಡಿರುವ ತೀರ್ಪು ಅಲ್ಲಗಳೆದಿರುವ ಚೀನಾ, ತೀರ್ಪಿನ ವಿರುದ್ಧ ಶ್ವೇತಪತ್ರ ಹೊರಡಿಸಿದೆ.ದಕ್ಷಿಣ ಚೀನಾ ಸಮುದ್ರದ ಮೇಲಿನ ಚೀನಾದ ಹಕ್ಕು ಪ್ರತಿಪಾದನೆಗೆ ಕಾನೂನಿನ ಮಾನ್ಯತೆ ಇಲ್ಲ ಎಂದು ನ್ಯಾಯಮಂಡಳಿಯು ಮಂಗಳವಾರ ತೀರ್ಪು ನೀಡಿದೆ.ಚೀನಾ ಫಿಲಿಪ್ಪೀನ್ಸ್‌ನ ಸಾರ್ವಭೌಮ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿದ್ದು, ಸಮುದ್ರದಲ್ಲಿ ಕೃತಕ ದ್ವೀಪಗಳನ್ನು ನಿರ್ಮಿಸುವ
ಮೂಲಕ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದೆ ಎಂದು ನ್ಯಾಯಮಂಡಳಿ ತೀರ್ಪಿನಲ್ಲಿ ಹೇಳಿದೆ.

ಸುಮಾರು 2 ಸಾವಿರ ವರ್ಷಗಳಿಂದಲೂ ದಕ್ಷಿಣ ಚೀನಾ ಸಮುದ್ರ ಚೀನಾಕ್ಕೆ ಸೇರಿದ್ದು ಎಂದು ಶ್ವೇತಪತ್ರದ ಮೂಲಕ ಪ್ರತಿಪಾದಿಸಿರುವ ಚೀನಾ, ಫಿಲಿಪ್ಪೀನ್ಸ್‌ ಚೀನಾದ ಸಮುದ್ರ ಭಾಗವನ್ನು ಅತಿಕ್ರಮಣ ಮಾಡುತ್ತಿದೆ ಎಂದು ದೂರಿದೆ

No comments:

Post a Comment