Saturday 6 August 2016

Join Free GS session organised by KICA-Kiran Prakashan Pvt Ltd.


SSC CGL TIER-1 Exams students.. Join Free GS session organised by KICA-Kiran Prakashan Pvt Ltd. Limited Seats at Mukherjee Nagar. Call:9873358664.
https://goo.gl/maps/F5Xt9BV9Vx22

Sunday 17 July 2016

ಮ.ಪ್ರದೇಶದಲ್ಲಿ ದೇಶದಲ್ಲೇ ಮೊದಲ ಸಂತಸ ಇಲಾಖೆ



ಭೋಪಾಲ್: ದೇಶದಲ್ಲೇ ಮೊದಲನೆಯದು ಎಂಬ ಹೆಗ್ಗಳಿಕೆಯ ಸಂತಸ ಇಲಾಖೆಗೆ ಮಧ್ಯಪ್ರದೇಶ ಸರ್ಕಾರ ಶುಕ್ರವಾರ ಚಾಲನೆ ನೀಡಿದೆ. ಭೂತಾನ್, ಅಮೆರಿಕ ಮಾದರಿ ಯಲ್ಲಿ ಸಂತಸ ಖಾತೆಯನ್ನು ಆರಂಭಿಸಲಾಗಿದೆ. ಇದಕ್ಕೆ ಸಚಿವಾಲಯ ಇರುವುದಿಲ್ಲ. ಈ ಖಾತೆಯ ಮೂಲಕ ಆಧ್ಯಾತ್ಮಿಕ ಮತ್ತು ಜ್ಞಾನದ ಸಂತಸವನ್ನು ಅಳೆಯಲಿದ್ದೇವೆ ಎಂದು ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ. ಖಾತೆ ಆರಂಭ ಮಾಡಲು ಸಂಪುಟ ಅನುಮೋದನೆ ದೊರಕಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಅರುಣಾಚಲ ಸಿಎಂ ಆಗಿ ಪೆಮಾ ಖಂಡು ಪ್ರಮಾಣ ವಚನ




ಇಟಾನಗರ: ಶನಿವಾರ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದ ಪೆಮಾ ಖಂಡು ಭಾನುವಾರ ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.ಪೆಮಾ ಖಂಡು ಅವರೊಂದಿಗೆ ಉಪಮುಖ್ಯಮಂತ್ರಿಯಾಗಿ ಚೌನಾ ಮೇನ್ ಪ್ರಮಾಣ ವಚನ ಸ್ವೀಕರಿಸಿದರು.37 ವರ್ಷದ ಪೆಮಾ ಖಂಡು ದೇಶದ ಅತಿ ಕಿರಿಯ

ಇಂಡಸ್ ನೀರಿನ ಒಪ್ಪಂದ, ಹೇಗ್ ಕೋರ್ಟ್​ಗೆ ಪಾಕ್ ಮೇಲ್ಮನವಿ


  ನವದೆಹಲಿ: ಕೃಷ್ಣಗಂಗಾ ಮತ್ತು ರಟ್ಲೆ ಜಲವಿದ್ಯುತ್ ಯೋಜನೆಗಳ ಅನುಷ್ಠಾನ ಸಂಬಂಧ ಪಾಕಿಸ್ತಾನದೊಂದಿಗೆ ನಡೆದ 2 ದಿನಗಳ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಹೇಗ್​ನ ಶಾಶ್ವತ ಮಧ್ಯಸ್ಥಿಕೆಯ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.ಕೃಷ್ಣ ಗಂಗಾ ಮತ್ತು ರಟ್ಲೆ ಜಲವಿದ್ಯುತ್ ಯೋಜನೆಗಳ ಸಂಬಂಧ ಉಂಟಾಗಿರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಭಾರತದೊಂದಿಗೆ ಕಳೆದ ಎರಡೂವರೆ ವರ್ಷಗಳಿಂದ ನಡೆಸಿದ ಪ್ರಯತ್ನ ವಿಫಲವಾಗಿದೆ.

ಪುದುಚೇರಿಯಲ್ಲಿ ಸ್ವಚ್ಛತೆ ಕಾಪಾಡಲು ‘ಸ್ವಚ್ಛ ಬಾಲ ಸೇನೆ’ ಸ್ಥಾಪನೆ


 ಪುದುಚೇರಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನವನ್ನು ಯಶಸ್ವಿಯಾಗಿಸಲು ಪುದುಚೇರಿ ಸರ್ಕಾರ ವಿನೂತನ ಪ್ರಯತ್ನಕ್ಕೆ ಕೈಹಾಕಿದೆ. ಪುದುಚೇರಿಯಲ್ಲಿ ಗಲೀಜು ಮಾಡುವವರ ಮೇಲೆ ನಿಗಾ ವಹಿಸಲು ‘ಸ್ವಚ್ಛ ಬಾಲ ಸೇನೆ’ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.ರಾಜ್ಯದಲ್ಲಿ ‘ಸ್ವಚ್ಛ ಬಾಲ ಸೇನೆ’ ಸ್ಥಾಪಿಸಲಾಗುವುದು, ಇದರಲ್ಲಿರುವ ಮಕ್ಕಳಿಗೆ ಹಳದಿ ಬಣ್ಣದ ವಿಷಲ್ ನೀಡಲಾಗುವುದು. ಈ ಮಕ್ಕಳು ರಸ್ತೆ ಬದಿಯಲ್ಲಿ ಮತ್ತು ಚರಂಡಿಗಳಿಗೆ ಕಸ

ಗುಜರಾತ್​ನಲ್ಲಿ 4.7 ತೀವ್ರತೆಯ ಲಘು ಭೂಕಂಪ

 ನವದೆಹಲಿ: ದಕ್ಷಿಣ ಗುಜರಾತ್ ಸೇರಿದಂತೆ ಹಲವು ಭಾಗಗಳಲ್ಲಿ ಲಘು ಭೂಕಂಪ ಸಂಭವಿಸಿದ್ದು, ಅದೃಷ್ಟವಶಾತ್ ಇಲ್ಲಿಯವರೆಗೆ ಯಾವುದೇ ಸಾವುನೋವಿನ ವರದಿಯಾಗಿಲ್ಲ.ಭಾನುವಾರ ಮುಂಜಾನೆ 9.24ರ ಸಮಯದಲ್ಲಿ ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆಯ ಭೂಕಂಪ ದಾಖಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಸೂರತ್​ನಿಂದ 14 ಕಿ.ಮೀ

ಜಪಾನ್​ನಲ್ಲಿ 5 ಪಾಯಿಂಟ್ ತೀವ್ರತೆಯ ಭೂಕಂಪ


ಟೋಕಿಯೊ: ಜಪಾನ್​ನ ಇಬಾರಕಿ ಪ್ರದೇಶದಲ್ಲಿ ಭಾನುವಾರ ರಿಕ್ಟರ್ ಮಾಪಕದಲ್ಲಿ 5 ಪಾಯಿಂಟ್ ತೀವ್ರತೆಯ ಭೂಕಂಪ ಸಂಭವಿಸಿದೆ.ಜಪಾನ್ ಹವಾಮಾನ ಸಂಸ್ಥೆಯ ವರದಿ ಪ್ರಕಾರ ಇಬಾರಕಿಯಲ್ಲಿ ಕೇಂದ್ರ ಬಿಂದುವನ್ನು ಹೊಂದಿದ್ದ ಭೂಕಂಪವು ಟೋಕಿಯೋದ ಈಶಾನ್ಯ ಭಾಗ ಮತ್ತು ಫೆಸಿಫಿಕ್ ಸಾಗರದ ಅಂಚಿನವರೆಗೂ ಭೂಮಿಯನ್ನು ನಡುಗಿಸಿದೆ ಎಂದು